Indian Railways: ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನೇ ಯಾಕೆ ಕೊಡ್ತಾರೆ, ಅದರ ಹಿಂದಿನ ರಹಸ್ಯ ಇದೇ..

Published : Jan 25, 2026, 04:30 PM IST

Indian Railways White Bed Sheets: ರೈಲಿನಲ್ಲಿ ಎಸಿ ಕೋಚ್ ಹತ್ತುವಾಗ ಮೊದಲು ನೋಡುವುದು ಬಿಳಿ ಬೆಡ್‌ಶೀಟ್‌ಗಳು. ರೈಲ್ವೇಗಳು ವರ್ಣರಂಜಿತ ಬೆಡ್‌ಶೀಟ್‌ ಬಳಸುವ ಬದಲು ಬಿಳಿ ಬೆಡ್‌ಶೀಟ್‌ಗಳನ್ನು ಮಾತ್ರ ಏಕೆ ಆಯ್ಕೆ ಮಾಡುತ್ತವೆ ಎಂದು ಎಂದಾದರೂ ಯೋಚಿಸಿದ್ದೀರಾ?. ಇದರ ಹಿಂದೆ ಒಂದು ರಹಸ್ಯವಿದೆ.        

PREV
16
ಇದರ ಹಿಂದಿದೆ ಬಲವಾದ ವೈಜ್ಞಾನಿಕ ಮತ್ತು ಆರ್ಥಿಕ ಕಾರಣ

ಭಾರತೀಯ ರೈಲ್ವೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸ ಕೋಚ್‌ಗಳು, ಹೈಸ್ಪೀಡ್ ರೈಲುಗಳು ಮತ್ತು ಆಧುನಿಕ ಸೌಲಭ್ಯಗಳು ಬರುತ್ತಿವೆ. ಆದರೆ ದಶಕಗಳಿಂದ ಎಸಿ ಕೋಚ್‌ಗಳಲ್ಲಿ ಬದಲಾಗದ ಒಂದು ವಿಷಯವಿದೆ. ಅದೇ ಬಿಳಿ ಬೆಡ್‌ಶೀಟ್‌ಗಳು. ರೈಲ್ವೆಗಳು ವರ್ಣರಂಜಿತ ಶೀಟ್ ಬಳಸುವ ಬದಲು ಬಿಳಿ ಬಣ್ಣವನ್ನು ಮಾತ್ರ ಏಕೆ ಆರಿಸಿಕೊಂಡವು? ಇದರ ಹಿಂದಿದೆ ಬಲವಾದ ವೈಜ್ಞಾನಿಕ ಮತ್ತು ಆರ್ಥಿಕ ಕಾರಣಗಳು.

26
121 ಡಿಗ್ರಿಗಳಲ್ಲಿ ಸ್ಟೀಮ್ ವಾಶ್

ರೈಲ್ವೆಯಲ್ಲಿ ನೈರ್ಮಲ್ಯವು ಅತ್ಯಂತ ಮಹತ್ವದ್ದಾಗಿದೆ. ಸಾವಿರಾರು ಪ್ರಯಾಣಿಕರು ಬಳಸುವ ಈ ಬೆಡ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು, ರೈಲ್ವೆಗಳು 121 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿ ಹಬೆಯನ್ನು ಬಳಸುತ್ತವೆ. ಈ ವಿಧಾನವು ಕೊಳೆಯನ್ನು ತೆಗೆದುಹಾಕುವುದಲ್ಲದೆ, ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳನ್ನು ಸಂಪೂರ್ಣವಾಗಿ ಕೊಲ್ಲುತ್ತದೆ.

36
ಬಿಳಿ ಬಣ್ಣ ಏಕೆ?

ಅಂತಹ ಹೆಚ್ಚಿನ ತಾಪಮಾನದಲ್ಲಿ ಪದೇ ಪದೇ ತೊಳೆಯುವಾಗ ಬಣ್ಣದ ಶೀಟ್‌ ಬೇಗನೆ ಮಸುಕಾಗುತ್ತವೆ. ಆದರೆ ಬಿಳಿ ಬಟ್ಟೆಯನ್ನು ಎಷ್ಟೇ ಬಾರಿ ತೊಳೆದರೂ ಹೊಸದಾದಂತೆಯೇ ಪ್ರಕಾಶಮಾನವಾಗಿರುತ್ತದೆ. ಬಣ್ಣದ ಶೀಟ್‌ಗಳನ್ನು ಬಳಸಿದರೆ ಅವುಗಳನ್ನು ಆಗಾಗ್ಗೆ ಬದಲಾಯಿಸಬೇಕಾಗುತ್ತದೆ. ಇದು ರೈಲ್ವೆಗಳಿಗೆ ಅನಗತ್ಯ ವೆಚ್ಚವನ್ನು ಹೆಚ್ಚಿಸುತ್ತದೆ.

46
ಸ್ವಚ್ಛತೆಯ ಪುರಾವೆ

ಬಿಳಿ ಶೀಟ್‌ ಮೇಲೆ ಸಣ್ಣ ಕಲೆ ಕೂಡ ತಕ್ಷಣ ಗೋಚರಿಸುತ್ತದೆ. ಪ್ರಯಾಣಿಕರು ಶೀಟ್‌ ಸ್ವಚ್ಛವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಹೇಳಬಹುದು. ಮತ್ತೊಂದೆಡೆ ಬಣ್ಣದ ಶೀಟ್‌ ಕೊಳೆಯನ್ನು ಸರಿಯಾಗಿ ತೋರಿಸುವುದಿಲ್ಲ. ಇದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ.

56
ಹೊಸ ಬದಲಾವಣೆ ಬರುತ್ತಿದೆ

ಆದರೆ ರೈಲ್ವೆ ಈಗ ಹೊಸ ಮತ್ತು ವಿಭಿನ್ನ ಆಲೋಚನೆಯೊಂದಿಗೆ ಬರುತ್ತಿದ್ದು, ಪ್ರಯೋಗ ಮಾಡುತ್ತಿದೆ. ಹೌದು. ರಾಜಸ್ಥಾನಿ ಕರಕುಶಲ ವಸ್ತುಗಳ ಸ್ಟೈಲ್ ಆದ ಸಂಗನೇರಿ ಪ್ರಿಂಟ್ ಹೊಂದಿರುವ ಬೆಡ್ ಶೀಟ್‌ಗಳನ್ನು ಪರಿಚಯಿಸಿದೆ. ಇವು ದೀರ್ಘಕಾಲ ಬಾಳಿಕೆ ಬರುವಂತೆ ಮತ್ತು ತೊಳೆದ ನಂತರವೂ ಮಸುಕಾಗದಂತೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದರೆ ಶೀಘ್ರದಲ್ಲೇ ನಾವು ಎಲ್ಲಾ ರೈಲುಗಳಲ್ಲಿ ಈ ವರ್ಣರಂಜಿತ ಪ್ರಿಂಟ್ ಶೀಟ್ ನೋಡಬಹುದು. 

66
ಜಾಣರಾಗಿರಿ, ಜಾಗರೂಕರಾಗಿರಿ

ಪ್ರತಿ ಪ್ರಯಾಣದ ನಂತರ ಬೆಡ್ ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಬದಲಾಯಿಸಲಾಗುತ್ತದೆ. ಆದರೆ ಬ್ಲಾಂಕೆಟ್ ವಿಷಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಆರ್‌ಟಿಐ ಪ್ರಕಾರ, ರೈಲ್ವೆ ಬ್ಲಾಂಕೆಟ್ ಗಳನ್ನು ಅವುಗಳ ಸ್ಥಿತಿಯನ್ನು ಅವಲಂಬಿಸಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ತೊಳೆಯಲಾಗುತ್ತದೆ. ಅದಕ್ಕಾಗಿಯೇ ಪ್ರಯಾಣಿಕರು ಬೆಡ್ ಶೀಟ್‌ಗಳೊಂದಿಗೆ ಆರಾಮದಾಯಕವಾಗಿದ್ದರೂ, ಬ್ಲಾಂಕೆಟ್ ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತಾರೆ. ಪ್ರಸ್ತುತ ಭಾರತೀಯ ರೈಲ್ವೆ ದೇಶಾದ್ಯಂತ ತನ್ನದೇ ಆದ 46 ಲಾಂಡ್ರಿಗಳು ಮತ್ತು ಇನ್ನೂ 25 ಖಾಸಗಿ ಲಾಂಡ್ರಿಗಳನ್ನು ನಿರ್ವಹಿಸುವ ಮೂಲಕ ಪ್ರಯಾಣಿಕರಿಗೆ ಸ್ವಚ್ಛವಾದ ಬೆಡ್ ರೋಲ್‌ಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories