Most Expensive Office in India: ದೇಶದಲ್ಲಿ ಲಕ್ಷಾಂತರ ಜನರು ಬಾಡಿಗೆಗೆ ವಾಸಿಸುತ್ತಿದ್ದಾರೆ, ಆದರೆ ದೇಶದಲ್ಲಿ ಯಾವ ಕಟ್ಟಡದ ಬಾಡಿಗೆ ಅತ್ಯಂತ ಹೆಚ್ಚು ಮತ್ತು ಅದು ಯಾವ ನಗರದಲ್ಲಿದೆ ಎಂದು ನಿಮಗೆ ತಿಳಿದಿದೆಯೇ?.
ಭಾರತದಲ್ಲಿ ಕಾರ್ಪೊರೇಟ್ ಕಚೇರಿಗಳ ಬಾಡಿಗೆ ಈಗ ಗಗನಕ್ಕೇರಿದೆ. ಮುಂಬೈ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಜಾಗತಿಕ ಬ್ಯಾಂಕ್‌ಗಳು ಮತ್ತು ದೊಡ್ಡ ಟೆಕ್ ಕಂಪನಿಗಳು ಬೃಹತ್ ಕಚೇರಿಗಳನ್ನು ಬಾಡಿಗೆಗೆ ಪಡೆಯುತ್ತಿವೆ. ಅಚ್ಚರಿಯ ವಿಷಯವೆಂದರೆ, ಈ ಕಚೇರಿಗಳ ಮಾಸಿಕ ಬಾಡಿಗೆ ಈಗ ಕೇವಲ ಲಕ್ಷಗಳಲ್ಲಿಲ್ಲ, ಬದಲಾಗಿ ಕೋಟಿ ರೂಪಾಯಿಗಳ ಗಡಿ ದಾಟಿದೆ. ನಗರದಿಂದ ನಗರಕ್ಕೆ ದರಗಳಲ್ಲಿ ವ್ಯತ್ಯಾಸವಿದ್ದರೂ, ಮುಖ್ಯ ಪ್ರದೇಶಗಳಲ್ಲಿರುವ ಕಚೇರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಾಗಾದರೆ ಭಾರತದಲ್ಲೇ ಅತಿ ಹೆಚ್ಚು ಬಾಡಿಗೆ ಹೊಂದಿರುವ ಆ ಕಚೇರಿ ಯಾವುದು ಮತ್ತು ಅದು ಎಲ್ಲಿದೆ ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
29
ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ದಾಖಲೆ
ಭಾರತದಲ್ಲೇ ಅತಿ ಹೆಚ್ಚು ಬಾಡಿಗೆ ಹೊಂದಿರುವ ಕಚೇರಿ ವಾಣಿಜ್ಯ ನಗರಿ ಮುಂಬೈನಲ್ಲಿದೆ. ಇಲ್ಲಿನ ಓಬೆರಾಯ್ ಕಾಮರ್ಸ್ ತ್ರೀ (Oberoi Commerz III) ಕಟ್ಟಡದಲ್ಲಿರುವ ಮೋರ್ಗನ್ ಸ್ಟಾನ್ಲಿ ಕಂಪನಿಯ ಕಚೇರಿಯು ದೇಶದ ಅತ್ಯಂತ ದುಬಾರಿ ಆಫೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನಲ್ಲಿರುವ ಸೀಮಿತ ಸ್ಥಳಾವಕಾಶ ಮತ್ತು ಬ್ಯಾಂಕಿಂಗ್ ಹಾಗೂ ಆರ್ಥಿಕ ವಲಯದ ಕಂಪನಿಗಳಿಂದ ಇರುವ ಭಾರಿ ಬೇಡಿಕೆಯಿಂದಾಗಿ ಇಲ್ಲಿನ ಬಾಡಿಗೆ ದರ ಆಕಾಶ ಮುಟ್ಟಿದೆ. ಈ ಕಚೇರಿಯ ತಿಂಗಳ ಬಾಡಿಗೆ ಸರಿಸುಮಾರು 15.9 ಕೋಟಿ ರೂಪಾಯಿಗಳಾಗಿದ್ದು, ಇದು ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಒಂದು ದಾಖಲೆಯಾಗಿದೆ.
39
ದೆಹಲಿ ಗೂಗಲ್ ಕಚೇರಿಯ ಬಾಡಿಗೆಯೆಷ್ಟು?
ದೆಹಲಿ ಎನ್‌ಸಿಆರ್‌ನ ಗುರುಗ್ರಾಂನಲ್ಲೂ ಪ್ರೀಮಿಯಂ ಆಫೀಸ್ ಸ್ಪೇಸ್‌ಗಳ ಬೇಡಿಕೆ ವೇಗವಾಗಿ ಹೆಚ್ಚಿದೆ. ಡಿಎಲ್‌ಎಫ್ ಸೈಬರ್ ಸಿಟಿಯ ಏಟ್ರಿಯಮ್ ಪ್ಲೇಸ್‌ನಲ್ಲಿರುವ ಗೂಗಲ್ ಕಚೇರಿಯು ಪ್ರತಿ ತಿಂಗಳು ಸುಮಾರು 14 ಕೋಟಿ ರೂಪಾಯಿ ಬಾಡಿಗೆಯನ್ನು ಕೊಡುತ್ತದೆ.
ಇನ್ನು ದೇಶದ ಟೆಕ್ ರಾಜಧಾನಿ ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್ ಬಿಸಿನೆಸ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯು ತಿಂಗಳಿಗೆ ಸುಮಾರು 7 ಕೋಟಿ ರೂಪಾಯಿ ಬಾಡಿಗೆ ಕಟ್ಟುತ್ತದೆ.
59
ಹೈದರಾಬಾದ್‌ನ ಮೈಕ್ರೋಸಾಫ್ಟ್ ಇಂಡಿಯಾ
ಹೈದರಾಬಾದ್‌ನ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಕೂಡ ಈಗ ಗ್ಲೋಬಲ್ ಕಂಪನಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಫಿನಿಕ್ಸ್ ಸೆಂಟಾರಸ್ ಕಟ್ಟಡದಲ್ಲಿ ಮೈಕ್ರೋಸಾಫ್ಟ್ ಇಂಡಿಯಾ ತಿಂಗಳಿಗೆ ಸುಮಾರು 7 ಕೋಟಿ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದೆ.
69
ಪುಣೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಹಾಗೆಯೇ ಪುಣೆಯ ಹಿಂಜೆವಾಡಿ ಐಟಿ ಹಬ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯು ಮಾಸಿಕ ಸರಿಸುಮಾರು 6.77 ಕೋಟಿ ರೂ. ಬಾಡಿಗೆ ನೀಡುತ್ತದೆ.
79
ನೋಯ್ಡಾದ ಸ್ಯಾಮ್‌ಸಂಗ್ ಇಂಡಿಯಾ
ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಮೀಪದ ಭೂಟಾನಿ ಆಲ್ಫಾಥಮ್‌ನಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಸುಮಾರು 6 ಕೋಟಿ ರೂಪಾಯಿ ಬಾಡಿಗೆಯನ್ನು ನೀಡುತ್ತಿದೆ.
89
ಕೋಲ್ಕತ್ತಾದಲ್ಲಿ ಎಷ್ಟಿದೆ?
ಕೋಲ್ಕತ್ತಾದ ಸಾಲ್ಟ್ ಲೇಕ್ ಸೆಕ್ಟರ್ 5 ರಲ್ಲಿರುವ ಬೆಂಗಾಲ್ ಇಂಟೆಲಿಜೆಂಟ್ ಪಾರ್ಕ್‌ನಲ್ಲಿ ಆಫೀಸ್ ಸ್ಪೇಸ್ ಬಾಡಿಗೆ ಸುಮಾರು 4.5 ಕೋಟಿ ರೂಪಾಯಿಗಳವರೆಗೆ ತಲುಪಿದೆ.
99
ಅದಾನಿ ಗ್ರೂಪ್‌ನ ಕಾರ್ಪೊರೇಟ್ ಹೌಸ್
ಇನ್ನು ಅಹಮದಾಬಾದ್‌ನ ಎಸ್‌ಜಿ ಹೈವೇ ಪ್ರದೇಶದಲ್ಲಿರುವ ಅದಾನಿ ಗ್ರೂಪ್‌ನ ಕಾರ್ಪೊರೇಟ್ ಹೌಸ್ ಸುಮಾರು 3.8 ಕೋಟಿ ರೂಪಾಯಿಗಳ ಮಾಸಿಕ ಬಾಡಿಗೆ ಕಟ್ಟುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.