ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ, ಹೋದಲ್ಲೆಲ್ಲಾ ಭದ್ರತಾ ಕಾರುಗಳ ದೀರ್ಘ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ. ಅದರಲ್ಲೂ ಅವರ ಜೊತೆ ಕುಟುಂಬ ಸದಸ್ಯರಾದ ನೀತಾ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಇರುವಾಗಲಂತೂ ಬೆಂಗಾವಲು ಪಡೆ ಮತ್ತಷ್ಟು ದೀರ್ಘವಾಗುತ್ತದೆ.