5 ನಿಮಿಷದಲ್ಲಿ ತಯಾರಿಸಿ ಸ್ಯಾಂಡ್‌ವಿಚ್; ಟೇಸ್ಟ್ ಹೆಚ್ಚಳಕ್ಕೆ ಇಷ್ಟು ಮಾಡಿದ್ರೆ ಸಾಕು

Published : May 03, 2026, 10:26 PM IST

ಕಡಿಮೆ ಸಮಯದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ತಿಂಡಿ ಮಾಡಲು ಸೌತೆಕಾಯಿ ಸ್ಯಾಂಡ್‌ವಿಚ್ ಒಂದು ಉತ್ತಮ ಆಯ್ಕೆಯಾಗಿದೆ. ಪುದೀನಾ ಚಟ್ನಿ, ಸೌತೆಕಾಯಿ ಮತ್ತು ಬ್ರೆಡ್ ಬಳಸಿ ತಯಾರಿಸುವ ಈ ತಿಂಡಿಯನ್ನು ಮಕ್ಕಳು ಮತ್ತು ದೊಡ್ಡವರು ಇಷ್ಟಪಟ್ಟು ತಿನ್ನುತ್ತಾರೆ.

PREV
14
ಸೌತೆಕಾಯಿ ಸ್ಯಾಂಡ್‌ವಿಚ್

ಕಡಿಮೆ ಸಮಯದಲ್ಲಿ ಹೆಲ್ದೀ ಮತ್ತು ಟೇಸ್ಟಿ ತಿಂಡಿ ಮಾಡಬೇಕು ಅನಿಸಿದ್ರೆ, Cucumber Sandwich ಒಂದು ಬೆಸ್ಟ್ ಆಯ್ಕೆ. ಬೇಸಿಗೆಯಲ್ಲಿ ಪುದೀನಾ ಚಟ್ನಿಯ ಫ್ರೆಶ್ ಫ್ಲೇವರ್ ಇದಕ್ಕೆ ಇನ್ನಷ್ಟು ಮಜಾ ಕೊಡುತ್ತೆ. ಈ ಸ್ಯಾಂಡ್‌ವಿಚ್‌ನ್ನು ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಹೆಚ್ಚು ಶ್ರಮವಿಲ್ಲದೆ ನೀವು ಇದನ್ನು ಬೆಳಗಿನ ತಿಂಡಿಗೆ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಬಹುದು.

24
ಬೇಕಾಗುವ ಸಾಮಗ್ರಿಗಳು (Ingredients)

4 ಬ್ರೆಡ್ ಸ್ಲೈಸ್‌, 1 ಮಧ್ಯಮ ಗಾತ್ರದ ಸೌತೆಕಾಯಿ (ತೆಳುವಾಗಿ ಕತ್ತರಿಸಿದ್ದು), 2-3 ಚಮಚ ಪುದೀನಾ ಚಟ್ನಿ, 1 ಚಮಚ ಬೆಣ್ಣೆ ಅಥವಾ ಮೇಯನೇಸ್ (ಇದು ಆಪ್ಷನಲ್)

ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ (ಒಂದು ಚಿಟಿಕೆ), ಚಾಟ್ ಮಸಾಲಾ (ಇದು ಕೂಡ ಆಪ್ಷನಲ್)

34
ಮಾಡುವ ವಿಧಾನ

ಮೊದಲು ಬ್ರೆಡ್ ಸ್ಲೈಸ್‌ಗಳನ್ನು ಒಂದು ಕ್ಲೀನ್ ಪ್ಲೇಟ್‌ನಲ್ಲಿ ಇಡಿ. ಬೇಕಿದ್ದರೆ, ಸ್ಯಾಂಡ್‌ವಿಚ್‌ನ ರುಚಿ ಮತ್ತು ಮೃದುತ್ವ ಹೆಚ್ಚಿಸಲು ಸ್ವಲ್ಪ ಬೆಣ್ಣೆ ಅಥವಾ ಮೇಯನೇಸ್ ಹಚ್ಚಿಕೊಳ್ಳಬಹುದು. ಈಗ ಬ್ರೆಡ್ ಮೇಲೆ ಪುದೀನಾ ಚಟ್ನಿಯನ್ನು ಸಮವಾಗಿ ಹರಡಿ. ಈ ಚಟ್ನಿ ಸ್ಯಾಂಡ್‌ವಿಚ್‌ಗೆ ಫ್ರೆಶ್ ಮತ್ತು ಖಾರ-ಹುಳಿ ರುಚಿ ಕೊಡುತ್ತದೆ.

ಸೌತೆಕಾಯಿಯ ತೆಳುವಾದ ಸ್ಲೈಸ್‌ಗಳನ್ನು ಬ್ರೆಡ್ ಮೇಲೆ ಚೆನ್ನಾಗಿ ಜೋಡಿಸಿ. ಸ್ಲೈಸ್‌ಗಳು ತುಂಬಾ ದಪ್ಪ ಇರದಂತೆ ನೋಡಿಕೊಳ್ಳಿ, ಆಗ ಸ್ಯಾಂಡ್‌ವಿಚ್ ಬ್ಯಾಲೆನ್ಸ್ಡ್ ಆಗಿರುತ್ತೆ. ಅದರ ಮೇಲೆ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲವನ್ನು ಲೈಟಾಗಿ ಸಿಂಪಡಿಸಿ. ಇದರಿಂದ ಸ್ಯಾಂಡ್‌ವಿಚ್ ಫ್ಲೇವರ್ ಇನ್ನಷ್ಟು ಹೆಚ್ಚಾಗುತ್ತೆ. ಈಗ ಇನ್ನೊಂದು ಬ್ರೆಡ್ ಸ್ಲೈಸ್ ಅನ್ನು ಮೇಲೆ ಇಟ್ಟು ಸ್ಯಾಂಡ್‌ವಿಚ್ ರೆಡಿ ಮಾಡಿ. ಬೇಕಿದ್ದರೆ ಇದನ್ನು ತ್ರಿಕೋನ ಅಥವಾ ಚೌಕಾಕಾರದಲ್ಲಿ ಕತ್ತರಿಸಿ ತಕ್ಷಣ ಸರ್ವ್ ಮಾಡಿ.

44
ಸರ್ವ್ ಮಾಡಲು ಮತ್ತು ರುಚಿ ಹೆಚ್ಚಿಸಲು ಟಿಪ್ಸ್

ಸ್ಯಾಂಡ್‌ವಿಚ್ ಅನ್ನು ತಣ್ಣಗೆ ಸರ್ವ್ ಮಾಡಿದರೆ, ಅದರ ರುಚಿ ಇನ್ನಷ್ಟು ಫ್ರೆಶ್ ಆಗಿರುತ್ತೆ. ಬೇಕಿದ್ದರೆ, ಇದರಲ್ಲಿ ಟೊಮ್ಯಾಟೊ ಅಥವಾ ಚೀಸ್ ಸ್ಲೈಸ್ ಕೂಡ ಸೇರಿಸಬಹುದು. ಬ್ರೌನ್ ಬ್ರೆಡ್ ಅಥವಾ ಮಲ್ಟಿಗ್ರೇನ್ ಬ್ರೆಡ್ ಬಳಸಿದರೆ, ಇದು ಹೆಚ್ಚು ಆರೋಗ್ಯಕರ.

ಪುದೀನಾ ಚಟ್ನಿಗೆ ಸ್ವಲ್ಪ ನಿಂಬೆ ರಸ ಸೇರಿಸಿದರೆ, ಟೇಸ್ಟ್ ಇನ್ನಷ್ಟು ಹೆಚ್ಚಾಗುತ್ತೆ. ಸ್ವಲ್ಪ ಟೋಸ್ಟ್ ಮಾಡಿ ಸರ್ವ್ ಮಾಡಿದರೆ ಸ್ಯಾಂಡ್‌ವಿಚ್ ಕ್ರಿಸ್ಪಿಯಾಗಿರುತ್ತೆ. ಮಕ್ಕಳಿಗಾಗಿ ಇದನ್ನು ಸಣ್ಣ ಸಣ್ಣ ಪೀಸ್‌ಗಳಾಗಿ ಕತ್ತರಿಸಿ ಕೊಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories