ತುಳಸಿ ಗಿಡ ಒಣಗುತ್ತಿದೆಯೇ? ಬೇವಿನ ಎಲೆಯ ಈ 'ಮ್ಯಾಜಿಕ್' ಟ್ರಿಕ್ ಬಳಸಿ, ನಿಮ್ಮ ಮನೆಯ ಗಿಡ ಸದಾ ಹಸಿರಾಗಿರುತ್ತೆ!

Published : Jun 24, 2026, 03:56 PM IST

Neem leaves for Tulsi: ಒಣಗುತ್ತಿರುವ ತುಳಸಿ ಗಿಡಕ್ಕೆ ಮರುಜೀವ ನೀಡಬೇಕೆ? ನಿಮ್ಮ ಗಿಡ ಪೊದೆಯಂತೆ ಬೆಳೆಯುತ್ತಿಲ್ಲವೇ? ಹಾಗಾದರೆ ಬೇವಿನ ಎಲೆ ಮತ್ತು ಅರಿಶಿನ ನಿಮಗೆ ಸಹಾಯ ಮಾಡಬಲ್ಲದು. ತುಳಸಿ ಗಿಡದ ಸಂಪೂರ್ಣ ಆರೈಕೆ ಮತ್ತು ಗಿಡ ಎಂದಿಗೂ ಒಣಗದಂತೆ ತಡೆಯುವ ಅದ್ಭುತ ಟಿಪ್ಸ್ ಇಲ್ಲಿದೆ. 

PREV
16
ಕೆಲವು ಸುಲಭ ಮನೆಮದ್ದುಗಳು

ಕೆಲವು ಸುಲಭ ಮನೆಮದ್ದು 
ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಆಧ್ಯಾತ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಅಪಾರವಾದ ಪ್ರಾಮುಖ್ಯತೆಯಿದೆ. ತುಳಸಿ ಕಟ್ಟೆ ಇಲ್ಲದ ಹಿಂದೂಗಳ ಮನೆ ಅಪರೂಪ. ಆದರೆ, ಅನೇಕರು ಎದುರಿಸುವ ಒಂದು ದೊಡ್ಡ ಸಮಸ್ಯೆ ಎಂದರೆ ಎಷ್ಟೇ ಆರೈಕೆ ಮಾಡಿದರೂ ತುಳಸಿ ಗಿಡ ಒಣಗಿ ಹೋಗುವುದು ಅಥವಾ ಎಲೆಗಳು ಉದುರಿ ಬರೀ ಕಡ್ಡಿಯಂತೆ ಆಗುವುದು. ತುಳಸಿ ಗಿಡಕ್ಕೆ ಕೇವಲ ಭಕ್ತಿ ಮಾತ್ರವಲ್ಲ, ಸರಿಯಾದ ಪೋಷಣೆ ಕೂಡ ಅಗತ್ಯ. ಹಾಗಾದರೆ ನಿಮ್ಮ ಮನೆಯ ತುಳಸಿ ಗಿಡ ಹಸಿರಾಗಿ ಬೆಳೆಯಲು ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ.

26
'ಪಿಂಚಿಂಗ್' ಮಾಡಿ

'ಪಿಂಚಿಂಗ್' ಮಾಡಿ
ತುಳಸಿ ಗಿಡವು ಕೇವಲ ಎತ್ತರಕ್ಕೆ ಬೆಳೆಯದೆ ಸುತ್ತಲೂ ಕೊಂಬೆಗಳನ್ನು ಬಿಟ್ಟು ಪೊದೆಯ ತರಹ ಬರಬೇಕೆಂದರೆ 'ಪಿಂಚಿಂಗ್' ಮಾಡುವುದು ಬಹಳ ಮುಖ್ಯ. ಅಂದರೆ, ಗಿಡದ ಕೊಂಬೆಗಳ ತುದಿಯಲ್ಲಿರುವ ಎಳೆಯ ಎರಡು ಎಲೆಗಳನ್ನು ನಿಯಮಿತವಾಗಿ ಚಿವುಟುತ್ತಿರಬೇಕು. ಇದರಿಂದ ಗಿಡದ ಎತ್ತರ ಕಡಿಮೆಯಾಗಿ, ಪಕ್ಕದಲ್ಲಿ ಹೊಸ ಕೊಂಬೆಗಳು ಚಿಗುರುತ್ತವೆ. ಹಾಗೆಯೇ, ತುಳಸಿಯಲ್ಲಿ ಬರುವ ಹೂವು/ಬೀಜದ ಕಂಕುಗಳು ಎಳೆಯದಿದ್ದಾಗಲೇ ಕತ್ತರಿಸಿ ತೆಗೆಯಬೇಕು. ಬೀಜಗಳು ಬಲಿತರೆ ಗಿಡದ ಆಯುಷ್ಯ ಮುಗಿಯಿತು ಎಂದು ಭಾವಿಸಿ ಅದು ಒಣಗಲು ಆರಂಭಿಸುತ್ತದೆ.

36
ಅರಿಶಿನದ ನೀರಿನ ಬಳಕೆ

ಅರಿಶಿನದ ನೀರಿನ ಬಳಕೆ
ತುಳಸಿ ಗಿಡಕ್ಕೆ ಹೆಚ್ಚಾಗಿ ಬಿಳಿ ನುಸಿ ಅಥವಾ ಶಿಲೀಂಧ್ರ (Fungus) ಬಾಧೆ ತಗುಲುತ್ತದೆ. ಇದರಿಂದ ಎಲೆಗಳು ಮುದುಡಿಕೊಳ್ಳುತ್ತವೆ. ಇದನ್ನು ತಡೆಯಲು ಒಂದು ಲೀಟರ್ ನೀರಿನಲ್ಲಿ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿ ಎಲೆಗಳ ಮೇಲೆ ಸಿಂಪಡಿಸಿ. ಅಲ್ಪ ಪ್ರಮಾಣದ ಅರಿಶಿನವನ್ನು ಗಿಡದ ಬುಡದ ಮಣ್ಣಿಗೆ ಹಾಕುವುದರಿಂದ ಬೇರುಗಳಿಗೆ ಸೋಂಕು ತಗುಲುವುದನ್ನು ತಡೆಯಬಹುದು.

46
ಬೇವಿನ ಎಲೆಗಳ ಮ್ಯಾಜಿಕ್ ಚಿಕಿತ್ಸೆ

ಬೇವಿನ ಎಲೆಗಳ ಮ್ಯಾಜಿಕ್ ಚಿಕಿತ್ಸೆ
ಬೇವಿನ ಎಲೆಗಳು ನೈಸರ್ಗಿಕ ಕೀಟನಾಶಕಗಳಂತೆ ಕೆಲಸ ಮಾಡುತ್ತವೆ. ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದರಲ್ಲಿ 12 ರಿಂದ 14 ಬೇವಿನ ಎಲೆಗಳನ್ನು ಹಾಕಿ ಸುಮಾರು 12 ಗಂಟೆಗಳ ಕಾಲ ನೆನೆಸಿಡಿ. ನಂತರ ಆ ನೀರನ್ನು ಕುದಿಸಿ ಆರಿಸಿಕೊಳ್ಳಿ. ಈ ನೀರನ್ನು ವಾರಕ್ಕೆ ಎರಡು ಬಾರಿ ತುಳಸಿ ಗಿಡದ ಎಲೆಗಳ ಮೇಲೆ ಸಿಂಪಡಿಸಿ ಮತ್ತು ಸ್ವಲ್ಪ ನೀರನ್ನು ಮಣ್ಣಿಗೆ ಹಾಕಿ. ಇದು ಯಾವುದೇ ರೀತಿಯ ಕೀಟಬಾಧೆಯನ್ನು ದೂರ ಮಾಡಿ ಗಿಡವು ಆರೋಗ್ಯವಾಗಿ ಬೆಳೆಯಲು ಸಹಾಯ ಮಾಡುತ್ತದೆ.

56
ಎಪ್ಸಮ್ ಸಾಲ್ಟ್‌ನ ಉಪಯೋಗ

ಎಪ್ಸಮ್ ಸಾಲ್ಟ್‌ನ ಉಪಯೋಗ
ತುಳಸಿ ಎಲೆಗಳು ಕಡು ಹಸಿರಾಗಿ, ಕಾಂತಿಯುತವಾಗಿ ಕಾಣಲು ಮೆಗ್ನೀಶಿಯಂ ಅಗತ್ಯ. ತಿಂಗಳಿಗೊಮ್ಮೆ ಒಂದು ಲೀಟರ್ ನೀರಿನಲ್ಲಿ ಅರ್ಧ ಚಮಚ ಎಪ್ಸಮ್ ಸಾಲ್ಟ್ (Epsom Salt) ಬೆರೆಸಿ ಗಿಡದ ಬುಡಕ್ಕೆ ಸುರಿಯಿರಿ. ಇದು ಗಿಡದಲ್ಲಿ ಹಸಿರು ಅಂಶವನ್ನು (Chlorophyll) ಹೆಚ್ಚಿಸಿ ವೇಗವಾಗಿ ಬೆಳೆಯಲು ಉತ್ತೇಜನ ನೀಡುತ್ತದೆ.

66
ಸರಿಯಾದ ನೀರು ಮತ್ತು ಸೂರ್ಯನ ಬೆಳಕು

ಸರಿಯಾದ ನೀರು ಮತ್ತು ಸೂರ್ಯನ ಬೆಳಕು
ತುಳಸಿಗೆ ಅತಿಯಾಗಿ ನೀರು ಹಾಕಬೇಡಿ, ಇದರಿಂದ ಬೇರುಗಳು ಕೊಳೆಯಬಹುದು. ಮಣ್ಣಿನ ಮೇಲ್ಪದರ ಒಣಗಿದಾಗ ಮಾತ್ರ ನೀರು ಹಾಕಿ. ಗಿಡಕ್ಕೆ ದಿನಕ್ಕೆ ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಿ. ಈ ನೈಸರ್ಗಿಕ ಕ್ರಮಗಳನ್ನು ಪಾಲಿಸಿದರೆ ನಿಮ್ಮ ಮನೆಯ ತುಳಸಿ ಗಿಡ ಸದಾ ಕಾಲ ಹಸಿರಾಗಿ ಕಂಗೊಳಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories