ಬೆಂಗಳೂರಿಗೆ ಬಂದಿರುವ ಪ್ರವಾಸಿಗರೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಹೃದಯಸ್ಪರ್ಶಿ ಪ್ರಶ್ನೆಯೊಂದನ್ನು ಹಂಚಿಕೊಂಡಿದ್ದಾರೆ. ಆ ಪ್ರಶ್ನೆ ಹೀಗಿದೆ..."ನಾನು ನನ್ನ ಪತ್ನಿ ಮತ್ತು 5 ಹಾಗೂ 2 ವರ್ಷದ ಮಕ್ಕಳಿಗಾಗಿ ಬೆಂಗ್ಳೂರಿನಿಂದ ಏನಾದರೂ ಸ್ಮರಣಿಕೆ, ಉಡುಗೊರೆಯನ್ನು ತೆಗೆದುಕೊಡಬೇಕೆಂದು ಅಂದುಕೊಂಡಿದ್ದೇನೆ. ಆದರೆ ಅದು ತುಂಬಾ ದುಬಾರಿ ಇರಬಾರದು, ಮಕ್ಕಳಿಗೆ ಖುಷಿ ಕೊಡಬೇಕು" ಎಂದು ತಿಳಿಸಿದ್ದಾರೆ.
26
ಫೇಮಸ್ ಗಿಫ್ಟ್ ಆಯ್ಕೆಗಳು
ಇದಕ್ಕೆ ನಗರದ ನೆಟ್ಟಿಗರು ಸೃಜನಾತ್ಮಕ ಸಲಹೆಗಳನ್ನು ನೀಡಿದ್ದು, ಅವರು ಸೂಚಿಸಿರುವ ಕೆಲವು ಫೇಮಸ್ ಗಿಫ್ಟ್ ಆಯ್ಕೆಗಳು ಇಲ್ಲಿವೆ ನೋಡಿ...
36
ಪತ್ನಿಗೆ
ಮೈಸೂರಿನ ಸ್ಯಾಂಡಲ್‌ವುಡ್ ಸ್ಕಿನ್ ಕೇರ್ ಅಥವಾ ಪರ್ಫ್ಯೂಮ್ ಬೆಂಗಳೂರಿನ ಬ್ಯೂಟಿ ಸ್ಟೋರ್‌ಗಳಲ್ಲಿ ಸುಲಭವಾಗಿ ಸಿಗುತ್ತವೆ. ಪರ್‌ಫ್ಯೂಮ್ ಕೂಡ ನೆನಪಿನ ಉಡುಗೊರೆ ಆಗಬಹುದು.
ಇಳಕಲ್ ಅಥವಾ ಮೈಸೂರು ಸೀರೆ ಕಡಿಮೆ ಬಜೆಟ್‌ನಲ್ಲೂ ಸಿಗುವ ಈ ಸೊಗಸಾದ ಸೀರೆಗಳು ಪತ್ನಿಗೆ ಖುಷಿ ನೀಡಬಹುದು.
ಆರ್ಟಿಫಿಶಿಯಲ್ ಆಭರಣಗಳು ನ್ಯಾಷನಲ್ ಮಾರ್ಕೆಟ್, ಚಿಕ್ಕಪೇಟೆಗಳಲ್ಲಿ ಗುಣಮಟ್ಟದ ಆಭರಣಗಳು ಕಡಿಮೆ ಬೆಲೆಗೆ ಲಭ್ಯ.
46
ಮಕ್ಕಳಿಗೆ
ಚನ್ನಪಟ್ಟಣ ಬೊಂಬೆಗಳು ಇದು ಎಲೆಕ್ಟ್ರಾನಿಕ್ ಟಾಯ್ಸ್‌ಗಿಂತ ಚೆನ್ನ. ಮಕ್ಕಳಿಗೆ ಸುರಕ್ಷಿತವಾದ ಹತ್ತಿಯಿಂದ ತಯಾರಾದ ಲೋಕಲ್ ಟಾಯ್ಸ್ ಕೂಡ ತುಂಬಾ ಸುಂದರವಾಗಿರುತ್ತವೆ.
ಪುಸ್ತಕಗಳು ಮಕ್ಕಳಿಗೆ ಚಿತ್ರ ಪುಸ್ತಕಗಳು ಅಥವಾ ಲಘು ಕಥೆಗಳ ಸಂಗ್ರಹ (ಇಂಗ್ಲಿಷ್ ಅಥವಾ ಕನ್ನಡದಲ್ಲಿ) ಕೊಡಬಹುದು.
56
ತಿನಿಸುಗಳಾದರೆ...
ಬೆಂಗ್ಳೂರಿನ ಫೆಮಸ್ ಫಿಲ್ಟರ್ ಕಾಫಿ ಪೌಡರ್, ಸ್ವಾದಿಷ್ಟ ಚಾಕೋಲೇಟ್‌ಗಳು (ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ರ್ಪೋರ್ಟ್ ಅಥವಾ ಎಂಜಿ ರಸ್ತೆ ಶಾಪ್‌ಗಳಲ್ಲಿ ಸಿಗುತ್ತವೆ).
66
ಬಜೆಟ್ ನೋಡಿಕೊಂಡು ಸರ್‌ಪ್ರೈಸ್
ಬಜೆಟ್ ಅನ್ನು ನೋಡಿಕೊಂಡು ಸರ್‌ಪ್ರೈಸ್ ಕೊಡುವುದು ಈ ಉಡುಗೊರೆ ಆಯ್ಕೆಗಳಲ್ಲಿದೆ. ನೀವು ಬೆಂಗಳೂರಿನಿಂದ ಹೊರಡುವಾಗ ಈ ಪುಟ್ಟ ಉಡುಗೊರೆಗಳು ನಿಮಗೊಂದು ನೆನಪಿನ ನಗು ತಂದುಕೊಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.