ಹೀಗೆ ಮಾಡಿ.. ಮಳೆಗಾಲದಲ್ಲಿ ಹಾವುಗಳು, ಚೇಳುಗಳು ನಿಮ್ಮ ಮನೆ ಹತ್ರಕ್ಕೂ ಬರಲ್ಲ

Published : Jun 09, 2026, 11:45 AM IST

Home safety tips for monsoon: ಮಳೆಗಾಲದಲ್ಲಿ ವಿಷಜಂತುಗಳ ಕಾಟ ಹೆಚ್ಚಾಗಿರುತ್ತದೆ. ಬಿಲಗಳಿಗೆ ನೀರು ತುಂಬಿಕೊಳ್ಳುವುದರಿಂದ ಹಾವು, ಚೇಳು ಸುರಕ್ಷಿತ ಜಾಗ ಹುಡುಕುತ್ತಾ ನಮ್ಮ ಮನೆಗಳ ಕಡೆಗೆ ಮುಖ ಮಾಡುತ್ತವೆ. ಹಾಗಾದರೆ ಈ ಅಪಾಯಕಾರಿ ಜೀವಿಗಳು ಮನೆಯೊಳಗೆ ಬರದಂತೆ ತಡೆಯುವುದು ಹೇಗೆ? 

PREV
15
ಈ ಅಪಾಯಕಾರಿ ಜೀವಿಗಳನ್ನ ದೂರವಿಡುವುದು ಹೇಗೆ?

ಮಳೆಗಾಲದ ಜಿಟಿಜಿಟಿ ಮಳೆಯು ಬೇಸಿಗೆಯ ಬಿಸಿಯಿಂದ ಸಮಾಧಾನ ತರುವುದೇನೋ ನಿಜ. ಆದರೆ, ಈ ಅವಧಿಯಲ್ಲಿ ಕೆಲವು ಗಂಭೀರ ಸಮಸ್ಯೆಗಳೂ ಎದುರಾಗುತ್ತವೆ. ಮಳೆ ಸುರಿಯುತ್ತಿದ್ದಂತೆ ಹಾವು, ಚೇಳು ಮತ್ತು ಇತರ ವಿಷಜಂತುಗಳು ತಂಗಿರುವ ಬಿಲಗಳಿಗೆ ನೀರು ತುಂಬಿಕೊಳ್ಳುವುದರಿಂದ, ಅವು ಹೊರಬರಲು ಆರಂಭಿಸುತ್ತವೆ. ಹಲವು ಬಾರಿ ನೀರು ನಿಲ್ಲುವುದು ಮತ್ತು ತೇವಾಂಶ ಹೆಚ್ಚಾಗುವುದರಿಂದ ಈ ಜೀವಿಗಳು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಮನೆಗಳು, ಸ್ಟೋರ್ ರೂಂಗಳು, ತೋಟಗಳು ಹಾಗೂ ಸುತ್ತಮುತ್ತಲಿನ ಖಾಲಿ ಜಾಗಗಳನ್ನು ಸೇರಿಕೊಳ್ಳುತ್ತವೆ. ಆದರೆ, ಮಳೆಗಾಲದಲ್ಲಿ ನೀವು ಸ್ವಲ್ಪ ಜಾಗರೂಕತೆ ವಹಿಸಿದರೆ ಈ ಅಪಾಯಕಾರಿ ಜೀವಿಗಳನ್ನು ನಿಮ್ಮ ಮನೆಯಿಂದ ದೂರ ಇಡಬಹುದು.

25
ಹಾವು-ಚೇಳುಗಳು ಬರದಂತೆ ತಡೆಯಲು ಏನ್‌ ಮಾಡ್ಬೇಕು?

*ನೀವು ಮೊದಲಿಗೆ ಮನೆಯ ಸುತ್ತಮುತ್ತ ಶೇಖರಣೆಯಾಗುವ ಕಸ, ಒಣಗಿದ ಕಟ್ಟಿಗೆಗಳು, ಇಟ್ಟಿಗೆಗಳ ರಾಶಿ ಮತ್ತು ಪೊದೆಗಳನ್ನು ಸ್ವಚ್ಛಗೊಳಿಸಬೇಕು. ಏಕೆಂದರೆ ಇಂತಹ ಜಾಗಗಳಲ್ಲಿ ಹಾವು ಮತ್ತು ಚೇಳುಗಳು ಅಡಗಿ ಕುಳಿತುಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.
*ಒಂದು ವೇಳೆ ಮನೆಯ ಸುತ್ತಮುತ್ತ ಹಸಿರು ಹುಲ್ಲು ಹೆಚ್ಚಾಗಿ ಬೆಳೆದಿದ್ದರೆ, ಅದನ್ನು ನಿಯಮಿತವಾಗಿ ಕತ್ತರಿಸುತ್ತಿರಿ. ಜಾಗ ಸ್ವಚ್ಛವಾಗಿದ್ದರೆ ಇಂತಹ ಜೀವಿಗಳು ಅಲ್ಲಿ ಆಶ್ರಯ ಪಡೆಯುವ ಸಾಧ್ಯತೆಗಳು ತೀರಾ ಕಡಿಮೆಯಾಗುತ್ತವೆ.

