How to clean mirrors without streaks: ನಿಮ್ಮ ಮನೆಯ ಕೊಳಕು ಕನ್ನಡಿ ಕೇವಲ 2 ನಿಮಿಷದಲ್ಲಿ ಹೊಸದರಂತೆ ಹೊಳೆಯಬೇಕೇ? ಹಾಗಿದ್ದರೆ ಕನ್ನಡಿಯ ಮೇಲೆ ಗೀರು ಬೀಳದಂತೆ ಸ್ವಚ್ಛಗೊಳಿಸುವ 2 ಸಿಂಪಲ್ ಹ್ಯಾಕ್ಸ್ ಇಲ್ಲಿವೆ!
ಸರಿಯಾಗಿ ಕ್ಲೀನ್ ಮಾಡದಿದ್ರೆ ಗೀರುಗಳು ಹಾಗೆಯೇ ಉಳಿಯುತ್ತವೆ
ಸರಿಯಾಗಿ ಕ್ಲೀನ್ ಮಾಡದಿದ್ರೆ ಗೀರುಗಳು ಹಾಗೆಯೇ ಉಳಿಯುತ್ತವೆ ಮುಖ ನೋಡಿಕೊಳ್ಳುವ ಕನ್ನಡಿ (Mirror) ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಹೇಗೆ ಸ್ವಚ್ಛಗೊಳಿಸಬೇಕು ಎಂಬ ಮಾಹಿತಿ ಹೆಚ್ಚಿನ ಜನರಿಗೆ ಇರುವುದಿಲ್ಲ. ಈ ಕನ್ನಡಿಗಳು ಬಾಕಿ ಗಾಜಿನ ವಸ್ತುಗಳಿಗಿಂತ ಸ್ವಲ್ಪ ಭಿನ್ನ ಮತ್ತು ಸೂಕ್ಷ್ಮವಾಗಿರುತ್ತವೆ (Delicate). ಒಂದು ವೇಳೆ ಇದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸದಿದ್ದರೆ, ಬೇಗನೆ ಅದರ ಮೇಲೆ ಗೀರುಗಳು (Scratches) ಬೀಳುತ್ತವೆ.
27
ನೀವು ತಿಳಿದುಕೊಳ್ಳಿ ಈ ಟ್ರಿಕ್ಸ್
ನೀವು ತಿಳಿದುಕೊಳ್ಳಿ ಈ ಟ್ರಿಕ್ಸ್ ಕನ್ನಡಿಯ ಮೇಲಿನ ಗೀರುಗಳು ನಿಮ್ಮ ಮುಖದ ಅಂದವನ್ನು ನೋಡಲು ಅಡ್ಡಿಪಡಿಸುತ್ತವೆ. ಸ್ವಚ್ಛವಾಗಿರುವ ಕನ್ನಡಿಯಲ್ಲಿ ಮಾತ್ರ ನೀವು ನಿಮ್ಮ ಸೌಂದರ್ಯವನ್ನು ಸರಿಯಾಗಿ ಸವಿಯಲು ಸಾಧ್ಯ. ಇದೇ ಕಾರಣಕ್ಕೆ ಬ್ಯೂಟಿ ಪಾರ್ಲರ್ ಅಥವಾ ಸಲೂನ್‌ಗಳಲ್ಲಿ ಕನ್ನಡಿಯನ್ನು ಸ್ವಚ್ಛಗೊಳಿಸಲು ವಿಶೇಷ ಟ್ರಿಕ್ಸ್ ಬಳಸುತ್ತಾರೆ. ಆ ಟ್ರಿಕ್ಸ್‌ಗಳನ್ನು ನೀವು ತಿಳಿದುಕೊಂಡರೆ, ನಿಮ್ಮ ರೂಂ ಹಾಗೂ ಬಾತ್‌ರೂಂ ಕನ್ನಡಿಗಳು ಯಾವಾಗಲೂ ಹೊಳೆಯುತ್ತವೆ ಮತ್ತು ಅವುಗಳ ಮೇಲೆ ಯಾವುದೇ ಗೀರುಗಳು ಬೀಳುವುದಿಲ್ಲ.
37
ಬಟ್ಟೆಯಿಂದ ಸ್ವಚ್ಛಗೊಳಿಸುವ ತಪ್ಪು ಮಾಡಬೇಡಿ
ಬಟ್ಟೆಯಿಂದ ಸ್ವಚ್ಛಗೊಳಿಸುವ ತಪ್ಪು ಮಾಡಬೇಡಿ ಮುಖ ನೋಡುವ ಕನ್ನಡಿಯನ್ನು ಎಂದಿಗೂ ಸಾಮಾನ್ಯ ಬಟ್ಟೆಯಿಂದ ಒರೆಸುವ ತಪ್ಪು ಮಾಡಬೇಡಿ. ಬಟ್ಟೆಯಿಂದ ಒರೆಸಿದರೆ ಕನ್ನಡಿಯ ಮೇಲೆ ಬೇಗನೆ ಗೀರುಗಳು ಬಿದ್ದು, ಮುಖ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಅಷ್ಟೇ ಅಲ್ಲದೆ, ಕ್ಲೀನರ್ ಸ್ಪ್ರೇ ಮಾಡಿ ಬಟ್ಟೆಯಿಂದ ಒರೆಸಿದಾಗ ಬಟ್ಟೆಯಲ್ಲಿರುವ ಸಣ್ಣ ಸಣ್ಣ ನೂಲಿನ ಎಳೆಗಳು ಕನ್ನಡಿಯ ಮೇಲೆ ಅಂಟಿಕೊಳ್ಳುತ್ತವೆ.
ನೀರು ಹಾಕಿ ತೊಳೆಯಬೇಡಿ ಇದರ ಜೊತೆಗೆ, ಮುಖ ನೋಡುವ ಕನ್ನಡಿಗೆ ನೇರವಾಗಿ ನೀರು ಹಾಕಿ ತೊಳೆಯಬಾರದು. ಹೆಚ್ಚಿನ ಕನ್ನಡಿಗಳ ಹಿಂಭಾಗದಲ್ಲಿ ಪೇಂಟ್ ಕೋಟಿಂಗ್ ಇರುತ್ತದೆ, ನೀರು ತಗುಲಿದರೆ ಅದು ಹಾಳಾಗಬಹುದು. ಅಲ್ಲದೆ, ದೀರ್ಘಕಾಲದವರೆಗೆ ನೀರಿನ ಕಲೆಗಳು ಕನ್ನಡಿಯ ಮೇಲೆ ಹಾಗೇ ಉಳಿದುಬಿಡುತ್ತವೆ. ಹಾಗಾದರೆ ಕನ್ನಡಿಯನ್ನು ಕ್ಲೀನ್ ಮಾಡಲು ಇರುವ ಆ 2 ಮ್ಯಾಜಿಕ್ ಹ್ಯಾಕ್ಸ್ ಯಾವುವು ಎಂದು ತಿಳಿಯೋಣ.
57
1. ದಿನಪತ್ರಿಕೆ (Newspaper) ಬಳಸಿ ಸ್ವಚ್ಛಗೊಳಿಸಿ
1. ದಿನಪತ್ರಿಕೆ (Newspaper) ಬಳಸಿ ಸ್ವಚ್ಛಗೊಳಿಸಿ *ಯೆಸ್. ಮುಖ ನೋಡುವ ಕನ್ನಡಿಯನ್ನು ಸ್ವಚ್ಛಗೊಳಿಸಲು ಇದು ಅತ್ಯಂತ ಸರಳ ಮತ್ತು ಹಳೆಯ ಮನೆಮದ್ದಾಗಿದೆ. ಇದನ್ನು ಪಾರ್ಲರ್ ಮತ್ತು ಸಲೂನ್‌ಗಳಲ್ಲೂ ಬಳಸುತ್ತಾರೆ. *ಮೊದಲಿಗೆ ಕನ್ನಡಿಯ ಮೇಲಿರುವ ಒಣ ಧೂಳನ್ನು ಒಂದು ಮೃದುವಾದ ಬಟ್ಟೆಯಿಂದ ತೆಗೆದುಹಾಕಿ. *ನಂತರ ದಿನಪತ್ರಿಕೆಯ (Newspaper) ದಪ್ಪನೆಯ ಪದರವನ್ನು ತೆಗೆದುಕೊಂಡು ಕೈಯಲ್ಲಿ ಸ್ವಲ್ಪ ಮುದ್ದೆ ಮಾಡಿ. *ಅದರ ಮೇಲೆ ಸ್ವಲ್ಪ ನೀರಿನ ಹನಿಗಳನ್ನು ಚಿಮುಕಿಸಿ (ಪೇಪರ್ ಲಘುವಾಗಿ ತೇವವಾಗಬೇಕು). *ಈಗ ಈ ತೇವವಾದ ನ್ಯೂಸ್‌ಪೇಪರ್‌ನಿಂದ ಕನ್ನಡಿಯನ್ನು ಚೆನ್ನಾಗಿ ಉಜ್ಜಿ. ಕನ್ನಡಿಯು ಫಳಫಳನೆ ಹೊಳೆಯಲು ಪ್ರಾರಂಭಿಸುತ್ತದೆ.
67
2. ಹಸಿ ಆಲೂಗಡ್ಡೆ (Raw Potato) ಉಜ್ಜಿ
2. ಹಸಿ ಆಲೂಗಡ್ಡೆ (Raw Potato) ಉಜ್ಜಿ *ಮುಖ ನೋಡುವ ಕನ್ನಡಿಯನ್ನು ಹೊಳೆಯುವಂತೆ ಮಾಡಲು ಹಸಿ ಆಲೂಗಡ್ಡೆಯನ್ನು ಬಳಸಿ. *ಆಲೂಗಡ್ಡೆಯನ್ನು ಕತ್ತರಿಸಿ ಕನ್ನಡಿಯ ಮೇಲೆ ಚೆನ್ನಾಗಿ ಉಜ್ಜಿ. *ನಂತರ ಒಂದು ಸ್ವಚ್ಛವಾದ ಹಾಗೂ ಮೃದುವಾದ ಬಟ್ಟೆಯನ್ನು ಲಘುವಾಗಿ ತೇವಗೊಳಿಸಿ ಕನ್ನಡಿಯನ್ನು ಒರೆಸಿ. *ಹೀಗೆ ಮಾಡುವುದರಿಂದ ಕನ್ನಡಿಯ ಮೇಲಿರುವ ಎಲ್ಲಾ ಧೂಳು ಮತ್ತು ಕಲೆಗಳು ಮಾಯವಾಗುತ್ತವೆ ಹಾಗೂ ಯಾವುದೇ ಗೀರುಗಳು ಬೀಳುವುದಿಲ್ಲ.
77
ಇಂದೇ ಟ್ರೈ ಮಾಡಿ
ಇಂದೇ ಟ್ರೈ ಮಾಡಿ ಈ ಎರಡು ಸಿಂಪಲ್ ಹ್ಯಾಕ್ಸ್ ನಿಮ್ಮ ಕನ್ನಡಿಯನ್ನು ಗೀರು ಮುಕ್ತವಾಗಿರುಸುತ್ತದೆ ಮತ್ತು ಕನ್ನಡಿಯು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇನ್ನೇಕೆ ತಡ, ನಿಮ್ಮ ಮನೆಯ ಕನ್ನಡಿಗಳನ್ನು ಸ್ವಚ್ಛಗೊಳಿಸಲು ಈ 2 ಹ್ಯಾಕ್ಸ್ ಇಂದೇ ಟ್ರೈ ಮಾಡಿ ಮತ್ತು ವ್ಯತ್ಯಾಸವನ್ನು ನೀವೇ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.