ಮನೇಲಿ ಬ್ರೆಡ್ ಇದ್ಯಾ? ಹಾಗಿದ್ರೆ ಸಂಜೆಗೆ ಹೀಗೊಂದು ಸುಲಭವಾದ ಸ್ನ್ಯಾಕ್ಸ್ ಮಾಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.
food Mar 25 2026
Author: Ashwini HR Image Credits:Getty
Kannada
ಬೇಕಾಗುವ ಪದಾರ್ಥಗಳು
ಬ್ರೆಡ್ - 2 ಸ್ಲೈಸ್, ತುಪ್ಪ - 1 ಚಮಚ, ಸಕ್ಕರೆ - ರುಚಿಗೆ ತಕ್ಕಷ್ಟು, ಹಾಲು - 1 ಕಪ್, ಹಾಲಿನ ಪುಡಿ - 1 ಚಮಚ, ಖರ್ಜೂರ - 2, ಚಕ್ಕೆ ಪುಡಿ - 1 ಚಮಚ
Image credits: social media
Kannada
ಬ್ರೆಡ್‌ನ ಅಂಚುಗಳನ್ನು ಕತ್ತರಿಸಿ ತುಪ್ಪ ಸವರಿ
ಮೊದಲು ಬ್ರೆಡ್‌ನ ಅಂಚುಗಳನ್ನು ಕತ್ತರಿಸಿ ತೆಗೆಯಿರಿ. ನಂತರ ಅದರ ಮೇಲೆ ತುಪ್ಪ ಸವರಿ, ಸ್ವಲ್ಪ ಸಕ್ಕರೆಯನ್ನು ಮೇಲೆ ಉದುರಿಸಿ.
Image credits: Getty
Kannada
ಹಾಲಿಗೆ ಹಾಲಿನ ಪುಡಿ ಸೇರಿಸಿ
ಒಂದು ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿ ಬ್ರೆಡ್‌ನ ಎರಡೂ ಬದಿಗಳನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಮುಕ್ಕಾಲು ಕಪ್ ಹಾಲು ಬಿಸಿಗಿಟ್ಟು, ಅದಕ್ಕೆ ಅರ್ಧ ಚಮಚ ಹಾಲಿನ ಪುಡಿ ಸೇರಿಸಿ ಮಿಕ್ಸ್ ಮಾಡಿ.
Image credits: Social media
Kannada
ಖರ್ಜೂರವನ್ನು ಹಾಲಿನೊಂದಿಗೆ ರುಬ್ಬಿಕೊಳ್ಳಿ
ಬೀಜ ತೆಗೆದ ಐದು ಖರ್ಜೂರಕ್ಕೆ ಕಾಲು ಕಪ್ ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಿಸಿಯಾಗುತ್ತಿರುವ ಹಾಲಿಗೆ ಈ ಖರ್ಜೂರದ ಪೇಸ್ಟ್ ಸೇರಿಸಿ, ಹಾಲು ಗಟ್ಟಿಯಾಗುವವರೆಗೆ ಕುದಿಸಿ.
Image credits: Getty
Kannada
ಚಕ್ಕೆ ಪುಡಿ ಸೇರಿಸಿ ಸವಿಯಿರಿ
ಕೊನೆಯಲ್ಲಿ, ಇದಕ್ಕೆ ಒಂದು ಚಿಟಿಕೆ ಚಕ್ಕೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ಈಗಾಗಲೇ ಸಿದ್ಧಪಡಿಸಿಟ್ಟ ಬ್ರೆಡ್ ಮೇಲೆ ಈ ಮಿಶ್ರಣವನ್ನು ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.