ಮನೆ ಮುಂದೆ ಕೆರೆ ಬೇಡ.. ಈ ಟಿಪ್ಸ್‌ ಪಾಲಿಸಿ, ಚಿಕ್ಕ ತೊಟ್ಟಿಯಲ್ಲೇ ಗೊಂಚಲು ಗೊಂಚಲಾಗಿ ಅರಳುತ್ತೆ ತಾವರೆ ಹೂ!

Published : Nov 27, 2026, 05:53 PM IST

Lotus gardening tips: ಮನೆ ಅಂಗಳದಲ್ಲೇ ತಾವರೆ ಹೂವು ಬೆಳೆಸಬೇಕು ಅನ್ನೋ ಆಸೆ ನಿಮಗಿದೆಯಾ? ಕೆರೆ ಬೇಕಿಲ್ಲ, ಚಿಕ್ಕ ತೊಟ್ಟಿಯಲ್ಲೇ ಗೊಂಚಲು ಗೊಂಚಲಾಗಿ ತಾವರೆ ಅರಳುವಂತೆ ಮಾಡೋದು ಹೇಗೆ? ಈ ಸಿಂಪಲ್ ಟಿಪ್ಸ್ ನೋಡಿ!

PREV
15
ಮನೆಯಲ್ಲೇ ಸುಲಭವಾಗಿ ಬೆಳೆಸಬಹುದು

ಎಲ್ಲಾ ಹೂವುಗಳಿಗಿಂತ ತಾವರೆ ಹೂವು ಸ್ವಲ್ಪ ವಿಶೇಷ ಎಂದು ಹೇಳಬೇಕು. ಏಕೆಂದರೆ ಇವು ನೀರಿನಲ್ಲಿಯೇ ಬದುಕುತ್ತವೆ. ಸಾಮಾನ್ಯವಾಗಿ ಮನೆಯಲ್ಲಿ ಇವುಗಳನ್ನು ಬೆಳೆಸುವುದು ಸ್ವಲ್ಪ ಕಷ್ಟ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಕೇವಲ ಕೆರೆಗಳಲ್ಲಿ ಮಾತ್ರವಲ್ಲದೆ, ನಿಮ್ಮ ಮನೆಯಲ್ಲೇ ಇವುಗಳನ್ನು ಸುಲಭವಾಗಿ ಬೆಳೆಸಬಹುದು. ಈ ಟಿಪ್ಸ್‌ಗಳನ್ನು ಪಾಲಿಸಿದರೆ ಚಿಕ್ಕ ತೊಟ್ಟಿಯಲ್ಲಿಯೇ ಗೊಂಚಲು ಗೊಂಚಲಾಗಿ ತಾವರೆ ಹೂವುಗಳು ಅರಳುತ್ತವೆ.

ಸಮಯಕ್ಕೆ ಸರಿಯಾಗಿ ನೀರು ಮತ್ತು ಗೊಬ್ಬರ
ಈ ಗಿಡಗಳನ್ನು ಬೆಳೆಸಬೇಕಾದರೆ ಸೂಕ್ತ ಕಾಳಜಿ ವಹಿಸಬೇಕು. ಜತೆಗೆ ಸರಿಯಾದ ಮಣ್ಣನ್ನು ಆಯ್ಕೆ ಮಾಡಿಕೊಳ್ಳಬೇಕು, ಸಾಕಷ್ಟು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು ಹಾಗೂ ಯಾವಾಗಲೂ ನೀರು ಇರುವಂತೆ ಎಚ್ಚರ ವಹಿಸಬೇಕು. ಮನೆಯಲ್ಲಿಯೇ ಈ ಹೂವುಗಳನ್ನು ಬೆಳೆಸಬೇಕು ಅಂದುಕೊಂಡರೆ, ಗಿಡವನ್ನು ತಂದು ನೆಟ್ಟು, ಆ ನಂತರ ಸಮಯಕ್ಕೆ ಸರಿಯಾಗಿ ನೀರು ಮತ್ತು ಗೊಬ್ಬರವನ್ನು ಹಾಕುತ್ತಿರಬೇಕು.

25
ತಾವರೆ ಗೆಡ್ಡೆ ನೆಡಿ

ನೀವು ತಾವರೆ ಗೆಡ್ಡೆ(Lotus Root)ಯನ್ನು ನೆಟ್ಟ ನಂತರ ಮೊದಲು ಕುಂಡದಲ್ಲಿ ನೀರು ಹಾಕಬೇಕು. ಮೊದಲಿಗೆ ಮಣ್ಣಿನ ಮೇಲ್ಭಾಗದಲ್ಲಿ ನೀರು ನಿಲ್ಲುವಂತೆ ಇಡಿ. ಹಾಗೆಯೇ, ಗೆಡ್ಡೆ ಒಣಗಿ ಹೋಗದಂತೆ ನಿರಂತರವಾಗಿ ನೀರು ಹಾಕುತ್ತಿರಿ.

35
ಎಲೆಗಳು ಬಂದ ಮೇಲೆ ಚೆನ್ನಾಗಿ ನೀರು ಹಾಕಿ

ಇನ್ನು ಈ ಗಿಡಕ್ಕೆ ಎಲೆಗಳು ಬಂದ ನಂತರ ನೀರನ್ನು ಹೆಚ್ಚಾಗಿ ಹಾಕುತ್ತಿರಬೇಕು. ತಾವರೆ ಹೂವಿನ ಗಿಡಕ್ಕೆ ಪ್ರತಿದಿನ 7 ಗಂಟೆಗಳ ಕಾಲ ಸೂರ್ಯನ ಬೆಳಕು (ಬಿಸಿಲು) ಬೀಳಬೇಕು. ಬಿಸಿಲು ಚೆನ್ನಾಗಿ ತಾಗಿದರೆ ಮಾತ್ರ ಹೂವುಗಳು ಚೆನ್ನಾಗಿ ಅರಳುತ್ತವೆ.

45
ನೀರು ಪೂರ್ತಿಯಾಗಿ ಬತ್ತಬಾರದು

ಈ ಗೆಡ್ಡೆಗೆ ನೀವು ಆರಂಭದಲ್ಲೇ ಗೊಬ್ಬರವನ್ನು ಹಾಕಬಾರದು. ಎಲೆಗಳು ನೀರಿನಿಂದ ಮೇಲಕ್ಕೆ ಬಂದ ನಂತರವಷ್ಟೇ ಈ ಗಿಡಗಳಿಗೆ ಬಳಸುವ ಗೊಬ್ಬರವನ್ನು ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು. ಅಲ್ಲದೆ, ಗೊಬ್ಬರವನ್ನು ನೇರವಾಗಿ ನೀರಿನಲ್ಲಿ ಬೆರೆಸಬಾರದು. ಜತೆಗೆ, ಕುಂಡದಲ್ಲಿ ನೀರು ಕಡಿಮೆಯಾದಾಗ ಮತ್ತೆ ನೀರು ತುಂಬಿಸಬೇಕು. ನೀರು ಪೂರ್ತಿಯಾಗಿ ಬತ್ತಿ ಹೋಗದಂತೆ ಚೆನ್ನಾಗಿ ನೋಡಿಕೊಳ್ಳಬೇಕು.

55
ಸ್ವಲ್ಪ ಸಮಯ ಬೇಕು

ಇನ್ನು ಒಣಗಿದ ಎಲೆಗಳು ಹಾಗೂ ಹೂವುಗಳನ್ನು ಕೂಡ ತೆಗೆದುಹಾಕಬೇಕು. ಆದರೆ, ನೀರಿನ ಅಡಿಯಲ್ಲಿರುವ ಕಾಂಡಗಳನ್ನು ಕತ್ತರಿಸಬಾರದು. ತಾವರೆ ಹೂವಿನ ಗಿಡಕ್ಕೆ ಹೂವುಗಳು ಬರುವುದೇ ಸೂರ್ಯನ ಬೆಳಕಿನಿಂದ. ಗಿಡ ಪೂರ್ತಿಯಾಗಿ ಬೆಳೆದ ನಂತರ ಹೂವುಗಳು ಚೆನ್ನಾಗಿ ಅರಳುತ್ತವೆ. ಆದರೆ ಬೀಜಗಳಿಂದ ತಾವರೆ ಹೂವುಗಳು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories