Cool home without AC: ಬೇಸಿಗೆ ಬಂತು ಅಂದ್ರೆ ಸಾಕು, ಮನೆಯೊಳಗೆ ಬಿಸಿಲಿನ ತಾಪ ತಾಳಲಾರದೆ ಎಸಿ ಬಳಸಲೇಬೇಕು ಅಂತ ನಾವೆಲ್ಲರೂ ಅಂದುಕೊಂಡಿರ್ತೀವಿ. ಆದ್ರೆ, ವಿದ್ಯುತ್ ಬಿಲ್ ಗಗನಕ್ಕೇರುತ್ತೆ ಅಂತ ಚಿಂತೆ ಮಾಡ್ತಿದ್ದೀರಾ? ಹಾಗಾದ್ರೆ ಈ ಲೇಖನ ತಪ್ಪದೇ ಓದಿ.
ಬೇಸಿಗೆ ಕಾಲ ಬಂತೆಂದರೆ ಮನೆಯನ್ನು ತಂಪಾಗಿರಿಸುವುದೇ ಒಂದು ದೊಡ್ಡ ಸವಾಲು. ಹೆಚ್ಚಿನವರು ಎಸಿ ಬಳಸುತ್ತಾರೆ. ಆದರೆ ಅದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ. ಎಸಿ ಇಲ್ಲದೆಯೇ ಕಡಿಮೆ ಖರ್ಚಿನಲ್ಲಿ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 5 ಸೂಪರ್ ಐಡಿಯಾಗಳು.
26
1. ಏರ್ ಕೂಲರ್‌ಗಳು
ಇತ್ತೀಚಿನ ಏರ್ ಕೂಲರ್‌ಗಳು ಎಸಿಗಿಂತ ಕಡಿಮೆ ವಿದ್ಯುತ್ (ಸುಮಾರು 150 ರಿಂದ 300 ವ್ಯಾಟ್) ಬಳಸುತ್ತವೆ. ಇದರಲ್ಲಿರುವ 'ಹನಿಕೋಂಬ್ ಪ್ಯಾಡ್'ಗಳು ಮನೆಯನ್ನು ದೀರ್ಘಕಾಲ ತಂಪಾಗಿರಿಸುತ್ತವೆ. ಇವು ಇನ್ವರ್ಟರ್ ಮೇಲೂ ಕೆಲಸ ಮಾಡುವುದರಿಂದ ಕರೆಂಟ್ ಹೋದಾಗಲೂ ತಂಪು ನೀಡುತ್ತವೆ.
36
2. ಬಿದಿರಿನ ಪರದೆಗಳು
ಹಳೆಯ ಕಾಲದಿಂದಲೂ ಬಳಸುವ ಈ ನೈಸರ್ಗಿಕ ವಿಧಾನ ತುಂಬಾ ಪರಿಣಾಮಕಾರಿ. ಬಿದಿರಿನಿಂದ ಮಾಡಿದ ಪರದೆಗಳನ್ನು ಕಿಟಕಿ ಅಥವಾ ಬಾಲ್ಕನಿಗೆ ಹಾಕಿ. ಅವುಗಳ ಮೇಲೆ ಸ್ವಲ್ಪ ನೀರು ಚಿಮುಕಿಸಿದರೆ ಮನೆಗೆ ಬರುವ ಗಾಳಿ ತಂಪಾಗಿರುತ್ತದೆ ಮತ್ತು ಹಿತವಾದ ಸುಗಂಧ ಕೂಡ ಹರಡುತ್ತದೆ.
ಮನೆಯ ಮೇಲ್ಛಾವಣಿ (Terrace) ಬಿಸಿಯಾಗುವುದರಿಂದ ಮನೆಯೊಳಗೆ ತಾಪಮಾನ ಹೆಚ್ಚಾಗುತ್ತದೆ. ಟೆರೇಸ್ ಮೇಲೆ ಬಿಳಿ ಬಣ್ಣದ ಅಥವಾ ರಿಫ್ಲೆಕ್ಟಿವ್ ಪೇಂಟ್ ಮಾಡಿಸುವುದರಿಂದ ಸೂರ್ಯನ 80% ಶಾಖವು ವಾಪಸ್ ಹೋಗುತ್ತದೆ. ಇದರಿಂದ ಮನೆಯೊಳಗಿನ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತದೆ.
56
4. ಬಾಗಿಲು ಯಾವಾಗ ತೆರೆಯಬೇಕು?
ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಲು ಗಾಳಿಯ ಸಂಚಾರ ಮುಖ್ಯ. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಿಟಕಿ ಮತ್ತು ಪರದೆಗಳನ್ನು ಮುಚ್ಚಿಡಿ, ಇದರಿಂದ ಹೊರಗಿನ ಬಿಸಿ ಗಾಳಿ ಒಳಗೆ ಬರುವುದಿಲ್ಲ. ಬೆಳಗ್ಗೆ ಬೇಗ ಮತ್ತು ಸಂಜೆ ಸೂರ್ಯ ಮುಳುಗಿದ ಮೇಲೆ ಕಿಟಕಿಗಳನ್ನು ತೆರೆಯುವುದರಿಂದ ಮನೆಯಲ್ಲಿರುವ ಬಿಸಿ ಗಾಳಿ ಹೊರಹೋಗುತ್ತದೆ.
66
5. ಇಂಡೋರ್ ಪ್ಲಾಂಟ್ಸ್
ಮನೆಯೊಳಗೆ ಗಿಡಗಳನ್ನು ಬೆಳೆಸುವುದರಿಂದ ನೈಸರ್ಗಿಕವಾಗಿ ವಾತಾವರಣ ತಂಪಾಗಿರುತ್ತದೆ. ಗಿಡಗಳು ಹಬೆಯನ್ನು (Transpiration) ಹೊರಹಾಕುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ತಂಪು ಅನುಭವವಾಗುತ್ತದೆ. ಸ್ನೇಕ್ ಪ್ಲಾಂಟ್, ಅಲೋವೆರಾ ಮತ್ತು ಪೀಸ್ ಲಿಲ್ಲಿಯಂತಹ ಗಿಡಗಳು ಇದಕ್ಕೆ ಉತ್ತಮ ಆಯ್ಕೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.