ಮಾಪ್‌ ತುಂಬಾ ಗಲೀಜಾಗಿದ್ಯಾ? ಕೆಟ್ಟ ವಾಸನೆ ಬರುತ್ತಿದ್ಯಾ? ಸರಿಯಾಗಿ ಒಗೆಯುವ, ಒಣಗಿಸುವ ವಿಧಾನ ಇಲ್ಲಿದೆ

Published : Aug 29, 2026, 05:19 PM IST

How to clean a mop: ನೆಲ ಸ್ವಚ್ಛಗೊಳಿಸುವ ಮಾಪ್ ಗಲೀಜಾಗಿದ್ದರೆ, ಅದು ನೆಲ ಶುದ್ಧೀಕರಿಸುವ ಬದಲು ಬ್ಯಾಕ್ಟೀರಿಯಾ ಹರಡುತ್ತದೆ. ನಿಮ್ಮ ಮಾಪ್‌ನ ಆಯಸ್ಸು ಹೆಚ್ಚಿಸಲು, ಸ್ವಚ್ಛವಾಗಿರಿಸಲು ವಿವಿಧ ರೀತಿಯ ಮಾಪ್‌ ಹೇಗೆ ಸರಿಯಾಗಿ ಒಗೆಯಬೇಕು ಮತ್ತು ಒಣಗಿಸಬೇಕು ಎಂಬ ಮಾಹಿತಿ ಇಲ್ಲಿದೆ.

PREV
16
ಮಾಪ್ ಗಲೀಜಾಗಿದ್ರೆ ಮನೆಯೂ ಗಲೀಜು

ಮಾಪ್ ಗಲೀಜಾಗಿದ್ರೆ ಮನೆಯೂ ಗಲೀಜು
ನಿಮ್ಮ ಮನೆಯ ನೆಲವನ್ನು ಮಾಪ್ (Mop) ಮೂಲಕ ಒರೆಸುವಾಗ ಅದು ನಿಜವಾಗಿ ಸ್ವಚ್ಛವಾಗುತ್ತಿದೆಯೇ ಅಥವಾ ಬ್ಯಾಕ್ಟೀರಿಯಾಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತಿದೆಯೇ? ಗಲೀಜು ಮಾಪ್‌ನಿಂದ ನೆಲ ಒರೆಸುವುದು ಎಂದರೆ ಗಲೀಜು ನೀರನ್ನು ಮನೆತುಂಬಾ ಹರಡಿದಂತೆ ಎಂದು ಸ್ವಚ್ಛತಾ ತಜ್ಞ ಬ್ಲೇಕ್ ಫಾಫ್ ಎಚ್ಚರಿಸುತ್ತಾರೆ. ನಿಮ್ಮ ಮಾಪ್ ಹೇಗೆ ಸರಿಯಾಗಿ ಸ್ವಚ್ಛಗೊಳಿಸಬೇಕು ಮತ್ತು ನಿರ್ವಹಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..

26
ಯಾವಾಗ ಮತ್ತು ಏಕೆ ಸ್ವಚ್ಛಗೊಳಿಸಬೇಕು?

ಯಾವಾಗ ಮತ್ತು ಏಕೆ ಸ್ವಚ್ಛಗೊಳಿಸಬೇಕು?
ಮಾಪ್‌ನ ನೂಲುಗಳಲ್ಲಿ (Fibers) ಬ್ಯಾಕ್ಟೀರಿಯಾ, ಶಿಲೀಂಧ್ರ (Mold) ಮತ್ತು ಕೆಟ್ಟ ವಾಸನೆ ಮನೆಮಾಡುತ್ತವೆ. ಇವು ಅಲರ್ಜಿ ಅಥವಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರತಿ ಬಳಕೆಯ ನಂತರ: ಮಾಪ್ ಅನ್ನು ಚೆನ್ನಾಗಿ ನೀರಿನಿಂದ ತೊಳೆದು ಸಂಪೂರ್ಣವಾಗಿ ಒಣಗಲು ಬಿಡಬೇಕು.

ವಾರಕ್ಕೊಮ್ಮೆ: ಮಾಪ್ ಅನ್ನು ಆಳವಾಗಿ (Deep clean) ಸ್ವಚ್ಛಗೊಳಿಸಬೇಕು. ಮನೆಯಲ್ಲಿ ಪುಟ್ಟ ಮಕ್ಕಳು ಅಥವಾ ಸಾಕುಪ್ರಾಣಿಗಳಿದ್ದರೆ ಇನ್ನೂ ಬೇಗನೆ ಸ್ವಚ್ಛಗೊಳಿಸುವುದು ಉತ್ತಮ.

ಬದಲಾವಣೆ: ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ಮಾಪ್ ಹೆಡ್ ಅನ್ನು ಬದಲಾಯಿಸಬೇಕು.

36
1. ಒಗೆಯಬಹುದಾದ ಮಾಪ್ ಹೆಡ್‌ಗಳು (Washable Mop Heads)

1. ಒಗೆಯಬಹುದಾದ ಮಾಪ್ ಹೆಡ್‌ಗಳು (Washable Mop Heads)

ಇತ್ತೀಚಿನ ಮೈಕ್ರೋಫೈಬರ್ ಅಥವಾ ಹತ್ತಿಯ ಮಾಪ್‌ಗಳನ್ನು ವಾಷಿಂಗ್ ಮಷಿನ್‌ನಲ್ಲಿಯೂ ಒಗೆಯಬಹುದು.

ವಿಧಾನ: ಮೊದಲು ಅದರಲ್ಲಿ ಅಂಟಿಕೊಂಡಿರುವ ಕಸವನ್ನು ತೆಗೆಯಿರಿ. ಬಿಸಿ ನೀರು ಮತ್ತು ಡಿಟರ್ಜೆಂಟ್ ಬಳಸಿ ಮಷಿನ್‌ನಲ್ಲಿ ಒಗೆಯಿರಿ. ಆದರೆ ಫ್ಯಾಬ್ರಿಕ್ ಸಾಫ್ಟನರ್ ಬಳಸಬೇಡಿ, ಇದು ಮಾಪ್‌ನ ನೀರು ಹೀರಿಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಡೀಪ್ ಕ್ಲೀನ್: ಒಂದು ಬಕೆಟ್ ಬಿಸಿ ನೀರಿಗೆ ವಿನೆಗರ್ ಸೇರಿಸಿ (1:4 ಪ್ರಮಾಣ) 2 ಗಂಟೆಗಳ ಕಾಲ ಮಾಪ್ ಹೆಡ್ ಅನ್ನು ನೆನೆಸಿಡಿ. ನಂತರ ವಾಷಿಂಗ್ ಮಷಿನ್‌ನಲ್ಲಿ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ ಒಗೆಯಿರಿ. ಇದು ಜಿಡ್ಡು ಮತ್ತು ವಾಸನೆಯನ್ನು ಸಂಪೂರ್ಣವಾಗಿ ತೆಗೆಯುತ್ತದೆ.

46
2. ಸ್ಪಂಜಿನ ಮಾಪ್‌ಗಳು (Sponge Mops)

2. ಸ್ಪಂಜಿನ ಮಾಪ್‌ಗಳು (Sponge Mops)

ಇವುಗಳನ್ನು ವಾಷಿಂಗ್ ಮಷಿನ್‌ಗೆ ಹಾಕಬಾರದು, ಕೈಯಿಂದಲೇ ತೊಳೆಯಬೇಕು.

ವಿಧಾನ: ಬಿಸಿ ನೀರಿಗೆ ಸ್ವಲ್ಪ ಪಾತ್ರೆ ತೊಳೆಯುವ ಸೋಪ್ (Dish soap) ಹಾಕಿ ಅದರಲ್ಲಿ ಮಾಪ್ ಅನ್ನು ಅದ್ದಿ ತೊಳೆಯಿರಿ.

ಬ್ಯಾಕ್ಟೀರಿಯಾ ನಾಶ: ವಿನೆಗರ್ ಮಿಶ್ರಿತ ಬಿಸಿ ನೀರಿನಲ್ಲಿ 10 ರಿಂದ 20 ನಿಮಿಷ ನೆನೆಸಿಡಿ. ಹೆಚ್ಚು ಹೊತ್ತು ನೆನೆಸಿದರೆ ಸ್ಪಂಜ್ ಹಾಳಾಗಬಹುದು.

ಒಣಗಿಸುವುದು: ಚೆನ್ನಾಗಿ ಹಿಂಡಿ, ಬಿಸಿಲಿರುವ ಜಾಗದಲ್ಲಿ ಒಣಗಿಸಿ.

56
3. ಸ್ಪ್ರೇ ಮಾಪ್‌ಗಳು (Spray Mops)

3. ಸ್ಪ್ರೇ ಮಾಪ್‌ಗಳು (Spray Mops)

ಇವುಗಳಲ್ಲಿ ನೀರಿನ ಬಾಟಲ್ ಇರುವುದರಿಂದ ಅದರಲ್ಲಿ ಪಾಚಿ ಅಥವಾ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚು.

ವಿಧಾನ: ಬಾಟಲ್ ಅನ್ನು ವಿನೆಗರ್ ಮತ್ತು ಬಿಸಿ ನೀರಿನಿಂದ ತೊಳೆದು ಸಣ್ಣ ಬ್ರಷ್‌ನಿಂದ ಒಳಭಾಗವನ್ನು ಸ್ವಚ್ಛಗೊಳಿಸಿ.

ನಾಝಲ್ ಸ್ವಚ್ಛತೆ: ಸ್ಪ್ರೇ ಬರುವ ರಂಧ್ರ (Nozzle) ಬ್ಲಾಕ್ ಆಗಿದ್ದರೆ ಟೂತ್‌ಪಿಕ್ ಬಳಸಿ ಸ್ವಚ್ಛಗೊಳಿಸಿ. ಹೇರ್ ಡ್ರೈಯರ್ ಅಥವಾ ಫ್ಯಾನ್ ಬಳಸಿ ಬಾಟಲ್ ಒಳಗಿನ ತೇವಾಂಶವನ್ನು ಸಂಪೂರ್ಣವಾಗಿ ಒಣಗಿಸಿ.

66
ಹೇಗೆ ಇಡಬೇಕು?

ಹೇಗೆ ಇಡಬೇಕು?

ಹೆಚ್ಚಿನವರು ಮಾಡುವ ತಪ್ಪು ಎಂದರೆ ಮಾಪ್ ಅನ್ನು ಹಸಿಯಾಗಿರುವಾಗಲೇ ಬಕೆಟ್‌ನಲ್ಲಿ ಇಡುವುದು ಅಥವಾ ಕಪಾಟಿನಲ್ಲಿ ತುರುಕುವುದು.

ಹೆಡ್-ಅಪ್ (Head-up): ಮಾಪ್ ಅನ್ನು ಯಾವಾಗಲೂ ಅದರ ತಲೆಭಾಗ ಮೇಲಿರುವಂತೆ ಹ್ಯಾಂಗ್ ಮಾಡಿ. ಇದರಿಂದ ಗಾಳಿಯಾಡಿ ಅದು ಬೇಗನೆ ಒಣಗುತ್ತದೆ.

ನೆನಪಿರಲಿ: ಮಾಪ್ ಹಸಿಯಾಗಿದ್ದರೆ ಒಂದೇ ದಿನದಲ್ಲಿ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಹಾಗಾಗಿ ಸಂಪೂರ್ಣವಾಗಿ ಒಣಗಿದ ನಂತರವೇ ಅದನ್ನು ಒಳಗೆ ಇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories