ಬಾಳೆಹಣ್ಣು ಖರೀದಿಸುವಾಗ ಈ ತಪ್ಪು ಮಾಡ್ಬೇಡಿ, ಒಳ್ಳೆ ಹಣ್ಣು ಗುರುತಿಸಲು ವ್ಯಾಪಾರಿ ಹೇಳಿಕೊಟ್ಟ ಟ್ರಿಕ್

Published : Jul 17, 2026, 08:47 PM IST

Banana buying guide: ಬಾಳೆಹಣ್ಣು ಖರೀದಿಸುವಾಗ ಅದರ ಹಳದಿ ಬಣ್ಣ ನೋಡಿ ಮರುಳಾಗಬೇಡಿ. ನೋಡಲು ಆಕರ್ಷಕವಾಗಿದ್ದರೂ ಕೆಲವು ಹಣ್ಣುಗಳು ಕೆಮಿಕಲ್‌ನಿಂದ ಹಣ್ಣಾಗಿರುತ್ತವೆ . ನೈಸರ್ಗಿಕವಾಗಿ ಹಣ್ಣಾದ ಬಾಳೆಹಣ್ಣನ್ನು ಕೇವಲ 30 ಸೆಕೆಂಡ್‌ನಲ್ಲಿ ಪತ್ತೆಹಚ್ಚುವ ಸಿಂಪಲ್ ಟ್ರಿಕ್ ಇಲ್ಲಿದೆ ನೋಡಿ.

PREV
16
ತಾಜಾ ಬಾಳೆಹಣ್ಣನ್ನು ಗುರುತಿಸುವುದು ಹೇಗೆ?

ತಾಜಾ ಬಾಳೆಹಣ್ಣನ್ನು ಗುರುತಿಸುವುದು ಹೇಗೆ?
ಬಾಳೆಹಣ್ಣು ಅತ್ಯಂತ ಪೌಷ್ಟಿಕ ಆಹಾರ ಮತ್ತು ಎಲ್ಲರಿಗೂ ಇಷ್ಟವಾಗುವ ಹಣ್ಣು. ಆದರೆ ಮಾರುಕಟ್ಟೆಯಲ್ಲಿ ನಮಗೆ ಸಿಗುವ ಎಲ್ಲಾ ಬಾಳೆಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವುದಿಲ್ಲ. ಕೆಲವು ಹಣ್ಣುಗಳು ನೋಡಲು ಆಕರ್ಷಕವಾಗಿದ್ದರೂ ತಿನ್ನಲು ರುಚಿಯಾಗಿರುವುದಿಲ್ಲ. ಹಾಗಾದರೆ ಸಿಹಿಯಾದ ಮತ್ತು ತಾಜಾ ಬಾಳೆಹಣ್ಣನ್ನು ಗುರುತಿಸುವುದು ಹೇಗೆ? ವ್ಯಾಪಾರಿಗಳು ಮತ್ತು ತಜ್ಞರು ನೀಡಿರುವ ಈ ಸರಳ ಟಿಪ್ಸ್ ಇಂದೇ ತಿಳಿಯಿರಿ.

26
1. ಬಣ್ಣ ಮತ್ತು ಕಂದು ಚುಕ್ಕೆಗಳ ಮೇಲೆ ಗಮನವಿರಲಿ

1. ಬಣ್ಣ ಮತ್ತು ಕಂದು ಚುಕ್ಕೆಗಳ ಮೇಲೆ ಗಮನವಿರಲಿ
ನೈಸರ್ಗಿಕವಾಗಿ ಹಣ್ಣಾದ ಬಾಳೆಹಣ್ಣು ತಿಳಿ ಅಥವಾ ಕಡು ಹಳದಿ ಬಣ್ಣದಲ್ಲಿರುತ್ತದೆ. ಅದರ ಸಿಪ್ಪೆಯ ಮೇಲೆ ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳಿದ್ದರೆ (Brown spots) ಅಂತಹ ಹಣ್ಣುಗಳು ಹೆಚ್ಚು ಸಿಹಿಯಾಗಿರುತ್ತವೆ ಮತ್ತು ಚೆನ್ನಾಗಿ ಹಣ್ಣಾಗಿರುತ್ತವೆ ಎಂದು ಅರ್ಥ. ಇಂತಹ ಚುಕ್ಕೆಗಳನ್ನು ಕಂಡು ಹಣ್ಣು ಹಾಳಾಗಿದೆ ಎಂದು ಅಂದುಕೊಳ್ಳಬೇಡಿ.

36
2. ಹಸಿರು ತೊಟ್ಟು

2. ಹಸಿರು ತೊಟ್ಟು
ಬಾಳೆಹಣ್ಣಿನ ತೊಟ್ಟು ಹಸಿರಾಗಿದ್ದು, ಉಳಿದ ಭಾಗ ಪೂರ್ತಿ ಹಳದಿಯಾಗಿದ್ದರೆ ಅಂತಹ ಹಣ್ಣುಗಳು ಇನ್ನೂ ಸರಿಯಾಗಿ ಹಣ್ಣಾಗಿಲ್ಲ ಅಥವಾ ಅವುಗಳನ್ನು ಕೆಮಿಕಲ್ ಬಳಸಿ ಹಣ್ಣು ಮಾಡಿರಬಹುದು ಎಂದು ಅರ್ಥೈಸಬಹುದು. ಪೂರ್ತಿ ಹಳದಿ ಬಣ್ಣದ ಹಣ್ಣುಗಳೇ ತಿನ್ನಲು ಯೋಗ್ಯ.

46
3. ಸಿಪ್ಪೆಯ ಸ್ಥಿತಿಯನ್ನು ಪರೀಕ್ಷಿಸಿ

3. ಸಿಪ್ಪೆಯ ಸ್ಥಿತಿಯನ್ನು ಪರೀಕ್ಷಿಸಿ
ಸಿಪ್ಪೆ ಒಡೆದಿರುವ ಅಥವಾ ಹೆಚ್ಚು ಒತ್ತಲ್ಪಟ್ಟ ಹಣ್ಣುಗಳನ್ನು ಖರೀದಿಸಬೇಡಿ. ಸಿಪ್ಪೆ ನಯವಾಗಿದ್ದು, ಹಣ್ಣು ಕೈಗೆ ಸ್ವಲ್ಪ ಗಟ್ಟಿಯಾಗಿ ಸಿಗುವಂತಿರಬೇಕು. ಹೆಚ್ಚು ಮೆತ್ತಗಿರುವ ಹಣ್ಣುಗಳು ಬೇಗನೆ ಕೊಳೆಯುವ ಸಾಧ್ಯತೆ ಇರುತ್ತದೆ.

56
4. ಸಿಹಿಯಾದ ಸುವಾಸನೆ

4. ಸಿಹಿಯಾದ ಸುವಾಸನೆ
ಬಾಳೆಹಣ್ಣನ್ನು ಮೂಸಿ ನೋಡಿ. ಚೆನ್ನಾಗಿ ಹಣ್ಣಾದ ಹಣ್ಣಿನಿಂದ ಸಿಹಿಯಾದ ಸುಗಂಧ ಬರುತ್ತದೆ. ಒಂದು ವೇಳೆ ಹಣ್ಣಿನಿಂದ ಹುಳಿ ವಾಸನೆ ಅಥವಾ ವಿಚಿತ್ರವಾದ ಗಂಧ ಬರುತ್ತಿದ್ದರೆ ಅಂತಹ ಹಣ್ಣುಗಳನ್ನು ಖರೀದಿಸಬೇಡಿ.

66
5. ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದು ಮುಖ್ಯ

5. ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದು ಮುಖ್ಯ
ನೀವು ಅಂದೇ ಹಣ್ಣನ್ನು ತಿನ್ನುವುದಾದರೆ ಪೂರ್ತಿ ಹಳದಿ ಬಣ್ಣದ ಹಣ್ಣನ್ನು ಆರಿಸಿ. ಒಂದು ವೇಳೆ 2-3 ದಿನಗಳ ನಂತರ ತಿನ್ನುವ ಯೋಜನೆ ಇದ್ದರೆ, ಸ್ವಲ್ಪ ಹಸಿರು ಬಣ್ಣ ಮಿಶ್ರಿತ ಹಳದಿ ಹಣ್ಣುಗಳನ್ನು ತರುವುದು ಉತ್ತಮ. ಅವು ಮನೆಯಲ್ಲಿಯೇ ನೈಸರ್ಗಿಕವಾಗಿ ಹಣ್ಣಾಗುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories