Google search safety: ಸೈಬರ್ ಅಪರಾಧಿಗಳು ನಿಮ್ಮ ಒಂದು ಸಣ್ಣ ತಪ್ಪು ನಡೆಗಾಗಿ ಕಾಯುತ್ತಿರುತ್ತಾರೆ. ಗೂಗಲ್ ಕೇವಲ ಮಾಹಿತಿಯನ್ನು ನೀಡುವ ವೇದಿಕೆಯಾಗಿದ್ದು, ಅಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನಿಜವೆಂದು ನಂಬುವುದು ತಪ್ಪು. ಆದ್ದರಿಂದ ಈ ಕೆಳಗಿನ 5 ವಿಷಯಗಳ ಬಗ್ಗೆ ಜಾಗರೂಕರಾಗಿರಿ..
ಇಂದು ನಮಗೆ ಯಾವುದೇ ಅನುಮಾನ ಬಂದ್ರೂ ತಕ್ಷಣ ನೆನಪಿಗೆ ಬರುವುದು 'ಗೂಗಲ್ '. ಅಡುಗೆಯಿಂದ ಹಿಡಿದು ಆರೋಗ್ಯದವರೆಗೆ ಎಲ್ಲದಕ್ಕೂ ನಾವು ಗೂಗಲ್ ಮೊರೆ ಹೋಗುತ್ತೇವೆ. ಆದರೆ, ಗೂಗಲ್‌ನಲ್ಲಿ ಪ್ರತಿಯೊಂದು ವಿಷಯವನ್ನು ಹುಡುಕುವುದು ನಿಮಗೆ ಗೊತ್ತಿಲ್ಲದಂತೆಯೇ ದೊಡ್ಡ ಅಪಾಯವನ್ನು ತಂದೊಡ್ಡಬಹುದು.
26
1. ಕಸ್ಟಮರ್ ಕೇರ್ ನಂಬರ್ಸ್ (Customer Care Numbers)
1. ಕಸ್ಟಮರ್ ಕೇರ್ ನಂಬರ್ಸ್ (Customer Care Numbers) ಯಾವುದಾದರೂ ಬ್ಯಾಂಕ್ ಅಥವಾ ಕಂಪನಿಯ ಕಸ್ಟಮರ್ ಕೇರ್ ನಂಬರ್ ಬೇಕಾದಾಗ ನೇರವಾಗಿ ಗೂಗಲ್‌ನಲ್ಲಿ ಹುಡುಕಬೇಡಿ. ಸೈಬರ್ ಕ್ರಿಮಿನಲ್‌ಗಳು ನಕಲಿ ನಂಬರ್‌ಗಳನ್ನು ಗೂಗಲ್‌ನಲ್ಲಿ ಅಪ್‌ಲೋಡ್ ಮಾಡಿರುತ್ತಾರೆ. ನೀವು ಆ ನಂಬರ್‌ಗೆ ಕರೆ ಮಾಡಿದರೆ, ಅವರು ನಿಮ್ಮ ಬ್ಯಾಂಕ್ ವಿವರಗಳನ್ನು ಪಡೆದು ಹಣ ದೋಚುವ ಸಾಧ್ಯತೆ ಇರುತ್ತದೆ. ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಂಬರ್ ಪಡೆಯಿರಿ.
36
2. ಕ್ರ್ಯಾಕ್ಡ್ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳು (Cracked Software and Apps)
2. ಕ್ರ್ಯಾಕ್ಡ್ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳು (Cracked Software and Apps) ದುಬಾರಿ ಆ್ಯಪ್‌ಗಳನ್ನು ಉಚಿತವಾಗಿ ಪಡೆಯಲು 'Cracked Versions' ಅಥವಾ 'Modded Apps'ಗಳಿಗಾಗಿ ಸರ್ಚ್ ಮಾಡಬೇಡಿ. ಇವುಗಳ ಮೂಲಕ ಮಾಲ್‌ವೇರ್ ಅಥವಾ ರಾನ್ಸಮ್‌ವೇರ್‌ನಂತಹ ವೈರಸ್‌ಗಳು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಸೇರಿ, ನಿಮ್ಮ ಖಾಸಗಿ ಫೋಟೋ ಮತ್ತು ಡೇಟಾವನ್ನು ಹ್ಯಾಕರ್‌ಗಳಿಗೆ ತಲುಪಿಸುತ್ತವೆ.
3. ಆರೋಗ್ಯ ಸಮಸ್ಯೆಗಳು ಮತ್ತು ಸ್ವಯಂ ಚಿಕಿತ್ಸೆ (Health Issues)
3. ಆರೋಗ್ಯ ಸಮಸ್ಯೆಗಳು ಮತ್ತು ಸ್ವಯಂ ಚಿಕಿತ್ಸೆ (Health Issues) ಸಣ್ಣ ಪುಟ್ಟ ಕಾಯಿಲೆಗಳಿಗೂ ಗೂಗಲ್‌ನಲ್ಲಿ ಸರ್ಚ್ ಮಾಡಿ ಭಯಪಡಬೇಡಿ. ಗೂಗಲ್ ವೈದ್ಯರಲ್ಲ, ಅದು ಕೇವಲ ಲಭ್ಯವಿರುವ ಮಾಹಿತಿಯನ್ನು ತೋರಿಸುತ್ತದೆ. ತಪ್ಪು ಮಾಹಿತಿಯಿಂದಾಗಿ ಅನಗತ್ಯ ಆತಂಕ ಉಂಟಾಗಬಹುದು ಅಥವಾ ತಪ್ಪು ಮಾತ್ರೆಗಳನ್ನು ಸೇವಿಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು. ಆರೋಗ್ಯ ಸಮಸ್ಯೆ ಇದ್ದಾಗ ತಜ್ಞ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
56
4. ಹಣ ಗಳಿಸುವ ಸುಲಭ ಮಾರ್ಗಗಳು (Get Rich Quick Schemes)
4. ಹಣ ಗಳಿಸುವ ಸುಲಭ ಮಾರ್ಗಗಳು (Get Rich Quick Schemes) "ಒಂದೇ ದಿನದಲ್ಲಿ ಲಕ್ಷಾಧಿಪತಿಯಾಗುವುದು ಹೇಗೆ?" ಅಥವಾ "ಹಣ ದ್ವಿಗುಣಗೊಳಿಸುವ ಯೋಜನೆಗಳು" ಎಂದು ಸರ್ಚ್ ಮಾಡುವುದು ನಿಮ್ಮನ್ನು ಆನ್‌ಲೈನ್ ವಂಚನೆಗೆ ದೂಡಬಹುದು. ಇಂತಹ ಆಸೆ ತೋರಿಸುವ ವೆಬ್‌ಸೈಟ್‌ಗಳು ನಿಮ್ಮ ಹೂಡಿಕೆಯ ಹಣವನ್ನು ಲಪಟಾಯಿಸಲು ಸಿದ್ಧವಾಗಿರುತ್ತವೆ.
66
5. ವೈಯಕ್ತಿಕ ಗುರುತಿನ ವಿವರಗಳು (Personal Identity Details)
5. ವೈಯಕ್ತಿಕ ಗುರುತಿನ ವಿವರಗಳು (Personal Identity Details) ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇಮೇಲ್ ಐಡಿ ಅಥವಾ ಪಾಸ್‌ವರ್ಡ್‌ಗಳನ್ನು ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಎಂಟರ್ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮಾಹಿತಿ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳ ಕೈಗೆ ಸೇರಿ, ನಿಮ್ಮ ಗುರುತಿನ ದುರುಪಯೋಗವಾಗಬಹುದು. ತಂತ್ರಜ್ಞಾನವು ನಮ್ಮ ಜೀವನವನ್ನು ಸುಲಭಗೊಳಿಸಿದೆ ನಿಜ, ಆದರೆ ಈ ಬಗ್ಗೆ ಹೆಚ್ಚಿನ ಜಾಗರೂಕತೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಟರ್ನೆಟ್ ಬಳಸುವಾಗ ಸದಾ ಜಾಗರೂಕರಾಗಿರಿ ಮತ್ತು ಸೈಬರ್ ವಂಚನೆಗಳಿಂದ ದೂರವಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.