ಸಸಿಗಳನ್ನು ಬೆಳೆಸಲು ಬಳಕೆ
ಫೋಟೋದಲ್ಲಿ ತೋರಿಸಿರುವಂತೆ ಪ್ಲಾಸ್ಟಿಕ್ ಪಾಟ್‌ಗಳ ಬದಲಿಗೆ, ತೊಳೆದ ಮೊಟ್ಟೆ ಸಿಪ್ಪೆಯ ಅರ್ಧಭಾಗ ಬಳಸಿ ಸಸಿಗಳನ್ನು ಬೆಳೆಸಬಹುದು. ಸಸಿ ಸ್ವಲ್ಪ ದೊಡ್ಡದಾದ ನಂತರ, ಸಿಪ್ಪೆಯ ಸಮೇತ ಮಣ್ಣಿನಲ್ಲಿ ನೆಡಬಹುದು.
ಕಾಂಪೋಸ್ಟ್ ಗೊಬ್ಬರಕ್ಕೆ ಸೇರಿಸಿ
ಮೊಟ್ಟೆ ಸಿಪ್ಪೆ ಚೆನ್ನಾಗಿ ತೊಳೆದು, ಒಣಗಿಸಿ, ಪುಡಿ ಮಾಡಿ ಕಾಂಪೋಸ್ಟ್ ಗೆ ಸೇರಿಸುವುದರಿಂದ ಗೊಬ್ಬರದ ಸಾರ ಹೆಚ್ಚುತ್ತದೆ.
ಮಣ್ಣಿನ ಪೂರಕವಾಗಿ ಬಳಸಿ
ನಿಮ್ಮ ಬಳಿ ಕಾಂಪೋಸ್ಟ್ ಇಲ್ಲದಿದ್ದರೆ, ನೇರವಾಗಿ ಮೊಟ್ಟೆ ಸಿಪ್ಪೆ ಪುಡಿ ಮಾಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಬಹುದು.
ಕಳೆ ನಿಯಂತ್ರಣ
ಇದನ್ನು ಮಣ್ಣಿನ ಮೇಲೆ ಹೊದಿಕೆಯಂತೆ (Mulch) ಬಳಸುವುದರಿಂದ ಅನಗತ್ಯ ಕಳೆ ಗಿಡಗಳು ಬೆಳೆಯುವುದನ್ನು ತಡೆಯಬಹುದು.