Whisky: ಮದ್ಯ ಪ್ರಿಯರು ವಿಸ್ಕಿಯನ್ನ ಇಷ್ಟಪಟ್ಟು ಕುಡಿಯುತ್ತಾರೆ. ಇದೊಂದು ಕ್ಲಾಸಿಕ್ ಡ್ರಿಂಕ್. ಆದರೆ ಹೆಚ್ಚಿನವರಿಗೆ ಸರಿಯಾಗಿ ಕುಡಿಯುವುದು ಹೇಗೆಂದು ಗೊತ್ತಿಲ್ಲದೆ ಅದರ ರುಚಿ, ಅನುಭವ ಕಳೆದುಕೊಳ್ಳುತ್ತಾರೆ. ಒಂದು ಪೆಗ್ ಪರ್ಫೆಕ್ಟ್ ಆಗಿ ಆನಂದಿಸಬೇಕಾದರೂ ಕೆಲವು ಸರಳ ನಿಯಮ ಪಾಲಿಸಬೇಕು.
ವಿಸ್ಕಿಯನ್ನು ಯಾವ ಗ್ಲಾಸ್‌ನಲ್ಲಿ ಸರ್ವ್ ಮಾಡಲಾಗುತ್ತದೆಯೋ ಅದು ಅದರ ಫ್ಲೇವರ್ ಮೇಲೆ ಪರಿಣಾಮ ಬೀರುತ್ತದೆ. ರಾಕ್ ಗ್ಲಾಸ್ ಅಥವಾ ಟಂಬ್ಲರ್ ಗ್ಲಾಸ್‌ನಲ್ಲಿ ಸರ್ವ್ ಮಾಡುವುದು ಉತ್ತಮ. ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ಕುಡಿದರೆ ವಿಸ್ಕಿಯ ಅಸಲಿ ವಾಸನೆ ಕಡಿಮೆಯಾಗುತ್ತದೆ.
25
ಐಸ್ ಹೇಗೆ ಬಳಸಬೇಕೆಂದು ತಿಳಿಯಿರಿ
ವಿಸ್ಕಿಯನ್ನು ಸ್ವಲ್ಪ ತಣ್ಣಗಾಗಿಸುವುದು ಒಳ್ಳೆಯದು. ಆದರೆ ಹೆಚ್ಚು ಐಸ್ ಹಾಕಿದರೆ ಡ್ರಿಂಕ್ಸ್ ನೀರಾಗುತ್ತದೆ. ಚಿಕ್ಕ ಕ್ಯೂಬ್‌ಗಳ ಬದಲು ದೊಡ್ಡ ಐಸ್ ಕ್ಯೂಬ್ ಅಥವಾ ವಿಸ್ಕಿ ಸ್ಟೋನ್ಸ್ ಬಳಸಿ. ವಿಸ್ಕಿ ಕುಡಿಯುವಾಗ 'ಬ್ಯಾಲೆನ್ಸ್' ಬಹಳ ಮುಖ್ಯ.
35
ಎಷ್ಟು ನೀರು ಸೇರಿಸಬೇಕು?
ವಿಸ್ಕಿಗೆ ನೀರು ಸೇರಿಸಿದರೆ ರುಚಿ ಹಾಳಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಸ್ವಲ್ಪ ನೀರು ಸೇರಿಸುವುದರಿಂದ ವಿಸ್ಕಿಯಲ್ಲಿ ಅಡಗಿರುವ ಫ್ಲೇವರ್‌ಗಳು ಹೊರಬರುತ್ತವೆ. ಹೆಚ್ಚು ನೀರು ಹಾಕಿದರೆ ವಿಸ್ಕಿಯ ರುಚಿ ಕಡಿಮೆಯಾಗುತ್ತದೆ.
ಬಾಟಲಿ ತೆರೆದ ತಕ್ಷಣ ಗ್ಲಾಸ್‌ಗೆ ಹಾಕಿ ಕುಡಿಯುವುದು ಹಲವರ ಅಭ್ಯಾಸ. ಆದರೆ ಉತ್ತಮ ಅನುಭವಕ್ಕಾಗಿ 1-2 ನಿಮಿಷ ಅದನ್ನು ಗಾಳಿಯಲ್ಲಿ ಬಿಡಿ. ಆಗ ಅದರ ಸುವಾಸನೆ ಸಂಪೂರ್ಣವಾಗಿ ಹೊರಬರುತ್ತದೆ. ವೈನ್‌ಗೆ ಗಾಳಿ ಎಷ್ಟು ಮುಖ್ಯವೋ, ವಿಸ್ಕಿಗೂ ಅಷ್ಟೇ.
55
ಮಿತಿ ತಿಳಿದುಕೊಳ್ಳುವುದು ಕೂಡ ಮುಖ್ಯ
'ಪರ್ಫೆಕ್ಟ್ ಪೆಗ್' ಎಂದರೆ ಸರಿಯಾದ ಪ್ರಮಾಣದಲ್ಲಿ ಕುಡಿಯುವುದು. ಸಾಮಾನ್ಯವಾಗಿ 30 ml ನಿಂದ 60 ml ಸಾಕು. ಇದಕ್ಕಿಂತ ಹೆಚ್ಚು ಕುಡಿದರೆ ತಲೆನೋವು ಬರಬಹುದು. ಇಷ್ಟ ಬಂದಂತೆ ಕುಡಿದರೆ ಆರೋಗ್ಯ ಹಾಳಾಗುತ್ತದೆ.