ನೀವು ವಾಕರಿಸೋ ಜಿರಳೆ ನಿಮ್ಮ ಲಿಫ್ಸ್ಟಿಕ್ ನಲ್ಲಿ! ಯಾವೆಲ್ಲ ಬ್ಯೂಟಿ ಪ್ರಾಡಕ್ಟ್ ನಲ್ಲಿ ಬಳಕೆಯಾಗುತ್ತೆ ಗೊತ್ತಾ?

Published : Jun 02, 2026, 02:57 PM IST

ಮನೆಯ ಮೂಲೆಯಲ್ಲಿ ಜಿರಳೆ ಕಾಣಿಸಿಕೊಂಡ್ರೆ ವಾಕರಿಗೆ ಬರುತ್ತೆ. ಅದನ್ನು ಮನೆಯಿಂದ ಹೊರಗೆ ಹಾಕೋವರೆಗೂ ಸಮಾಧಾನ ಇರೋದಿಲ್ಲ. ಅನೇಕರು ಜಿರಳೆ ಅಂದ್ರೆ ಭಯಪಡ್ತಾರೆ. ನೀವು ಅಸಹ್ಯಪಡುವ ಈ ಜಿರಳೆ ನಿಮ್ಮ ಮನೆಯಲ್ಲಿಲ್ಲ ಅಂದ್ರೂ ನೀವು ಬಳಸೋ ಬ್ಯೂಟಿ ಪ್ರಾಡಕ್ಟ್, ಔಷಧಿಗಳಲ್ಲಿರುತ್ತೆ ಅನ್ನೋ ಸತ್ಯ ನಿಮಗೆ ಗೊತ್ತಾ? 

PREV
18
ಜಿರಳೆ ಜೈವಿಕ ನಿಧಿ

ಇತ್ತೀಚಿನ ದಿನಗಳಲ್ಲಿ ಫೇಸ್ ವಾಶ್ ನಿಂದ ಹಿಡಿದು ಆಂಟಿ ಏಜಿಂಗ್ ಕ್ರೀಮ್ ಸೇರಿದಂತೆ ಅನೇಕ ಬ್ಯೂಟಿ ಪ್ರಾಡಕ್ಟ್ ಗಳಲ್ಲಿ ಜಿರಳೆಯನ್ನು ಬಳಸಲಾಗ್ತಿದೆ. ಜಿರಳೆ ಸಾರಗಳನ್ನು ಸೌಂದರ್ಯ ಮತ್ತು ಆರೋಗ್ಯ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಕಾಸ್ಮೆಟಿಕ್ ಉತ್ಪನ್ನಗಳಿಂದ ಗಾಯವನ್ನು ಗುಣಪಡಿಸುವ ವೈದ್ಯಕೀಯ ಸಿರಪ್ಗಳು ಮತ್ತು ಬಯೋಟೆಕ್ ಸಂಶೋಧನೆಯವರೆಗೆ, ಅಮೇರಿಕನ್ ಜಿರಳೆಯನ್ನು ವಿಜ್ಞಾನ ಜಗತ್ತಿನಲ್ಲಿ ಜೈವಿಕ ನಿಧಿ ಎಂದು ಪರಿಗಣಿಸಲಾಗಿದೆ.

28
ಸ್ಕಿನ್ ಕೇರ್ ಪ್ರಾಡಕ್ಟ್

ಚರ್ಮದ ಆರೈಕೆ ಮಾಡುವ ಸ್ಕಿನ್ ಕೇರ್ ಪ್ರಾಡಕ್ಟ್ ನಲ್ಲಿ ಜಿರಳೆ ಸಾರಗಳನ್ನು ಬಳಸಲಾಗುತ್ತದೆ. ಪೇಟೆಂಟ್ ಪ್ರಕಾರ, ಭಾರತದಲ್ಲಿ ಕಂಡುಬರುವ ಅಮೇರಿಕನ್ ಜಿರಳೆ ಜಾತಿಯಿಂದ ಫೇಸ್ ವಾಶ್ ತಯಾರಿಸಲಾಗುತ್ತದೆ. ಇದು ಚರ್ಮವನ್ನು ಆಳವಾಗಿ ತೇವಗೊಳಿಸುತ್ತದೆ. ಇದರ ಸಾರವನ್ನು ಫೇಶಿಯಲ್ ಮಾಸ್ಕ್ ಮತ್ತು ಟೋನರ್ಗಳಲ್ಲಿ ಬಳಸಲಾಗುತ್ತದೆ.

38
ಜಿರಳೆ ಸಾರದ ಪ್ರಯೋಜನ

ಸ್ಕಿನ್ ಕೇರ್ ಪ್ರಾಡಕ್ಟ್ ಗಳಲ್ಲಿ ಇದನ್ನು ಬಳಸಲುವ ಮುಖ್ಯ ಉದ್ದೇಶ, ಜಿರಳೆ ಸಾರಗಳು ಚರ್ಮದ ಟೋನ್ ಗೆ ಹೊಳಪು ನೀಡುತ್ತವೆ. ತೆರೆದ ರಂಧ್ರಗಳನ್ನು ಕಡಿಮೆ ಮಾಡಲು ಮತ್ತು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

48
ಆಂಟಿ ಏಜಿಂಗ್ ಕ್ರೀಮ್

ಜಿರಳೆ ಸಾರವನ್ನು ಆಂಟಿ ಏಜಿಂಗ್ ಕ್ರೀಮ್ಗಳು ಮತ್ತು ಸೀರಮ್ ನಲ್ಲೂ ಬಳಕೆ ಮಾಡ್ತಾರೆ. ಜಿರಳೆಗಳು ನಿರ್ದಿಷ್ಟ ಪೆಪ್ಟೈಡ್ಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ, ಅವು ಮಾನವ ಚರ್ಮಕ್ಕೆ ಬಿಡುಗಡೆಯಾದಾಗ, ಕಾಲಜನ್ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಈ ಹೆಚ್ಚಿದ ಕಾಲಜನ್ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ದೀರ್ಘಕಾಲದವರೆಗೆ ಯೌವನಯುತವಾಗಿರಿಸುತ್ತದೆ. ಸಂಶೋಧನೆ ಪ್ರಕಾರ, ಜಿರಳೆ ಸಾರವು ಸನ್ಸ್ಕ್ರೀನ್ ತರಹದ ಗುಣಗಳನ್ನು ಹೊಂದಿದೆ.

58
ಮೇಕಪ್ ಪ್ರಾಡಕ್ಟ್

ತ್ವಚೆಯ ಆರೈಕೆಯಲ್ಲಿ ಮಾತ್ರವಲ್ಲ, ನೆಚ್ಚಿನ ಮೇಕಪ್ ಉತ್ಪನ್ನಗಳಲ್ಲಿ ಜಿರಳೆ ಪದಾರ್ಥಗಳನ್ನು ಬಳಸಲಾಗ್ತಿದೆ. ಅನೇಕ ಪ್ರಮುಖ ಅಂತರರಾಷ್ಟ್ರೀಯ ಬ್ರ್ಯಾಂಡ್ಗಳು ಇದನ್ನು ಬಳಸ್ತಿವೆ. ಲಿಪ್ಸ್ಟಿಕ್ಗಳಿಗೆ ಕಂಡಿಷನರ್ ಮತ್ತು ಹ್ಯೂಮೆಕ್ಟಂಟ್ ಆಗಿ ಜಿರಳೆ ಸಾರವನ್ನು ಸೇರಿಸುತ್ತವೆ. ಇದು ಚರ್ಮದ ಮೇಲೆ ಮೇಕಪ್ ಉಳಿಯಲು ಸಹಾಯ ಮಾಡುತ್ತದೆ.

68
ಕೂದಲ ಆರೈಕೆ

ಕೂದಲಿನ ಆರೈಕೆಗೆ ಜಿರಳೆ ಸಾರದ ಬಳಕೆ ಮಾಡಲಾಗ್ತಿದೆ. ಜಿರಳೆ ಸಾರವನ್ನು ಶಾಂಪೂಗಳು, ಹೇರ್ ಟಾನಿಕ್ಸ್ ಮತ್ತು ಕಂಡಿಷನರ್ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಪ್ರಾಥಮಿಕ ಉದ್ದೇಶವೆಂದರೆ ನೆತ್ತಿಯ ಆರೋಗ್ಯವನ್ನು ಸುಧಾರಿಸುವುದು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು.

78
ಯಾವ ಜಿರಳೆ ಬಳಕೆ

ಪ್ರತಿ ದಿನ ನಮ್ಮ ಮನೆಗೆ ಬರುವ, ಕೊಳಕಿನಲ್ಲಿರುವ ಜಿರಳೆಗಳನ್ನು ಇದಕ್ಕೆ ಬಳಸಲಾಗುವುದಿಲ್ಲ. ಸೌಂದರ್ಯವರ್ಧಕಗಳು ಮತ್ತು ಔಷಧಿಗಳಲ್ಲಿ ಬಳಸುವ ಜಿರಳೆಗಳನ್ನು ಅತ್ಯಂತ ಸ್ವಚ್ಛ, ಬರಡಾದ ಮತ್ತು ಸಂಪೂರ್ಣವಾಗಿ ನಿಯಂತ್ರಿತ ಪರಿಸರ ಹೊಂದಿರುವ ಆಧುನಿಕ ಜಮೀನುಗಳಲ್ಲಿ ಬೆಳೆಸಲಾಗುತ್ತದೆ. ಈ ಜಿರಳೆಗಳನ್ನು ರೋಗಕಾರಕ ಬ್ಯಾಕ್ಟೀರಿಯಾ, ಕೀಟನಾಶಕಗಳು ಮತ್ತು ಬಾಹ್ಯ ಮಾಲಿನ್ಯಕಾರಕಗಳಿಂದ ದೂರವಿಡಲಾಗುತ್ತದೆ.

88
ಬಳಕೆ ಹೇಗೆ?

ಜಿರಳೆಗಳನ್ನು ನೇರವಾಗಿ ಪುಡಿಮಾಡಿ ಕ್ರೀಮ್ಗಳು ಅಥವಾ ಸಿರಪ್ಗಳಲ್ಲಿ ಬೆರೆಸಲಾಗುವುದಿಲ್ಲ. ಇದು ಅತ್ಯಂತ ಸಂಕೀರ್ಣವಾದ ವೈಜ್ಞಾನಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಈ ತಂತ್ರಗಳು ಜಿರಳೆಗಳ ದೇಹದಿಂದ ಚಿಟೋಸಾನ್ನಂತಹ ಅಗತ್ಯ ಮತ್ತು ಶುದ್ಧ ಅಂಶಗಳನ್ನು ಮಾತ್ರ ಹೊರತೆಗೆಯಲು ಅನುವು ಮಾಡಿಕೊಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories