ಬೇಸಿಗೆಯಲ್ಲಿ ಹೆಲ್ಮೆಟ್ ವಾಸನೆ ಬರ್ತಿದ್ರೆ ಈ ಸಿಂಪಲ್ ಟ್ರಿಕ್ಸ್ ಬಳಸಿ ಕ್ಲೀನ್ ಮಾಡಿ

Published : May 04, 2026, 11:23 AM IST

helmet cleaning tips : ಪ್ರತಿ ದಿನ ಹೆಲ್ಮೆಟ್ ಬಳಕೆ ಮಾಡೋದ್ರಿಂದ ಹೆಲ್ಮೆಟ್ ಕೊಳಕಾಗೋದು ಸಾಮಾನ್ಯ. ಹೆಲ್ಮೆಟ್ ಕ್ಲೀನ್ ಮಾಡೋದು ಬಹಳ ಮುಖ್ಯ. ಕೆಲ ಸುಲಭ ಉಪಾಯಗಳಿಂದ ನೀವು ಹೆಲ್ಮೆಟ್ ಸ್ವಚ್ಛಗೊಳಿಸಬಹುದು. 

PREV
15
ಮನೆಯಲ್ಲೇ ಹೆಲ್ಮೆಟ್ ಕ್ಲೀನ್ ಮಾಡಿ

ಬೇಸಿಗೆಯಲ್ಲಿ ಹೆಚ್ಚು ಬೆವರು ಬರೋದ್ರಿಂದ ಹೆಲ್ಮೆಟ್ ವಾಸನೆ ಬರುತ್ತದೆ. ಬೇಗನೆ ಕೊಳಕಾಗುತ್ತದೆ. ಇದ್ರಿಂದ ಹೆಲ್ಮೆಟ್ ಧರಿಸಲು ಕಿರಿಕಿರಿ ಆಗೋದು ಮಾತ್ರವಲ್ಲ ಸ್ಕಿನ್ ಹಾಗೂ ಕೂದಲಿಗೆ ತೊಂದ್ರೆಯಾಗುತ್ತದೆ. ಸ್ಕಿನ್ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಎಷ್ಟೇ ಒಳ್ಳೆ ಹೆಲ್ಮೆಟ್ ಧರಿಸಿದ್ರೂ ಈ ಸಮಸ್ಯೆ ಸಾಮಾನ್ಯ.ಹೆಲ್ಮೆಟ್ ಗೆ ಬೆವರು ಅಂಟಿಕೊಂಡು ಅದು ಸದಾ ಒದ್ದೆಯಾಗಿರೋದ್ರಿಂದ ಈ ಸಮಸ್ಯೆ ಕಾಡುತ್ತದೆ. ತೇವವಿರುವ ಜಾಗದಲ್ಲಿ ಬ್ಯಾಕ್ಟೀರಿಯಾ ಬೇಗ ಬೆಳೆದುಕೊಳ್ಳುತ್ತದೆ. ಹೆಲ್ಮೆಟ್ನಿಂದ ಯಾವುದೇ ಸಮಸ್ಯೆ ಆಗ್ಬಾರದು ಅಂದ್ರೆ ನೀವು ಮನೆಯಲ್ಲೇ ಹೆಲ್ಮೆಟ್ ಕ್ಲೀನ್ ಮಾಡ್ಬೇಕು.

25
ಹೆಲ್ಮೆಟ್ ಕ್ಲೀನ್ ಮಾಡುವ ಮೊದಲ ಹಂತ

ನೀವು ಮನೆಯಲ್ಲಿಯೇ ಹೆಲ್ಮೆಟ್ ಕ್ಲೀನ್ ಮಾಡ್ತೀರಿ ಎಂದಾದ್ರೆ ಮೊದಲು ಹೆಲ್ಮೆಟ್ ಮೆನ್ಯುವಲ್ ಚೆಕ್ಮಾಡಿ. ಅದ್ರಲ್ಲಿ ಹೆಲ್ಮೆಟ್ ನ ಯಾವ ಯಾವ ಭಾಗವನ್ನು ನೀವು ರಿಮೂ ಮಾಡ್ಬಹುದು ಎನ್ನುವ ಮಾಹಿತಿ ಇರುತ್ತದೆ. ಇದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ನೀವು ಎಲ್ಲ ಭಾಗವನ್ನು ತೆಗೆಯಲು ಮುಂದಾದ್ರೆ ಹೆಲ್ಮೆಟ್ ಒಡೆಯುತ್ತದೆ. ಹಾಗಾಗಿ ಇದ್ರ ಬಗ್ಗೆ ಎಚ್ಚರಿಕೆವಹಿಸೋದು ಬಹಳ ಮುಖ್ಯ. ನಂತ್ರ ನಿಧಾನವಾಗಿ ಹೆಲ್ಮೆಟ್ ಭಾಗವನ್ನು ತೆಗೆಯಿರಿ.

35
ಬಿಡಿ ಭಾಗ ಕ್ಲೀನ್ ಮಾಡಿ

ಹೆಲ್ಮೆಟ್ ನಲ್ಲಿ ತೆಗೆಯಬಹುದಾದ ಲೈನರ್ಗಳನ್ನು ತೆಗೆದು ಸೌಮ್ಯವಾದ ಡಿಟರ್ಜೆಂಟ್ ಅಥವಾ ಬೇಬಿ ಶಾಂಪೂ ಬಳಸಿ ಕೈಯಿಂದ ತೊಳೆಯಿರಿ. ಲೈನರ್ಗಳು ತೆಗೆಯಲಾಗದಿದ್ದರೆ, ಹೆಲ್ಮೆಟ್-ಸುರಕ್ಷಿತ ಆಂಟಿಬ್ಯಾಕ್ಟೀರಿಯಲ್ ಸ್ಪ್ರೇನಿಂದ ಅವುಗಳನ್ನು ಸ್ವಚ್ಛಗೊಳಿಸಿ. ಒದ್ದೆಯಾದ ಬಟ್ಟೆಯಿಂದ ಒರೆಸಿ. ನೀರಿಗೆ ಸೌಮ್ಯವಾದ ಸೋಂಕುನಿವಾರಕದ ಕೆಲವು ಹನಿಗಳನ್ನು ಸೇರಿಸಿ. ಎಲ್ಲಾ ಪ್ಯಾಡ್ಗಳು ಮತ್ತು ಲೈನರ್ಗಳನ್ನು ಗಾಳಿಯಲ್ಲಿ ಒಣಗಿಸಿ. ಹೇರ್ ಡ್ರೈಯರ್ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಎಂದಿಗೂ ಒಣಗಿಸಬೇಡಿ.

45
ಹೊರಗಿನ ಭಾಗ ಸ್ವಚ್ಛಗೊಳಿಸಿ

ಹೆಲ್ಮೆಟ್ನ ಹೊರಭಾಗವನ್ನು ನೀವು ಪ್ರತಿ ಪ್ರಯಾಣದ ನಂತ್ರ ಕ್ಲೀನ್ ಮಾಡಬೇಕು. ಮೈಕ್ರೋಫೈಬರ್ ಬಟ್ಟೆ ಮತ್ತು ಸೌಮ್ಯವಾದ ಸೋಪಿನ ನೀರಿನಿಂದ ಮೇಲ್ಬಾಗವನ್ನು ಒರೆಸಿ. ಇದು ಮಣ್ಣು, ಕೊಳಕು ಮತ್ತು ಕೀಟಗಳ ಕಲೆಗಳನ್ನು ತೆಗೆದುಹಾಕುತ್ತದೆ. ಹೆಲ್ಮೆಟ್ ಗೆ ಕಲೆ ಹಿಡಿದುಕೊಂಡಿದ್ದರೆ 10-15 ನಿಮಿಷಗಳ ಕಾಲ ಆ ಪ್ರದೇಶದ ಮೇಲೆ ಒದ್ದೆಯಾದ ಬಟ್ಟೆಯನ್ನು ಬಿಡಿ, ನಂತರ ಅದನ್ನು ಸ್ವಚ್ಛಗೊಳಿಸಿ. ಕಠಿಣ ಕ್ಲೀನರ್ಗಳನ್ನು ಬಳಸುವುದನ್ನು ತಪ್ಪಿಸಿ. ಒರಟಾದ ಬಟ್ಟೆಯಲ್ಲಿ ಹೆಲ್ಮೆಟ್ ಒರೆಸಬೇಡಿ. ಇದ್ರಿಂದ ಕಲೆಯಾಗುವ ಸಾಧ್ಯತೆ ಇರುತ್ತದೆ.

55
ಇದು ನೆನಪಿರಲಿ

ಒಮ್ಮೆ ಖರೀದಿ ಮಾಡಿದ ಹೆಲ್ಮೆಟನ್ನು ಜೀವನಪರ್ಯಂತ ಬಳಸಲು ಬರೋದಿಲ್ಲ. ನೀವು ಅದನ್ನು ಬದಲಿಸಬೇಕು. ಹೆಲ್ಮೆಟ್ ಹಾಳಾಗಿದೆ ಎಂಬುದನ್ನು ನೀವು ತಿಳಿಯಬೇಕು. ಪ್ಯಾಡಿಂಗ್ ಚಪ್ಪಟೆಯಾಗಲು ಪ್ರಾರಂಭಿಸಿದರೆ, ಸಡಿಲವಾಗಿದ್ದರೆ ಅಥವಾ ಸ್ವಚ್ಛಗೊಳಿಸಿದ ನಂತರವೂ ವಾಸನೆ ಬರಲು ಪ್ರಾರಂಭಿಸಿದರೆ, ಲೈನರ್ಗಳನ್ನು ಅಪ್ಗ್ರೇಡ್ ಮಾಡುವುದು ಅಥವಾ ಹೊಸ ಹೆಲ್ಮೆಟ್ ಖರೀದಿಸಿ. ಹಾಗೆಯೇ ಕ್ಲೀನ್ ಮಾಡುವ ಆತುರದಲ್ಲಿ ಪರಿಮಳಯುಕ್ತ ಸ್ಪ್ರೇಗಳನ್ನು ಅತಿಯಾಗಿ ಬಳಕೆ ಮಾಡಬೇಡಿ. ಅವು ಬ್ಯಾಕ್ಟೀರಿಯಾ ಅಥವಾ ತೇವಾಂಶ ಸಮಸ್ಯೆಗಳಿಗೆ ಪರಿಹಾರವಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories