Snake Droppings: ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌

Published : Jun 02, 2026, 04:53 PM IST

Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
14
ಹಾವಿನ ಮಲ ಹೇಗಿರುತ್ತದೆ?

ಹಾವಿನ ಮಲವು ಬೇರೆ ಪ್ರಾಣಿಗಳ ಮಲದಂತೆ ಇರೋದಿಲ್ಲ. ಪಕ್ಷಿಗಳಂತೆ ಹಾವುಗಳು ಕೂಡ ಮಲವನ್ನು ಒಂದೇ ದ್ವಾರದಿಂದ ( ಕ್ಲೋಕಾ ) ಹೊರಹಾಕುತ್ತವೆ. ಇದರಲ್ಲಿ ದ್ರವ, ಗಟ್ಟಿ ಮಲ ಕೂಡ ಮಿಕ್ಸ್‌ ಆಗಿರುತ್ತದೆ.

ಮಲವು ಸಾಮಾನ್ಯವಾಗಿ ಕಡು ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಮಲದ ತುದಿಯಲ್ಲಿ ಬಿಳಿ ಅಥವಾ ಆಫ್-ವೈಟ್ ಬಣ್ಣದ ಭಾಗ ಇರುತ್ತದೆ. ಇದು ಯೂರಿಕ್ ಆಸಿಡ್ (Uric acid) ಆಗಿರುತ್ತದೆ, ಅಂದರೆ ಹಾವಿನ ಗಟ್ಟಿ ರೂಪದ ಮೂತ್ರವಾಗಿರಲಿದೆ. ಕಡು ಬಣ್ಣದ, ಕೊಳವೆಯಾಕಾರದ, ಒಂದು ತುದಿಯಲ್ಲಿ ಸೀಮೆಸುಣ್ಣದಂತಹ ಬಿಳಿ ಬಣ್ಣದ ಮೊಗ್ಗು ಇರುವ ತ್ಯಾಜ್ಯವನ್ನು ಕಂಡರೆ, ಅದು ಹಾವಿನ ಮಲ ಆಗಿರುತ್ತದೆ. ಹಸಿಯಾದ ಮಲವು ಮೃದುವಾಗಿರುತ್ತದೆ, ನಯವಾಗಿರುತ್ತದೆ. ಅದು ಒಣಗಿದಾ, ಬಣ್ಣ ತಿಳಿಯಾಗುವುದು, ಪುಡಿಯಾಗುವುದು.

ಹಾವಿನ ಮಲದಲ್ಲಿ ಅವುಗಳು ತಿಂದ ಪ್ರಾಣಿಗಳ ತುಪ್ಪಳ (ಗೂದಲು), ಮೂಳೆ, ಹಲ್ಲು ಇರುತ್ತವೆ. ಹಾವಿನ ಮಲದಲ್ಲಿ ಯಾವುದೇ ಸಸ್ಯದ ನಾರು ಇರುವುದಿಲ್ಲ. ಸಣ್ಣ ಮೂಳೆ, ಕೂದಲನ್ನು ಹೊಂದಿರುವ, ಯಾವುದೇ ಸಸ್ಯದ ಅಂಶವಿಲ್ಲದ ಮಲ ಕಂಡರೆ, ಅದು ಹಾವಿನದ್ದೇ ಆಗಿರುತ್ತದೆ.

24
ಹಕ್ಕಿ / ಇಲಿಗಳ ಮಲಕ್ಕಿಂತ ಹೇಗೆ ಭಿನ್ನವಾಗಿದೆ?

ಹಾವಿನ ಮಲ ಕಂಡರೆ ಅದು ಹಕ್ಕಿಯ ಮಲ ಎಂದು ಕಾಣಿಸುತ್ತದೆ. ಬಿಳಿ ಯೂರಿಕ್ ಆಸಿಡ್ ಭಾಗವು ಪಕ್ಷಿಗಳ ಮಲದ ಥರ ಕಾಣಿಸುತತದೆ. ಆದರೆ ಪಕ್ಷಿಗಳ ಮಲವು ಬಿಳಿಯಾಗಿ, ಹರಡಿಕೊಂಡಿರುತ್ತದೆ. ಹಾವಿನ ಮಲದಲ್ಲಿ ಬಿಳಿ ಭಾಗದ ಜೊತೆಗೆ ಕಪ್ಪು ಬಣ್ಣದ ತ್ಯಾಜ್ಯವೂ ಇರುತ್ತದೆ. ಹಾವಿನ ಮಲವು ಹೆಚ್ಚು ಕೊಳವೆಯಾಕಾರದಲ್ಲಿ ಉದ್ದವಾಗಿರುತ್ತದೆ. ಈ ಮಲವು ದೊಡ್ಡದಾಗಿರುತ್ತದೆ.

34
ಹಾವಿನ ಮಲವನ್ನು ಎಲ್ಲಿ ಹುಡುಕಬೇಕು?

ಹಾವು ಮನೆಗಳ ಅಟ್ಟ, ಬೇಸ್‌ಮೆಂಟ್‌ಗಳಲ್ಲಿ ಮಲ ಮಾಡುತ್ತದೆ. ಹಾವಿನ ರಂಧ್ರಗಳ ಸುತ್ತಮುತ್ತ, ತೋಟದ ಬಳಿ, ಕಟ್ಟಿಗೆಯ ರಾಶಿ ಬಳಿ, ಗಿಡಗಂಟಿಗಳ ಅಡಿಯಲ್ಲಿ ಮಲ ಮಾಡುವುದುಂಟು. ಅಂಗಳದಲ್ಲಿ ಮಲ ಕಾಣಿಸಿದ್ರೆ, ಅಲ್ಲೇ ಎಲ್ಲೋ ಹಾವಿದೆ ಎಂದರ್ಥ.

44
ಈ ಮಲ ಡೇಂಜರ್?‌

ಹಾವಿನ ಮಲದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುತ್ತದೆ. ಮಲವನ್ನು ಮುಟ್ಟಿ, ಕೈ ತೊಳೆಯದೆ ಮುಖ ಅಥವಾ ಆಹಾರವನ್ನು ಮುಟ್ಟಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಬರುತ್ತದೆ. ಮಲವು ವಾಸನೆಯಿಂದ ಇರುತ್ತದೆ, ಅಪಾಯ ಮಾಡುತ್ತದೆ. ಈ ಮಲವನ್ನು ಬರಿಗೈಯಿಂದ ಮುಟ್ಟಬೇಡಿ. ಮಾಸ್ಕ್ ಹಾಕಿಕೊಂಡು, ಸೋಂಕು ನಿವಾರಕ ಹಾಕಿ ಆ ಮಲ ಕ್ಲೀನ್‌ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories