How to grow coriander at home: ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪು ಫ್ರಿಡ್ಜ್‌ನಲ್ಲಿಟ್ಟರೂ ಬೇಗನೆ ಕೊಳೆತು ನಾರುತ್ತಿದ್ಯಾ? ಹಾಗಿದ್ದರೆ ಅಡುಗೆಮನೆಯಲ್ಲಿರುವ ಧನಿಯಾ ಬೀಜಗಳಿಂದಲೇ ಕುಂಡದಲ್ಲಿ ಕೇವಲ 15 ರಿಂದ 20 ದಿನದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆಯುವ ಟ್ರಿಕ್ ಇಲ್ಲಿದೆ..
ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ಕೊತ್ತಂಬರಿ ಸೊಪ್ಪಿನಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಿರುತ್ತದೆ ಮತ್ತು ಮನೆಗೆ ತಂದ ಎರಡೇ ದಿನಕ್ಕೆ ಕೊಳೆತುಹೋಗುತ್ತದೆ. ಆದರೆ ಅಡುಗೆಮನೆಯಲ್ಲಿರುವ ಧನಿಯಾ ಬೀಜಗಳಿಂದಲೇ ನಿಮ್ಮ ಮನೆಯ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಬಹುದು.
27
ಕೊತ್ತಂಬರಿ ಬೆಳೆಯುವ ಸರಳ ಹಂತಗಳು
1. ಬೀಜಗಳನ್ನು 2 ಹೋಳು ಮಾಡುವ ಸೀಕ್ರೆಟ್ ಟ್ರಿಕ್ (Seed Splitting) ಕೊತ್ತಂಬರಿ ಬೇಗನೆ ಮೊಳಕೆಯೊಡೆಯದಿರಲು ಮುಖ್ಯ ಕಾರಣ ಬೀಜಗಳನ್ನು ಹಾಗೇ ಬಿತ್ತುವುದು. ಧನಿಯಾ ಬೀಜಗಳನ್ನು (Coriander seeds) ಚಪಾತಿ ಲಟ್ಟಣಿಗೆಯಿಂದ ಅಥವಾ ಕೈಯಿಂದ ಲಘುವಾಗಿ ಉಜ್ಜಿ ಎರಡು ಹೋಳುಗಳನ್ನಾಗಿ (2 Halves) ಮಾಡಿಕೊಳ್ಳಿ. ಬೀಜ ಪುಡಿಯಾಗಬಾರದು, ಕೇವಲ 2 ಭಾಗಗಳಾಗಬೇಕು. ಇದರಿಂದ ಪ್ರತಿಯೊಂದು ಬೀಜವೂ ನೂರಕ್ಕೆ ನೂರು ಮೊಳಕೆಯೊಡೆಯುತ್ತದೆ.
37
2. ಸರಿಯಾದ ಕುಂಡ (Pot) ಆಯ್ಕೆಮಾಡಿ
2. ಸರಿಯಾದ ಕುಂಡ (Pot) ಆಯ್ಕೆಮಾಡಿ ಕೊತ್ತಂಬರಿ ಗಿಡದ ಬೇರುಗಳು ಆಳಕ್ಕೆ ಇಳಿಯುವುದಿಲ್ಲ. ಹಾಗಾಗಿ ಆಳವಾದ ಕುಂಡಕ್ಕಿಂತ ಅಗಲವಾದ ಮತ್ತು ಕೇವಲ 4 ರಿಂದ 5 ಇಂಚು ಆಳವಿರುವ ಟ್ರೇ ಅಥವಾ ಕುಂಡ ಇದಕ್ಕೆ ಹೇಳಿಮಾಡಿಸಿದ್ದು. ಕುಂಡದ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ತೂತುಗಳಿರಲಿ.
3. ಮಣ್ಣಿನ ಮಿಶ್ರಣ (Potting Mix) 40% ಸಾಮಾನ್ಯ ಮಣ್ಣು, 30% ಕೋಕೋಪೀಟ್ ಮತ್ತು 30% ಎರೆಹುಳು ಗೊಬ್ಬರ (ವರ್ಮಿ ಕಂಪೋಸ್ಟ್) ಬೆರೆಸಿ ಕುಂಡಕ್ಕೆ ತುಂಬಿಸಿ. ಮಣ್ಣು ಸಡಿಲವಾಗಿದ್ದರೆ ಬೇರುಗಳು ಬೇಗನೆ ಹರಡುತ್ತವೆ.
57
4. ಬಿತ್ತುವ ವಿಧಾನ
4. ಬಿತ್ತುವ ವಿಧಾನ ಎರಡು ಹೋಳು ಮಾಡಿದ ಬೀಜಗಳನ್ನು ಮಣ್ಣಿನ ಮೇಲೆ ಸಮನಾಗಿ ಉದುರಿಸಿ. ಬೀಜಗಳ ಮೇಲೆ ಕೇವಲ ಅರ್ಧ ಇಂಚಿನಷ್ಟು ತೆಳುವಾದ ಮಣ್ಣು ಅಥವಾ ಕೋಕೋಪೀಟ್ ಹಾಕಿ ಮುಚ್ಚಿ (ಬೀಜಗಳು ತುಂಬಾ ಆಳಕ್ಕೆ ಹೋಗಬಾರದು).
67
5. ನೀರು ಹಾಕುವಾಗ ಈ ತಪ್ಪು ಮಾಡ್ಬೇಡಿ (Use Spray Only)
5. ನೀರು ಹಾಕುವಾಗ ಈ ತಪ್ಪು ಮಾಡ್ಬೇಡಿ (Use Spray Only) ಮಗ್ ಅಥವಾ ಪೈಪ್‌ನಿಂದ ರಭಸವಾಗಿ ನೀರು ಸುರಿಯಬೇಡಿ. ಇದರಿಂದ ಬೀಜಗಳು ಕೊಚ್ಚಿಹೋಗುತ್ತವೆ ಅಥವಾ ಮಣ್ಣಿನ ಕೆಳಗೆ ಹುದುಗಿ ಕೊಳೆತುಹೋಗುತ್ತವೆ. ಯಾವಾಗಲೂ ಸ್ಪ್ರೇ ಬಾಟಲ್ ಮೂಲಕ ಮಣ್ಣು ತೇವವಾಗುವಂತೆ ಮಾತ್ರ ನೀರು ಸಿಂಪಡಿಸಿ.
77
6. ಬಿಸಿಲು ಮತ್ತು ಸ್ಥಳ
6. ಬಿಸಿಲು ಮತ್ತು ಸ್ಥಳ ಕುಂಡವನ್ನು ದಿನಕ್ಕೆ ಕೇವಲ 2 ರಿಂದ 3 ಗಂಟೆ ಮುಂಜಾನೆಯ ಎಳೆಬಿಸಿಲು ಬೀಳುವ ಜಾಗದಲ್ಲಿಡಿ. ಸುಡುವ ಮಧ್ಯಾಹ್ನದ ಬಿಸಿಲಿನಲ್ಲಿಟ್ಟರೆ ಎಲೆಗಳು ಒಣಗಿಹೋಗುತ್ತವೆ.
ಕೇವಲ 7 ರಿಂದ 8 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. 15 ರಿಂದ 20 ದಿನಗಳ ಹೊತ್ತಿಗೆ ಅಡುಗೆಗೆ ಬಳಸುವಷ್ಟು ಸೊಂಪಾದ, ಹಸಿರಾದ ಕೊತ್ತಂಬರಿ ಸೊಪ್ಪು ಸಿದ್ಧವಾಗುತ್ತದೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.