Why pillows turn yellow: ಬಣ್ಣ ಬಣ್ಣದ ದಿಂಬುಗಳು (Pillows) ನೋಡಲು ಚೆನ್ನಾಗಿರುತ್ತವೆ, ಆದರೆ ಕೆಲವು ಸಮಯದ ನಂತರ ವಿಶೇಷವಾಗಿ ಬಿಳಿ ದಿಂಬುಗಳ ಮೇಲೆ ಹಳದಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೇನು ಮತ್ತು ಇವುಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ..
ಕಾರಣವೇನು? ನಾವೆಲ್ಲರೂ ಬೆಡ್‌ಶೀಟ್ ಮತ್ತು ದಿಂಬಿನ ಕವರ್‌ಗಳನ್ನು ನಿಯಮಿತವಾಗಿ ತೊಳೆಯುತ್ತೇವೆ. ಆದರೆ ದಿಂಬಿನ ಕವರ್ ಶುಚಿಯಾಗಿದ್ದರೂ, ಅದರ ಒಳಗಿರುವ ದಿಂಬು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣಗಳು ಮತ್ತು ಪರಿಹಾರಗಳು ಇಲ್ಲಿವೆ..
25
ದಿಂಬುಗಳು ಹಳದಿಯಾಗುವುದು ಏಕೆ?
ದಿಂಬುಗಳು ಹಳದಿಯಾಗುವುದು ಏಕೆ? ದಿಂಬುಗಳು ಹಳದಿಯಾಗಲು ಪ್ರಮುಖ ಕಾರಣ ನಮ್ಮ ದೇಹದಿಂದ ಹೊರಬರುವ ತೇವಾಂಶ. ನಾವು ಮಲಗಿದಾಗ ಚರ್ಮ ಮತ್ತು ಕೂದಲಿನಿಂದ ಹೊರಬರುವ ಎಣ್ಣೆ ಹಾಗೂ ಬೆವರು ದಿಂಬಿನ ಕವರ್ ದಾಟಿ ಒಳಗಿನ ಹತ್ತಿಗೆ ಸೇರಿಕೊಳ್ಳುತ್ತದೆ. ಮಲಗಿದ್ದಾಗ ಬಾಯಿಯಿಂದ ಸುರಿಯುವ ಜೊಲ್ಲು ಕೂಡ ಹಳದಿ ಕಲೆಗೆ ಕಾರಣವಾಗುತ್ತದೆ. ಮುಖಕ್ಕೆ ಹಚ್ಚುವ ಲೋಶನ್, ಕ್ರೀಮ್ ಅಥವಾ ಒದ್ದೆ ಕೂದಲಿನೊಂದಿಗೆ ಮಲಗುವುದು ಕೂಡ ದಿಂಬನ್ನು ಗಲೀಜು ಮಾಡುತ್ತದೆ. ಸಮಯ ಕಳೆದಂತೆ ಇದರಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಧೂಳು ತುಂಬಿಕೊಂಡು ದುರ್ವಾಸನೆ ಬರಲು ಶುರುವಾಗುತ್ತದೆ.
35
2. ನಿಂಬೆ ರಸ ಮತ್ತು ಬಿಸಿಲು
2. ನಿಂಬೆ ರಸ ಮತ್ತು ಬಿಸಿಲು ಒಂದು ಭಾಗ ನಿಂಬೆ ರಸಕ್ಕೆ ಎರಡು ಭಾಗ ಉಗುರುಬೆಚ್ಚಗಿನ ನೀರು ಅಥವಾ ವಿನೆಗರ್ ಬೆರೆಸಿ ಸ್ಪ್ರೇ ಬಾಟಲಿಗೆ ತುಂಬಿಸಿ. ಇದನ್ನು ದಿಂಬಿನ ಮೇಲೆ ಸ್ಪ್ರೇ ಮಾಡಿ ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ. ಸೂರ್ಯನ ನೇರಳಾತೀತ ಕಿರಣಗಳು (UV rays) ನೈಸರ್ಗಿಕ ಬ್ಲೀಚ್‌ನಂತೆ ಕೆಲಸ ಮಾಡಿ ಕಲೆಗಳನ್ನು ಮಾಯ ಮಾಡುತ್ತವೆ.
ದಿಂಬನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳು 1. ಬೇಕಿಂಗ್ ಸೋಡಾ ಮತ್ತು ವೈಟ್ ವಿನೆಗರ್ ಮೊದಲಿಗೆ ಬೇಕಿಂಗ್ ಸೋಡಾ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 30 ನಿಮಿಷ ಬಿಡಿ. ನಂತರ ಆ ಜಾಗಕ್ಕೆ ಸ್ವಲ್ಪ ವೈಟ್ ವಿನೆಗರ್ ಹಾಕಿ ಉಜ್ಜಿ ವಾಷಿಂಗ್ ಮೆಷಿನ್‌ನಲ್ಲಿ ತೊಳೆಯಿರಿ. ಇದು ಕಲೆಗಳನ್ನು ಸುಲಭವಾಗಿ ತೆಗೆಯುತ್ತದೆ.
ದಿಂಬು ಹಳದಿ ಆಗದಂತೆ ತಡೆಯುವುದು ಹೇಗೆ? ದಿಂಬಿನ ಕವರ್‌ಗಳನ್ನು ವಾರಕ್ಕೊಮ್ಮೆ ಅವಶ್ಯವಾಗಿ ತೊಳೆಯಿರಿ.
ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ದಿಂಬುಗಳನ್ನು ಸ್ವಚ್ಛಗೊಳಿಸಿ.
ದಿಂಬಿಗೆ ಕವರ್ ಹಾಕುವ ಮೊದಲು ಪಿಲ್ಲೋ ಪ್ರೊಟೆಕ್ಟರ್ ಬಳಸಿ. ಇದು ಬೆವರು ಮತ್ತು ಎಣ್ಣೆ ದಿಂಬಿನ ಒಳಗೆ ಹೋಗದಂತೆ ತಡೆಯುತ್ತದೆ.
ದಿಂಬುಗಳನ್ನು ಗರಿಷ್ಠ 2 ವರ್ಷಕ್ಕೊಮ್ಮೆ ಬದಲಾಯಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.