35
ಮನೆಯ ಗೋಡೆಗಳ ಬಿರುಕು ಮತ್ತು ಗ್ಯಾಪ್‌ ಮುಚ್ಚಿದ್ದೀರಾ?

*ಇದರೊಂದಿಗೆ ನೀವು ಮನೆಯ ಗೋಡೆಗಳು, ಕಿಟಕಿಗಳು, ಬಾಗಿಲುಗಳು ಮತ್ತು ನೆಲದಲ್ಲಿರುವ ಬಿರುಕುಗಳನ್ನು (Darar) ಸರಿಯಾಗಿ ಪರಿಶೀಲಿಸಬೇಕು. ಸಣ್ಣ ಪುಟ್ಟ ಬಿರುಕುಗಳು ಕೂಡ ಹಾವು ಮತ್ತು ಚೇಳುಗಳು ಮನೆಗೆ ಪ್ರವೇಶಿಸಲು ಸುಲಭವಾದ ದಾರಿಯಾಗಬಹುದು.
*ಮನೆಯಲ್ಲಿ ಎಲ್ಲಾದರೂ ಗ್ಯಾಪ್ ಕಂಡುಬಂದರೆ, ತಕ್ಷಣವೇ ಸಿಮೆಂಟ್ ಅಥವಾ ಇನ್ಯಾವುದೇ ಸೂಕ್ತ ವಸ್ತುವನ್ನು ಬಳಸಿ ಅದನ್ನು ಸಂಪೂರ್ಣವಾಗಿ ಮುಚ್ಚಿ.

45
ಮನೆಯ ಒಳಗಿನ ತೇವಾಂಶ ಮತ್ತು ಕತ್ತಲನ್ನು ಕಡಿಮೆ ಮಾಡಿ

*ಮಳೆಗಾಲದ ದಿನಗಳಲ್ಲಿ ಮನೆಯೊಳಗೆ ತೇವಾಂಶ ಮತ್ತು ಕತ್ತಲು ಹೆಚ್ಚಾಗದಂತೆ ನೋಡಿಕೊಳ್ಳಬೇಕು.
*ಸ್ಟೋರ್ ರೂಮ್, ಬೇಸ್‌ಮೆಂಟ್ ಮತ್ತು ಕಡಿಮೆ ಬಳಸುವ ಕೋಣೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ.
*ಶೂಗಳು, ಬಟ್ಟೆಗಳು ಅಥವಾ ಇತರ ಸಾಮಗ್ರಿಗಳನ್ನು ದೀರ್ಘಕಾಲದವರೆಗೆ ಒಂದೇ ಜಾಗದಲ್ಲಿ ಇಡುವ ತಪ್ಪು ಮಾಡಬೇಡಿ. ಇವುಗಳ ಒಳಗಡೆ ಈ ಜೀವಿಗಳು ಅಡಗಿಕೊಳ್ಳಲು ಜಾಗ ಮಾಡಿಕೊಳ್ಳಬಹುದು. ಆದ್ದರಿಂದ ಯಾವುದೇ ವಸ್ತುವನ್ನು ಬಳಸುವ ಮುನ್ನ ಅದನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿ.

55
ಹಾವು ಕಂಡುಬಂದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು?

*ಒಂದು ವೇಳೆ ನಿಮ್ಮ ಮನೆಯಲ್ಲಿ ವಿಷಕಾರಿ ಹಾವು ಕಂಡುಬಂದರೆ, ಅದನ್ನು ನೀವೇ ಸ್ವತಃ ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಅಂತಹ ಸಂದರ್ಭದಲ್ಲಿ ನೀವು ತಕ್ಷಣ ಸ್ಥಳೀಯ ಅರಣ್ಯ ಇಲಾಖೆ, ಪ್ರಾಣಿ ಸಂರಕ್ಷಣಾ ತಂಡ ಅಥವಾ ನುರಿತ ಉರಗ ತಜ್ಞರ ಸಹಾಯವನ್ನು ಪಡೆಯಬೇಕು. ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆಗೆ ಒಳ್ಳೆಯದು.
*ಮಳೆಗಾಲದಲ್ಲಿ ಸ್ವಲ್ಪ ಜಾಗರೂಕತೆ ಮತ್ತು ನಿಯಮಿತ ನಿರ್ವಹಣೆಯಿಂದ ನಿಮ್ಮ ಮನೆ ಮತ್ತು ಕುಟುಂಬವನ್ನು ಈ ಅಪಾಯಕಾರಿ ಜೀವಿಗಳಿಂದ ಸುರಕ್ಷಿತವಾಗಿಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories