Kidney Stone: ಕಿಡ್ನಿಯಲ್ಲಿ ಕಲ್ಲು ಉಂಟಾದರೆ ಹೇಗೆ ಗೊತ್ತಾಗುತ್ತೆ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ!

Published : Aug 29, 2026, 05:57 PM IST

ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಾಗುವುದನ್ನು ಕೇಳುತ್ತಲೇ ಬರುತ್ತಿದ್ದೇವೆ. ಅಷ್ಟಕ್ಕೂ ಕಿಡ್ನಿಯಲ್ಲಿ ಕಲ್ಲಾಗುವುದು ಅಂದರೆ ಏನು? ಅದರ ಲಕ್ಷಣಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

PREV
16
ಕಿಡ್ನಿಯಲ್ಲಿ ಕಲ್ಲು

ಕಿಡ್ನಿಯಲ್ಲಿ ಕಲ್ಲುಗಳು ಉಂಟಾದಾಗ ಆರಂಭದಲ್ಲಿ ಯಾವುದೇ ದೊಡ್ಡ ಲಕ್ಷಣಗಳು ಕಾಣಿಸದೇ ಇರಬಹುದು. ಆದರೆ, ಈ ಕಲ್ಲುಗಳು ಮೂತ್ರನಾಳದ ಮೂಲಕ ಚಲಿಸಲು ಶುರುಮಾಡಿದಾಗ, ಸಹಿಸಲಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ.

26
ಕಿಡ್ನಿ ಸ್ಟೋನ್ ಆದ್ರೆ ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪಕ್ಕೆಲುಬುಗಳ ಕೆಳಗೆ ಬರುವ ತೀವ್ರ ನೋವಿನಿಂದ ಹಿಡಿದು ಮೂತ್ರದಲ್ಲಿನ ಬದಲಾವಣೆಗಳವರೆಗೆ ಇದರ ಪ್ರಮುಖ ಸೂಚನೆಗಳಾಗಿವೆ. ಕಿಡ್ನಿ ಸ್ಟೋನ್‌ನ ಮುಖ್ಯ ಲಕ್ಷಣಗಳೇನು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಅನ್ನೋದನ್ನು ಇಲ್ಲಿ ನೋಡೋಣ.

36
ಕಿಡ್ನಿ ಸ್ಟೋನ್ಸ್ ಅಂದ್ರೆ ಏನು?

ನಮ್ಮ ಮೂತ್ರದಲ್ಲಿ ಉಪ್ಪು ಮತ್ತು ಖನಿಜಾಂಶಗಳ (minerals) ಪ್ರಮಾಣ ಹೆಚ್ಚಾದಾಗ, ಅವು ಗಟ್ಟಿಯಾಗಿ ಕಲ್ಲುಗಳ ರೂಪ ಪಡೆಯುತ್ತವೆ. ಇವನ್ನೇ ಕಿಡ್ನಿ ಸ್ಟೋನ್ಸ್ ಅಂತ ಕರೆಯುತ್ತಾರೆ. ಚಿಕ್ಕ ಗಾತ್ರದ ಕಲ್ಲುಗಳು ಮೂತ್ರದ ಮೂಲಕ ಸುಲಭವಾಗಿ ಹೊರಹೋಗುತ್ತವೆ. ಆದರೆ, ದೊಡ್ಡ ಕಲ್ಲುಗಳು ಹೊರಹೋಗಲು ಕಷ್ಟಪಡಿಸುತ್ತವೆ. ಇದರಿಂದ ಮೂತ್ರ ವಿಸರ್ಜನೆಗೆ ಅಡ್ಡಿಯಾಗಿ, ತೀವ್ರವಾದ ನೋವು ಶುರುವಾಗುತ್ತದೆ.

46
ಪಕ್ಕೆಯಲ್ಲಿ ಬರುವ ನೋವನ್ನು ಗುರುತಿಸಿ

ಕಿಡ್ನಿಯಲ್ಲಿ ಕಲ್ಲಿದೆ ಎನ್ನುವುದರ ಪ್ರಮುಖ ಲಕ್ಷಣವೆಂದರೆ, ಪಕ್ಕೆಲುಬುಗಳ ಕೆಳಗೆ, ಅಕ್ಕಪಕ್ಕೆಯಲ್ಲಿ ಬರುವ ವಿಪರೀತ ನೋವು. ಈ ನೋವು ಅಲೆಗಳ ರೀತಿ ಬಂದು ಹೋಗುತ್ತಿರುತ್ತದೆ. ನಂತರ, ಇದು ಹೊಟ್ಟೆಯ ಕೆಳಭಾಗಕ್ಕೂ ಹರಡುತ್ತದೆ. ಕೆಲವರಲ್ಲಿ ನೋವಿನ ಜೊತೆಗೆ ವಾಕರಿಕೆ ಮತ್ತು ವಾಂತಿಯೂ ಕಾಣಿಸಿಕೊಳ್ಳಬಹುದು.

56
ಮೂತ್ರದಲ್ಲಿ ಕಾಣಿಸುವ ಪ್ರಮುಖ ಬದಲಾವಣೆಗಳು

ಕಿಡ್ನಿ ಸ್ಟೋನ್ಸ್ ಇದ್ದರೆ ಮೂತ್ರದಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಮೂತ್ರದಲ್ಲಿ ರಕ್ತದ ಅಂಶ ಸೇರಿಕೊಂಡು ಕಡು ಬಣ್ಣಕ್ಕೆ ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಖನಿಜಾಂಶಗಳು ಅಥವಾ ಹರಳುಗಳ (crystals) ಕಾರಣದಿಂದ ಮೂತ್ರವು ಕದಡಿದಂತೆ ಕಾಣಿಸಬಹುದು.

66
ತಕ್ಷಣವೇ ವೈದ್ಯರನ್ನು ಕಾಣಬೇಕಾದ ಲಕ್ಷಣಗಳು

ತೀವ್ರವಾದ ನೋವಿನ ಜೊತೆಗೆ ಜ್ವರ ಮತ್ತು ಚಳಿ ಕಾಣಿಸಿಕೊಂಡರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆಂದರೆ, ಕಲ್ಲಿನಿಂದ ಮೂತ್ರಕ್ಕೆ ಅಡ್ಡಿಯಾದ ಜಾಗದಲ್ಲಿ ಗಂಭೀರ ಸೋಂಕು (infection) ಉಂಟಾಗುವ ಸಾಧ್ಯತೆ ಇರುತ್ತದೆ. ಮೂತ್ರ ವಿಸರ್ಜಿಸಲು ಕಷ್ಟವಾಗುವುದು, ಪದೇ ಪದೇ ವಾಂತಿ, ವಿಪರೀತ ಜ್ವರ, ನಡುಕ ಮತ್ತು ಸಹಿಸಲಾಗದ ನೋವು ಇದ್ದರೆ, ಸ್ವಲ್ಪವೂ ತಡಮಾಡದೆ ತಜ್ಞ ವೈದ್ಯರ ಚಿಕಿತ್ಸೆ ಪಡೆಯಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories