ಬಟ್ಟೆ ಸಣ್ಣದಾಯ್ತು, ಹಳೇದಾಯ್ತು ಅಂತ ದಾನ ಮಾಡ್ತೀರಾ? ಈ ಕ್ರಮ ಪಾಲಿಸದೆ ಕೊಟ್ರೆ, ಗಂಡಾಂತರ ಪಕ್ಕಾ!

Published : Jul 18, 2025, 04:12 PM ISTUpdated : Jul 18, 2025, 04:20 PM IST

ಕೆಲವರು ಬಟ್ಟೆಯನ್ನು ದಾನ ಮಾಡುತ್ತಾರೆ. ಆದರೆ ಬಟ್ಟೆ ದಾನ ಮಾಡುವ ಮುನ್ನ ಒಂದಷ್ಟು ಕ್ರಮಗಳನ್ನು ಫಾಲೋ ಮಾಡಬೇಕು. 

PREV
16

ಬಟ್ಟೆ ಸಣ್ಣಗಾದರೆ, ಬಟ್ಟೆ ಹಳೆಯದಾದರೆ ಕೆಲವರು ಬಟ್ಟೆ ದಾನ ಮಾಡುತ್ತಾರೆ. ಇಂದು ಒಂದೇ ಬಟ್ಟೆಯನ್ನು ಹಾಳಾಗುವವರೆಗೂ ಹಾಕಿಕೊಳ್ಳೋರು ತುಂಬ ಕಡಿಮೆ. ಇಂದು ಕೆಲ ಸೆಲೆಬ್ರಿಟಿಗಳಂತೂ ಒಮ್ಮೆ ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಹಾಕುವುದಿಲ್ಲ.

26

ಬಟ್ಟೆ ದಾನ ಮಾಡುವುದು ಒಳ್ಳೆಯದೇ, ಆದರೆ ಬೇರೆ ವಿಷಯದ ಬಗ್ಗೆ ಯೋಚಿಸದೆ ಬಟ್ಟೆ ದಾನ ಮಾಡುವುದು ಸರಿಯಲ್ಲ. ಈ ಬಟ್ಟೆ ಬಳಸಿ ದುಷ್ಟರು ನಿಮ್ಮನ್ನು ಸರ್ವನಾಶ ಕೂಡ ಮಾಡಬಹುದು ಎಂದು ಹೇಳುವುದುಂಟು.

36

ಬಟ್ಟೆಯಲ್ಲಿ ನಮ್ಮ ಎನರ್ಜಿ ಇರುವುದು, ಅದು ಇನ್ನೊಬ್ಬರಿಗೆ ಪಾಸ್‌ ಆಗಬಾರದು ಎಂದು ಕೂಡ ಹೇಳಲಾಗುತ್ತದೆ. ಜೊತೆಗೆ ಬಟ್ಟೆಯನ್ನು ಇಟ್ಟುಕೊಂಡು ಮಾಟ ಮಂತ್ರ ಮಾಡಲಾಗುವುದು ಎಂದು ಕೂಡ ಹೇಳಲಾಗುತ್ತದೆ. ಮಾಟ ಮಂತ್ರದಿಂದ ದೊಡ್ಡ ಮಟ್ಟದಲ್ಲಿ ಅಪಾಯವಿದೆ ಎಂದು ಕೂಡ ಹೇಳಲಾಗುತ್ತದೆ.

46

ಬಿಗ್‌ ಬಾಸ್‌ 13 ಸ್ಪರ್ಧಿ ಪಾರಸ್‌ ಛಾಬ್ರಾ ಅವರು ಬಟ್ಟೆ ದಾನದ ವಿಚಾರವಾಗಿ ಮಾತನಾಡಿದ್ದಾರೆ. ಬಟ್ಟೆ ದಾನ ಮಾಡುವ ಮುನ್ನ ಅನುಸರಿಸಬೇಕಾದ ಕ್ರಮದ ಬಗ್ಗೆ ಅವರು ಹೇಳಿದ್ದಾರೆ.

56

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಪಾರಸ್‌ ಛಾಬ್ರಾ ಅವರು “ಬಟ್ಟೆ ಕೊಡುವಾಗ ಅದನ್ನು ಉಪ್ಪು ನೀರಿಗೆ ಹಾಕಿ ನೆನೆಸಿ. ಒಂದು ಬಕೆಟ್‌ ನೀರಿಗೆ ಉಪ್ಪು ನೀರು ಹಾಕಿ, ದಾನ ಮಾಡುವ ಬಟ್ಟೆಯನ್ನು ನೆನೆಸಿ, ಆಮೇಲೆ ಆ ಬಟ್ಟೆಯನ್ನು ಹಿಂಡಿ” ಎಂದು ಅವರು ಹೇಳಿದ್ದಾರೆ.

66

“ಆ ಬಟ್ಟೆಯನ್ನು ಹಿಂಡಿ ಒಣಗಿಸಿ, ಆ ಬಟ್ಟೆಯನ್ನು ದಾನ ಮಾಡಬಹುದು. ಇಂದು ಸಾಕಷ್ಟು ಜನರು ಬಟ್ಟೆ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ರೀತಿ ದಾನ ಮಾಡುವುದರಿಂದ ಯಾವುದೇ ತೊಂದರೆ ಆಗೋದಿಲ್ಲ, ಎನರ್ಜಿ ಪಾಸ್‌ ಆಗೋದಿಲ್ಲ” ಎನ್ನುತ್ತಾರೆ. 

Read more Photos on
click me!

Recommended Stories