ಇದು ಮುದ್ದೆ ಅಲ್ಲ, ಆನೆ ಲದ್ದಿ; ಈ ಮಹಿಳೆ ತಿನ್ನೋದು ನೋಡಿ, ದೃಷ್ಟಿ ಬಿದ್ದು, ಉಣ್ಣಬಾರದು; ಹಿಡಿ ಶಾಪ ಹಾಕಿದ ಜನರು

Published : Mar 13, 2026, 07:16 PM IST

Savitha Lokesh Yadav Video: ಆರು ಮೂಟೆ ರಾಗಿಯನ್ನು ಆರು ತಿಂಗಳಿಗೆ ಖಾಲಿ ಮಾಡಿದೆ. 12 ತಿಂಗಳೊಳಗಡೆ ರಾಗಿ 12 ಚೀಲ ಖಾಲಿ ಮಾಡ್ತೀನಿ, ನಿಮ್ಮ ಮನೆಯಲ್ಲಿ ರಾಗಿ ಇದ್ದರೆ ನಾನೇ ಖರೀದಿ ಮಾಡ್ತೀನಿ, ಯಾರಿಗೂ ಕೊಡಬೇಡಿ ಎಂದು ಸವಿತಾ ಲೋಕೇಶ್‌ ಯಾದವ್‌ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ. 

PREV
15
ಮುದ್ದೆ ಸೈಜ್‌ ನೋಡಿ ಹೆದರೋದ್ರು

ಐದರಿಂದ ಆರು ಮುದ್ದೆ ಆಗುವಷ್ಟು ಸೈಜ್‌ನ ಮುದ್ದೆಯನ್ನು ಅವರು ಒಂದು ಹೊತ್ತಿಗೆ ತಿನ್ನುತ್ತಾರಂತೆ. ಇದನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ. ಇದನ್ನು ನೋಡಿ ಅನೇಕರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ.

25
ಮುದ್ದೆ ನೀಟ್‌ ಆಗಿ ಮಾಡಿಲ್ಲ

ಮುದ್ದೆ ಮಾಡೋದು ಫಸ್ಟ್‌ ಕಲಿಯಿರಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು, ಈ ಮಹಾತಾಯಿಗೆ ದೃಷ್ಟಿ ಬಿದ್ದು, ಊಟ ತಿಂಡಿ ತಿನ್ನದಿರೋ ಹಾಗೆ ಆಗಲಿ, ಬುದ್ಧಿ ಕಲಿಯೋದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

35
ನೆಗೆಟಿವ್‌ ಕಾಮೆಂಟ್ಸ್‌ಗಳ ಸುರಿಮಳೆ

ಇವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ ತುಂಬೆಲ್ಲ ನೆಗೆಟಿವ್‌ ಕಾಮೆಂಟ್ಸ್‌ಗಳೇ ಇವೆ. ಸಕ್ರೇಬೈಲು ಬಿಡಾರದಲ್ಲಿ ಆನೆಗೆ ಕೊಡುವ ಮುದ್ದೆಯನ್ನು ತಿಂತೀರಾ, ವಿಡಿಯೋದಲ್ಲಿ ಮಾತ್ರ ಹೀಗೆ ತೋರಿಸೋದಲ್ಲ, ನಿಜವಾಗಿಯೂ ತಿಂದು ತೋರಿಸು ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.

45
ಇವೆಲ್ಲ ಲೈಕ್ಸ್‌, ಫಾಲೋವರ್ಸ್‌ಗೋಸ್ಕರ

ಸೋಶಿಯಲ್‌ ಮೀಡಿಯಾದಲ್ಲಿ ಲೈಕ್ಸ್‌, ವ್ಯೂಸ್‌ಗೋಸ್ಕರ ಕೆಲವರು ಏನು ಬೇಕಿದ್ರೂ ಮಾಡುತ್ತಾರೆ. ಈಗ ಸವಿತಾ ಲೋಕೇಶ್‌ ಯಾದವ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಊಟ ಮಾಡುವ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. 

55
ಕಾಮೆಂಟ್ಸ್‌ಗಳಿಂದಲೇ ಆದಾಯ

ಒಂದು ತಿಂಗಳಿಗೆ ಆಗುವಷ್ಟು ಊಟವನ್ನು ಅವರು ಒಂದು ಹೊತ್ತಿಗೆ ಊಟ ಮಾಡ್ತಾರೆ ಎಂದು ಅನೇಕರು ನೆಗೆಟಿವ್‌ ಮಾತನಾಡುತ್ತಾರೆ. ಇದನ್ನೇ ಅವರು ಬಂಡವಾಳ ಮಾಡಿಕೊಂಡು, ಫಾಲೋವರ್ಸ್‌ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಲೇ ಪ್ರಮೋಶನ್ಸ್‌ ಕೂಡ ಮಾಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories