ಇಡ್ಲಿ, ದೋಸೆಗೆ ಕೊಬ್ಬರಿ ಚಟ್ನಿ ಬದಲು ದಾಳಿಂಬೆ ಚಟ್ನಿ ಟ್ರೈ ಮಾಡಿ, ಸಖತ್ ರುಚಿ! ಇಲ್ಲಿದೆ ಹೊಸ ರೆಸಿಪಿ!

Published : Oct 22, 2026, 10:52 AM IST

Pomegranate Chutney Recipe ನೀವು ಹೊಸ ರೆಸಿಪಿ ಹುಡುಕುತ್ತಿದ್ದರೆ, ನಿಮಗಾಗಿ ಹೊಸ ರೆಸಿಪಿಯೊಂದು ಇಲ್ಲಿದೆ. ಕೊಬ್ಬರಿ ಚಟ್ನಿ ಬದಲಿಗೆ ಐರನ್ ರಿಚ್ ಆಗಿರುವ ದಾಳಿಂಬೆ ಚಟ್ನಿ ತಯಾರಿಸಿ ಚಪ್ಪರಿಸಿ ತಿನ್ನಿ. ದಾಳಿಂಬೆ ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ

PREV
14
ದಾಳಿಂಬೆ ಚಟ್ನಿ ತಿಂದಿದ್ದೀರಾ?

ನಮ್ಮ ಹಿರಿಯರ ಕಾಲದಲ್ಲಿ ಪಾಕ ವಿಧಾನದಲ್ಲಿ ಅಂದರೆ ಅಡುಗೆ ದಿನನಿತ್ಯದ ಅಡುಗೆಯಲ್ಲಿ ಹೆಚ್ಚಿನ ಹೊಸ ರೆಸಿಪಿ ಪ್ರಯೋಗಗಳೇನೂ ಇರಲಿಲ್ಲ. ಬೆಳಗ್ಗೆ ಉಪ್ಪಿಟ್ಟು, ಇಡ್ಲಿ, ಮಧ್ಯಾಹ್ನ ಚಪಾತಿ ಅನ್ನ, ರಾತ್ರಿ ಊಟಕ್ಕೂ ಅದೇ ಅನ್ನ ಸಾರು.. ಹೀಗೆ ದಿನದ ಅಡುಗೆ ಮಾಡಲಾಗುತ್ತಿತ್ತು. ಹಬ್ಬದಲ್ಲಿ ಮಾತ್ರ ಒಂದು ಸಿಹಿ ತಿನಿಸು ಅದರಲ್ಲೂ ಹೆಚ್ಚಾಗಿ ಹೋಳಿಗೆ ಜೊತೆಗೆ ಅನ್ನ ಹೋಳಿಗೆ ಸಾರು ಸಿದ್ಧವಾಗುತ್ತಿದ್ದು ಬಿಟ್ಟರೆ ಸಾಮಾನ್ಯ ದಿನಗಳಲ್ಲಿ ವಿಶೇಷ ಅಡುಗೆ ಏನೂ ಇರುತ್ತಿರಲಿಲ್ಲ.

ಆದರೀಗ ಕಾಲ ಬದಲಾಗಿದೆ. ಗೃಹಿಣಿಯರು ಪ್ರತಿದಿನವೂ ಹೊಸ ಹೊಸ ರೆಸಿಪಿ ಹುಡುಕುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ದಿನವೂ ಅಡುಗೆ ಮನೆಯಲ್ಲಿ ಅದರ ಪ್ರಯೋಗ ನಡೆಯುತ್ತಲೇ ಇರುತ್ತದೆ. ನೀವು ಅಂತಹ ಹೊಸ ಹೊಸ ರೆಸಿಪಿ ಹುಡುಕುವ ವರ್ಗದವರಾಗಿದ್ದರೆ ಬನ್ನಿ ಹೊಸ ದಾಳಿಂಬೆ ಚಟ್ನಿ ಮಾಡುವುದು ಹೇಗೆ ತಿಳಿಯೋಣ.

ದಾಳಿಂಬೆಯಿಂದ ಚಟ್ನಿ ಮಾಡೋದಾ! ಇಂಥ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ದಾಳಿಂಬೆ ಅಂದರೆ ಹಣ್ಣು ತಿಂದೇ ಅಭ್ಯಾಸ. ಅದರಿಂದ ಚಟ್ನಿ ಮಾಡುವುದೆಂದರೆ ಹೊಸತು. ಆದರೆ ಬಹುತೇಕರಲ್ಲಿ ಇದೀಗ ದಾಳಿಂಬೆ ಚಟ್ನಿ ಮಾಡುವುದು ಹೆಚ್ಚಾಗುತ್ತಿದೆ.

24
ದಾಳಿಂಬೆ ಚಟ್ನಿ ತಯಾರಿಸೋದು ಸುಲಭ

ದಾಳಿಂಬೆ ಚಟ್ನಿ ತುಂಬಾ ರುಚಿ ನೋಡೋಕೂ ಆಕರ್ಷಣೆ, ನೋಡಿದ್ರೆನೇ ಬಾಯಲ್ಲಿ ನೀರೂರಿಸುತ್ತೆ. ದಾಳಿಂಬೆ ಚಟ್ನಿ ಸವಿಯಲು ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಊಟದ ರುಚಿಯನ್ನು ಹೆಚ್ಚಿಸಲು ಉಪ್ಪಿನಕಾಯಿ, ಹಪ್ಪಳ, ಪುಡಿ, ಚಟ್ನಿ ಬಳಸುತ್ತೇವಲ್ಲವಾ? ಅದೇ ರೀತಿ ದಾಳಿಂಬೆ ಚಟ್ನಿ ಅನ್ನ-ಬೇಳೆ ಅಥವಾ ಸಾರು, ಪರಾಠ, ವಡಾಪಾವ್ ಅಥವಾ ಮೆಣಸಿನಕಾಯಿ ಭಜಿಗೆ ಸಕತ್ ರುಚಿ ಹೆಚ್ಚಿಸುತ್ತೆ.

ಚಟ್ನಿ ವಿಷಯಕ್ಕೆ ಬಂದ್ರೆ ನಾವು ಸಾಮಾನ್ಯವಾಗಿ ಕಾಯಿ ಚಟ್ನಿ ಮಾಡ್ತೇವೆ, ಇಡ್ಲಿ ಇರಲಿ, ದೋಸೆ ಇರಲಿ, ಚಪಾತಿ, ಪೂರಿ ಇರಲಿ ಎಲ್ಲದಕ್ಕು ಕೊಬ್ಬರಿ ಚಟ್ನಿ ಮಾಡಲಾಗುತ್ತೆ. ಆದರೆ ಅದರ ಬದಲು ದಾಳಿಂಬೆ ಚಟ್ನಿ ಮಾಡಿದ್ರೆ ಹೇಗೆ? ದಾಳಿಂಬೆ ಚಟ್ನಿ ಮಾಡೋದು ಕಷ್ಟಕರವಲ್ಲ, ಇಲ್ಲಿ ಸರಳವಾಗಿ ಹೇಗೆ ಮಾಡೋದು ಅನ್ನೋದು ತಿಳಿಸಲಾಗಿದೆ. ನೀವು ಈ ಸುಲಭ ವಿಧಾನವನ್ನು ಅನುಸರಿಸಿ 'ದಾಳಿಂಬೆ ಚಟ್ನಿ'ಯನ್ನು ತಯಾರಿಸಬಹುದು.

34
ದಾಳಿಂಬೆ ಚಟ್ನಿ ಮಾಡುವುದು ಹೇಗೆ, ಇಲ್ಲಿದೆ ಸುಲಭ ರೆಸಿಪಿ

ಸಂತೆಯಯಲ್ಲಿ, ಸಾಮಾನ್ಯ ಹಣ್ಣು ವ್ಯಾಪಾರಸ್ಥರಲ್ಲಿ ದಾಳಿಂಬೆ ಸಿಗುತ್ತವೆ. ನೀವು ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಇಷ್ಟಪಡುವವರಾಗಿದ್ದರೆ ಈ ದಾಳಿಂಬೆ ಚಟ್ನಿ ನಿಮಗೆ ಹೇಳಿಮಾಡಿಸಿದಂತಿದೆ. ಇದನ್ನು ಸಾಮಾನ್ಯ ಊಟದ ಜೊತೆಗೆ ಸೇವಿಸಬಹುದು. ಚಟ್ನಿ ತಯಾರಿಸಲು ಹೆಚ್ಚಿನ ಸಮಯವೂ ಬೇಕಿಲ್ಲ. ಅಡುಗೆ ಮನೆಯಲ್ಲಿರುವ ಕೆಲವೇ ಪದಾರ್ಥ ಬಳಸಿಕೊಂಡು ಇದನ್ನ ರೆಡಿ ಮಾಡಬಹುದು. ದಾಳಿಂಬೆ ಕಾಳುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ (ಐರನ್) ಸಿಗುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.

ಬೇಕಾಗುವ ಪದಾರ್ಥಗಳು

  • ದಾಳಿಂಬೆ
  • ಶುಂಠಿ
  • ಬೆಳ್ಳುಳ್ಳಿ
  • ಹಸಿರು ಮೆಣಸಿನಕಾಯಿ
  • ಪುದೀನಾ ಎಲೆಗಳು
  • ಈರುಳ್ಳಿ
  • ಟೊಮೆಟೋ
  • ಉಪ್ಪು
  • ನೀರು
44
ದಾಳಿಂಬೆ ಚಟ್ನಿ ಮಾಡುವ ವಿಧಾನ

ಚಟ್ನಿ ತಯಾರಿಸುವ ಮೊದಲು ದಾಳಿಂಬೆ ಕಾಳುಗಳನ್ನು ತೊಳೆದು ಸ್ವಚ್ಛಗೊಳಿಸಿ, ಅದರಿಂದ ಕಾಳುಗಳನ್ನು ಬೇರ್ಪಡಿಸಿ.

ಒಂದು ಮಿಕ್ಸರ್ ಜಾರ್‌ನಲ್ಲಿ ದಾಳಿಂಬೆ ಕಾಳುಗಳು, ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಚಟ್ನಿ ತಯಾರಿಸಲು ಸ್ವಲ್ಪ ನೀರನ್ನು ಸೇರಿಸುವುದು ಅಗತ್ಯ.

ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ, ಈರುಳ್ಳಿ, ಟೊಮೆಟೊ ಮತ್ತು ಸ್ವಲ್ಪ ಸಿಹಿಯನ್ನು (ಬೆಲ್ಲ ಅಥವಾ ಸಕ್ಕರೆ) ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ.

ಹೀಗೆ ತಯಾರಿಸಿದ ಚಟ್ನಿಯನ್ನು ರೆಫ್ರಿಜರೇಟರ್‌ನಲ್ಲಿ (ಫ್ರಿಡ್ಜ್‌ನಲ್ಲಿ) ಇಟ್ಟರೆ, ಅದು 4 ರಿಂದ 5 ದಿನಗಳವರೆಗೆ ಕೆಡದಂತೆ ಇರುತ್ತದೆ.

ಸುಲಭ ವಿಧಾನದಲ್ಲಿ ತಯಾರಿಸಿದ ರುಚಿಕರವಾದ ದಾಳಿಂಬೆ ಚಟ್ನಿ ಕೆಲವೇ ನಿಮಿಷದಲ್ಲಿ ರೆಡಿ.

ಚಟ್ನಿ ಖಾರವಾಗಿರಬೇಕೆಂದರೆ, ನೀವು ಅದರಲ್ಲಿ ಮೆಣಸಿನಕಾಯಿಯ ಪ್ರಮಾಣವನ್ನು ಹೆಚ್ಚಿಸಬಹುದು. ಇದರಿಂದ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories