ಕೆಲಸದ ಒತ್ತಡದಲ್ಲಿ ಮೊದಲೇ ಮಾಡಿಟ್ಟ ಅಥವಾ ಉಳಿದುಹೋದ ಚಪಾತಿಗಳು ಗಟ್ಟಿಯಾಗುವುದು ಸಾಮಾನ್ಯ. ಆದರೆ, ಈ ಗಟ್ಟಿಯಾದ ಚಪಾತಿಗಳನ್ನು ಎಸೆಯುವ ಬದಲು, ಹಿರಿಯರು ಹೇಳಿಕೊಟ್ಟ ಸುಲಭ ಉಪಾಯ ಬಳಸಿ ಮತ್ತೆ ಬಿಸಿಬಿಸಿ ಮೃದುವಾದ ಚಪಾತಿಯಂತೆ ಮಾಡಬಹುದು.
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಉಂಟು ಎನ್ನುವಂತೆ, ಅಡುಗೆ ಮನೆಯಲ್ಲಿನ ಹಲವಾರು ಸಮಸ್ಯೆಗಳಿಗೆ ವಿವಿಧ ರೀತಿಯ ಪರಿಹಾರಗಳು ಇದ್ದೇ ಇವೆ. ಅಡುಗೆ ಮಾಡುವಾಗ ಆಗುವ ಎಡವಟ್ಟುಗಳನ್ನು ಸರಿಪಡಿಸಲು ಹಿರಿಯರು ಹೇಳಿಕೊಟ್ಟಿರುವ ಟಿಪ್ಸ್ಗಳು ನಿಜಕ್ಕೂ ಅಡುಗೆ ಮನೆಯಲ್ಲಿ ಉಪಯೋಗ ಆಗುತ್ತವೆ.
26
ಮಹಿಳೆಯರ ಸಮಸ್ಯೆ
ಇದೀಗ ಅಂಥದ್ದೇ ಒಂದು ಟಿಪ್ಸ್ ಚಪಾತಿಯದ್ದು. ಸಾಮಾನ್ಯವಾಗಿ ಚಪಾತಿ ಬಿಸಿಬಿಸಿ ತಿಂದರೇನೇ ರುಚಿ ಹೆಚ್ಚು. ಹಾಗೆಂದು ಕೆಲಸಕ್ಕೆ ಹೋಗುವ ಮಹಿಳೆಯರು ಅಥವಾ ಮನೆಯಲ್ಲಿ ಬೇರೆ ಕೆಲಸ ಇರುವ ಗೃಹಿಣಿಯರು ಚಪಾತಿ ಮಾಡುವಾಗ ಎಲ್ಲರೂ ಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಕಷ್ಟ. ಆದ್ದರಿಂದ ಮೊದಲೇ ಒಂದಿಷ್ಟು ಚಪಾತಿ ಮಾಡಿಡಲೇಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಮಾಡಿದ ಚಪಾತಿ ಹೆಚ್ಚಾಗಿ ಅದನ್ನು ಹಾಗೆಯೇ ಇಡುವ ಸಂದರ್ಭವೂ ಬರಹುದು.
36
ಮಾಡಿದ್ದ ಚಪಾತಿ ಫಜೀತಿ
ಆ ಸಮಯದಲ್ಲಿ ಸ್ವಲ್ಪ ಗಂಟೆ ಬಿಟ್ಟು ನೋಡಿದರೆ ಚಪಾತಿ ಗಟ್ಟಿಯಾಗಿರುತ್ತದೆ. ಆಗ ಅದನ್ನು ಬಿಸಿ ಮಾಡಲು ಹೋದರೆ ಮತ್ತಷ್ಟು ಗಟ್ಟಿಯಾಗುತ್ತದೆ. ಆಗ ಅದನ್ನು ಎಸೆಯುವ ಪರಿಸ್ಥಿತಿ ಬರಬಹುದು, ಇಲ್ಲವೇ ವೇಸ್ಟ್ ಆಗಬಾರದು ಎಂದು ಮಹಿಳೆಯರೇ ಕಷ್ಟಪಟ್ಟು ತಿನ್ನುವುದೂ ಹಲವು ಮನೆಗಳಲ್ಲಿ ನಡೆದೇ ಇರುತ್ತದೆ.
ಆದ್ದರಿಂದ ಈ ಸಮಸ್ಯೆಗೆ ಸುಲಭದ ಉಪಾಯವೊಂದಿದೆ. ಅದು ಗಟ್ಟಿಯಾದ ಚಪಾತಿಯನ್ನು ಮೃದು ಮಾಡುವ ಉಪಾಯವದು. ಇದು ತುಂಬಾ ಸುಲಭವೂ, ಪರಿಣಾಮಕಾರಿಯೂ ಆಗಿದೆ.
56
ಏನಿದು ಟಿಪ್ಸ್
ಮೊದಲ ಹಾಗೂ ತುಂಬಾ ಪರಿಣಾಮಕಾರಿಯಾಗಿರುವ ಟಿಪ್ಸ್ ಎಂದರೆ, ಗಟ್ಟಿಯಾಗಿರುವ ಹಳೆಯ ಚಪಾತಿಯ ಮೇಲೆ ಸ್ವಲ್ಪ ನೀರು ಹಚ್ಚಿ, ಬಿಸಿ ತವಾ ಮೇಲೆ ಎರಡೂ ಕಡೆ ತುಪ್ಪ ಅಥವಾ ಎಣ್ಣೆ ಹಾಕಿ ಮೃದುವಾಗಿ ಬಿಸಿ ಮಾಡಿಕೊಳ್ಳಬೇಕು. ಆಗ ಚಪಾತಿ ಗಟ್ಟಿಯಾಗಿದ್ದರೂ ಮೃದುವಾಗಿಬಿಡುತ್ತದೆ.
66
ಸಣ್ಣ ಉರಿಯಲ್ಲಿ ಬಿಸಿ
ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಹೀಗೆ ಮಾಡುವುದರಿಂದ ಚಪಾತಿಗೆ ಹಬೆಯ ತೇವಾಂಶ ಸಿಕ್ಕು ಮತ್ತೆ ಮೃದುವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.