ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪನ್ನು ಇನ್ಮುಂದೆ ಮಾರುಕಟ್ಟೆಯಿಂದ ತರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲೇ ಅತಿ ವೇಗವಾಗಿ ಬೆಳೆಯಬಹುದು.
ಅಂಗಡಿಯಿಂದ ತಂದ ಒಣ ಕೊತ್ತಂಬರಿ ಬೀಜಗಳನ್ನು ಒಂದು ದಿನ ಬಿಸಿಲಿನಲ್ಲಿ ಒಣಗಿಸಿ.
ನಂತರ ಬೀಜಗಳನ್ನು ಲಘುವಾಗಿ ಒತ್ತಿ ಎರಡು ಭಾಗಗಳಾಗಿ ಒಡೆಯಿರಿ (ಪುಡಿ ಮಾಡಬೇಡಿ). ಈ ಬೀಜಗಳನ್ನು ಒಂದು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಇದರಿಂದ ಗಿಡ ಬೇಗ ಬೆಳೆಯುತ್ತದೆ.
ಸಾಮಾನ್ಯ ಮಣ್ಣಿಗೆ ಸ್ವಲ್ಪ ಗೊಬ್ಬರ (ಸಗಣಿ ಗೊಬ್ಬರ ಅಥವಾ ಎರೆಹುಳು ಗೊಬ್ಬರ) ಬೆರೆಸಿ. ನೀರು ಹೊರಹೋಗಲು ತೂತಿರುವ ಒಂದು ಹಳೆಯ ಪ್ಲಾಸ್ಟಿಕ್ ಟಬ್ ಅಥವಾ ಕುಂಡವನ್ನು ಆರಿಸಿಕೊಳ್ಳಿ.
ಕುಂಡಕ್ಕೆ ಮಣ್ಣು ತುಂಬಿಸಿ, ಅದರ ಮೇಲೆ ನೆನೆಸಿದ ಬೀಜಗಳನ್ನು ಹರಡಿ. ಬೀಜಗಳ ಮೇಲೆ ಒಂದು ತೆಳುವಾದ ಮಣ್ಣಿನ ಪದರವನ್ನು ಹಾಕಿ ಮುಚ್ಚಿ.
ಬೀಜ ಹಾಕಿದ ಮೇಲೆ ಲಘುವಾಗಿ ನೀರು ಚಿಮುಕಿಸಿ. ಇದನ್ನು ಬಿಸಿಲು ಬೀಳುವ ಜಾಗದಲ್ಲಿ ಇಡಿ. ಮಣ್ಣು ಒಣಗಿದಾಗ ಮಾತ್ರ ನೀರು ಸ್ಪ್ರೇ ಮಾಡಿ.
ಬೀಜಗಳನ್ನು ತುಂಬಾ ಆಳವಾಗಿ ಬಿತ್ತಬೇಡಿ. ಮಣ್ಣಿನ ಮೇಲ್ಪದರದಲ್ಲೇ ಹರಡಿ. ಅದರ ಮೇಲೆ ಸ್ವಲ್ಪವೇ ಮಣ್ಣು ಹಾಕಿದರೆ ಕೇವಲ 10 ದಿನಗಳಲ್ಲಿ ಮೊಳಕೆ ಮೇಲೆ ಬರುತ್ತವೆ!
ಕೇವಲ ಒಂದೇ ತಿಂಗಳಲ್ಲಿ ಹಚ್ಚಹಸಿರಾದ ಕೊತ್ತಂಬರಿ ಸೊಪ್ಪು ಅಡುಗೆ ಬಳಕೆಗೆ ಸಿದ್ಧವಾಗುತ್ತದೆ ಎಂಬ ಮಾಹಿತಿಯನ್ನುgardening with deepu ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ! ಈ ಫ್ಲವರ್ ಡಿಸೈನ್ ಓಲೆಗಳನ್ನು ಈಗಲೇ ಮಾಡಿಸಿ
ಪದೇ ಪದೇ ಚಾಕೊಲೇಟ್ ತಿನ್ನಬೇಕು ಅನಿಸುತ್ತಾ? ಇದರ ಹಿಂದಿನ ಕಾರಣಗಳು ಹೀಗಿವೆ
ಸಾರಾ ಅರ್ಜುನ್ ಥರ ಸಂಪ್ರದಾಯಸ್ಥ ಲುಕ್ ಬೇಕಾ? ಈ 6 ಡ್ರೆಸ್‌ಗಳನ್ನು ಟ್ರೈ ಮಾಡಿ
ಮಾವಿನ ಹಣ್ಣು ಸಿಹಿಯಾ ಹುಳಿಯಾ? ಖರೀದಿಸುವ ಮೊದಲು ಹೀಗೆ ಚೆಕ್ ಮಾಡಿ!