Goa Food Guide: ಬೀಚ್ ಮಾತ್ರವಲ್ಲ, ಬಾಯಲ್ಲಿ ನೀರೂರಿಸುವ ಗೋವಾದ 7 ಫೇಮಸ್ ಖಾದ್ಯಗಳಿವು!

Published : Nov 27, 2026, 04:43 PM IST

ಗೋವಾವನ್ನು ಬರೀ ಬೀಚ್‌ಗಳಿಂದಷ್ಟೇ ಅಲ್ಲ, ಅಲ್ಲಿನ ಫುಡ್ ಕಲ್ಚರ್‌ನಿಂದಲೂ ಎಂಜಾಯ್ ಮಾಡಬಹುದು. ಸ್ಪೈಸಿ ಕರಿ, ಮಟನ್-ಚಿಕನ್ ಡಿಶ್‌ಗಳಿಂದ ಹಿಡಿದು ಟ್ರೆಡಿಷನಲ್ ಸ್ವೀಟ್ಸ್‌ವರೆಗೆ, ಗೋವಾ ಟ್ರಿಪ್‌ಗೆ ಹೋದಾಗ ಮಿಸ್ ಮಾಡದೆ ಟೇಸ್ಟ್ ಮಾಡಬೇಕಾದ 7 ಲೋಕಲ್ ಡಿಶ್‌ಗಳ ಲಿಸ್ಟ್ ಇಲ್ಲಿದೆ.

PREV
17
ಗೋವಾದಲ್ಲಿ ಟ್ರೈ ಮಾಡಲೇಬೇಕಾದ ಫುಡ್

ಗೋವಾ ಅಂದಾಕ್ಷಣ ಸುಂದರವಾದ ಬೀಚ್‌ಗಳು ನೆನಪಾಗುತ್ತವೆ. ಆದ್ರೆ ಅಲ್ಲಿನ ಟ್ರೆಡಿಷನಲ್ ಫುಡ್ ಮಾತ್ರ ಬೇರೆಯದೇ ಲೆವೆಲ್. ಗೋವಾದ ಫುಡ್ ಕಲ್ಚರ್‌ನಲ್ಲಿ ಫಿಶ್ ಕರಿ, ಮಾಂಸಾಹಾರ ಹಾಗೂ ಸ್ಪೆಷಲ್ ದಿನಗಳಲ್ಲಿ ಮಾಡುವ ಸಿಹಿತಿಂಡಿಗಳು ಸೇರಿವೆ. ಲೋಕಲ್ ವಸ್ತುಗಳನ್ನು ಬಳಸಿ ಮಾಡುವ ಈ ಅಡುಗೆಯಲ್ಲಿ ಪೋರ್ಚುಗೀಸ್ ಶೈಲಿಯ ಪ್ರಭಾವವೂ ಇದೆ. ಕೆಫೆಗಳ ಹೊರತಾಗಿ ನೀವು ಮಿಸ್ ಮಾಡದೆ ಟೇಸ್ಟ್ ಮಾಡಬೇಕಾದ 7 ಗೋವಾ ಫುಡ್‌ಗಳ ಲಿಸ್ಟ್ ಇಲ್ಲಿದೆ.

1. ಗೋವಾ ಫಿಶ್ ಕರಿ ರೈಸ್

ಗೋವಾ ಜನರ ದಿನನಿತ್ಯದ ಊಟವಿದು. ಫ್ರೆಶ್ ಮೀನಿಗೆ ತೆಂಗಿನಕಾಯಿ, ಮಸಾಲೆ ಹಾಗೂ ಕೋಕಮ್ ಹಾಕಿ ಮಾಡುತ್ತಾರೆ. ಬಿಸಿ ಅನ್ನದ ಜೊತೆ ಈ ಕರಿ ಸಖತ್ ಕಾಂಬಿನೇಷನ್. ಗೋವಾಗೆ ಹೋದಾಗ ಈ ಫಿಶ್ ಥಾಲಿಯನ್ನು ನೀವು ಟ್ರೈ ಮಾಡಲೇಬೇಕು.

27
2. ಚಿಕನ್ ಕಾಫ್ರಿಯಲ್

ಇದು ಟೇಸ್ಟಿ ಗ್ರೀನ್ ಮಸಾಲೆಗೆ ಫೇಮಸ್. ಕೊತ್ತಂಬರಿ, ಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಇತರ ಮಸಾಲೆಗಳನ್ನು ಬಳಸಿ ಇದನ್ನು ಮಾಡುತ್ತಾರೆ. ಮಸಾಲೆ ಹಚ್ಚಿ ಚಿಕನ್ ಬೇಯಿಸುವುದರಿಂದ ಸಖತ್ ಫ್ಲೇವರ್ ಇರುತ್ತದೆ.

37
3. ಚಿಕನ್ ಕ್ಸಾಕುಟಿ

ಹುರಿದ ತೆಂಗಿನತುರಿ ಹಾಗೂ ಮಸಾಲೆಗಳನ್ನು ಬಳಸಿ ಈ ಡಿಶ್ ಮಾಡುತ್ತಾರೆ. ಇದು ಗ್ರೇವಿ ಟೈಪ್ ಇದ್ದು, ಬೇರೆಯದೇ ಆದ ಟೇಸ್ಟ್ ನೀಡುತ್ತದೆ. ಅನ್ನ ಅಥವಾ ಗೋವಾ ಬ್ರೆಡ್ ಜೊತೆ ಇದು ಸಖತ್ ಮ್ಯಾಚ್ ಆಗುತ್ತದೆ.

47
4. ಪೋರ್ಕ್ ವಿಂಡಾಲೂ

ಪೋರ್ಕ್ ವಿಂಡಾಲೂ ಬೆಳ್ಳುಳ್ಳಿ, ವಿನೆಗರ್, ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಒಳಗೊಂಡಿದ್ದು, ಸ್ಪೈಸಿ ಟೇಸ್ಟ್ ನೀಡುತ್ತದೆ. ಗೋವಾದ ಈ ಸ್ಪೆಷಲ್ ಡಿಶ್ ಅನ್ನು ಮಿಸ್ ಮಾಡ್ಬೇಡಿ.

57
5. ಸೋರ್ಪೋಟೆಲ್

ಇದು ಗೋವಾದ ಟ್ರೆಡಿಷನಲ್ ಪೋರ್ಕ್ ಡಿಶ್. ವಿನೆಗರ್ ಹಾಗೂ ನಾನಾ ರೀತಿಯ ಮಸಾಲೆಗಳನ್ನು ಬಳಸಿ ಇದನ್ನು ಮಾಡುತ್ತಾರೆ. ಕೆಲವೊಮ್ಮೆ ಹಂದಿ ಲಿವರ್ ಕೂಡ ಸೇರಿಸುತ್ತಾರೆ. ಹಬ್ಬಗಳಲ್ಲಿ ಹೆಚ್ಚಾಗಿ ಮಾಡುವ ಈ ಸ್ಪೆಷಲ್ ಊಟವನ್ನು ಸನ್ನಾ (ಸ್ಟೀಮ್ಡ್ ರೈಸ್ ಕೇಕ್) ಜೊತೆ ತಿನ್ನುತ್ತಾರೆ.

67
6. ಪ್ರಾನ್ ಬಲ್ಚಾವೊ

ಸಿಗಡಿಯನ್ನ (Prawns) ವಿನೆಗರ್, ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಜೊತೆ ಬೇಯಿಸುತ್ತಾರೆ. ಅನ್ನ ಅಥವಾ ಬ್ರೆಡ್ ಜೊತೆ ತಿನ್ನಲು ಇದು ಸೂಪರ್. ಇದರ ಟೇಸ್ಟ್ ಸಖತ್ ಸ್ಪೈಸಿ ಆಗಿರುತ್ತದೆ.

77
7. ಬೆಬಿಂಕಾ

ಗೋವಾಗೆ ಹೋದಾಗ ಗೋವಾ ಲೇಯರ್ ಕೇಕ್ 'ಬೆಬಿಂಕಾ' ಟ್ರೈ ಮಾಡುವುದನ್ನು ಮರೆಯಬೇಡಿ. ತೆಂಗಿನ ಹಾಲು, ಮೊಟ್ಟೆ, ಸಕ್ಕರೆ, ಮೈದಾ ಹಾಗೂ ತುಪ್ಪವನ್ನು ಬಳಸಿ ಈ ಟ್ರೆಡಿಷನಲ್ ಸ್ವೀಟ್ ಮಾಡುತ್ತಾರೆ.

ಫಿಶ್ ಕರಿ ರೈಸ್‌ನಂತಹ ದಿನನಿತ್ಯದ ಊಟವಾಗಲಿ ಅಥವಾ ಸೋರ್ಪೋಟೆಲ್, ಬೆಬಿಂಕಾದಂತಹ ಸ್ಪೆಷಲ್ ಡಿಶ್ ಆಗಲಿ, ಇವೆಲ್ಲವೂ ಗೋವಾದ ಫುಡ್ ಕಲ್ಚರ್‌ನ ಅಸಲಿ ರುಚಿಯನ್ನು ಪರಿಚಯಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories