ಕೋಟಿ ಕೋಟಿ ಆಸ್ತಿಯಿದ್ರೂ 5 ರೂ. ಪಾಕೆಟ್​ ಮನಿ ಪಡೀತಿದ್ರಾ ಅನಂತ್ ಅಂಬಾನಿ!

Published : Jul 25, 2023, 09:41 AM ISTUpdated : Jul 25, 2023, 09:44 AM IST

ಅನಂತ್ ಅಂಬಾನಿಗೆ ದುಬಾರಿ ವಾಚ್‌ಗಳು ಮತ್ತು ಕಾರುಗಳ ಬಗ್ಗೆ ಕ್ರೇಜ್ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಅವರು ಮುಕೇಶ್ ಅಂಬಾನಿ ಒಡೆತನದ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿದ್ದಾಗ ಪಾಕೆಟ್ ಮನಿಯಾಗಿ ಕೇವಲ 5 ರೂಪಾಯಿಗಳನ್ನು ಪಡೀತಿದ್ರಂತೆ.

PREV
17
ಕೋಟಿ ಕೋಟಿ ಆಸ್ತಿಯಿದ್ರೂ 5 ರೂ. ಪಾಕೆಟ್​ ಮನಿ ಪಡೀತಿದ್ರಾ ಅನಂತ್ ಅಂಬಾನಿ!

ಅನಂತ್​ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಕಿರಿಯ ಮಗ. ಅನಂತ್​ ಅಂಬಾನಿ ಹಲವಾರು ರಿಲಯನ್ಸ್ ಉದ್ಯಮಗಳ ನಿರ್ದೇಶಕರಾಗಿದ್ದು ಅವರು ಶೀಘ್ರದಲ್ಲೇ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಇವರ ಕುರಿತಾಗಿ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ.

27

ಅನಂತ್ ಅಂಬಾನಿ ದುಬಾರಿ ವಾಚ್‌ಗಳು ಮತ್ತು ಕಾರುಗಳಲ್ಲಿನ ಅಭಿರುಚಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಮುಕೇಶ್ ಅಂಬಾನಿ ಒಡೆತನದ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿದ್ದಾಗ ಅವರು ಪಾಕೆಟ್ ಮನಿಯಾಗಿ ಕೇವಲ 5 ರೂಪಾಯಿಗಳನ್ನು ಪಡೆಯುತ್ತಿದ್ದರು ಎಂಬುದು ಸುದ್ದಿಯಾಗಿದೆ. 

37

ಹಳೆಯ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರಿಗೆ ಹಣದ ಮೌಲ್ಯವನ್ನು ಕಲಿಸಲು ಪ್ರತಿ ವಾರ ಕೇವಲ 5 ರೂ. ಮಾತ್ರವೇ ಪಾಕೆಟ್ ಮನಿ ನೀಡುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದರು.

47

ಈ ಕುರಿತಾಗಿ ಅನಂತ್​ ಅಂಬಾನಿ ಸ್ನೇಹಿತರು ಅವರನ್ನು ಲೇವಡಿ ಮಾಡುತ್ತಿದ್ದರಂತೆ. ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಒಮ್ಮೆ ಕ್ಯಾಂಟೀನ್‌ನಲ್ಲಿ ಖರ್ಚು ಮಾಡಲು ಕೇವಲ 5 ರೂಪಾಯಿಗಳನ್ನು ಹೊಂದಿದ್ದನ್ನು ಕಂಡು ಶಾಲೆಯಲ್ಲಿ ಇತರ ಮಕ್ಕಳು ಅಣಕಿಸಿದ್ದರು ಎಂದು ಬಹಿರಂಗಪಡಿಸಿದರು. 

57

ಅನಂತ್​ ಅಂಬಾನಿಯ ಸ್ನೇಹಿತರು ಕೂಡ 'ತೂ ಅಂಬಾನಿ ಹೈ ಯಾ ಭಿಕಾರಿ?' ಎಂದು ಲೇವಡಿ ಮಾಡಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಗನ ಮಾತು ಕೇಳಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ನಗುತ್ತಿದ್ದರು ಎಂದು ಸಂದರ್ಶನದಲ್ಲಿ ತಿಳಿದುಬಂದಿದೆ.

67

ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ವಿನಮ್ರ ನಡವಳಿಕೆ ಮತ್ತು ಸಂಪ್ರದಾಯಬದ್ಧ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ತಮ್ಮ ಅಧ್ಯಯನವನ್ನು ಮುಗಿಸಿದ್ದು ಇದೀಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್‌ಅನ್ನು ನಿರ್ವಹಿಸುತ್ತಿದ್ದಾರೆ.  

77

ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರಾಗಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 40 ಬಿಲಿಯನ್ ಡಾಲರ್​ ಎಂದು ತಿಳಿದುಬಂದಿದೆ.

Read more Photos on
click me!

Recommended Stories