Above fridge storage hacks: ಅಡುಗೆಮನೆಯಲ್ಲಿ ಫ್ರಿಡ್ಜ್ ಮೇಲ್ಭಾಗವು ಯಾವಾಗಲೂ ಧೂಳು ತಿನ್ನುತ್ತಾ ಖಾಲಿ ಬಿದ್ದಿರುತ್ತದೆ. ಆದರೆ ಈ ಸಣ್ಣ ಜಾಗವನ್ನ ಸ್ಮಾರ್ಟ್ ಆಗಿ ಬಳಸಿಕೊಂಡರೆ ನೋಡಲು ಚೆನ್ನಾಗಿ ಕಾಣುತ್ತದೆ ಮತ್ತು ಹೆಚ್ಚಿನ ವಸ್ತುಗಳನ್ನು ಇಡಲು ಜಾಗವೂ ಸಿಗುತ್ತದೆ. ಅದು ಹೇಗೆಂದು ಇಲ್ಲಿ ನೋಡಿ.
ಫ್ರಿಡ್ಜ್ ಮೇಲ್ಭಾಗವು ಎತ್ತರದಲ್ಲಿ ಇರುವುದರಿಂದ ಅಲ್ಲಿ ಬಿಡಿ ವಸ್ತುಗಳನ್ನು ಇಟ್ಟರೆ ಅವು ಹಿಂದಕ್ಕೆ ಬಿದ್ದು ಹೋಗುವ ಅಥವಾ ಧೂಳು ಹಿಡಿಯುವ ಸಾಧ್ಯತೆ ಇರುತ್ತದೆ. ಆದರೆ ಪ್ಲಾಸ್ಟಿಕ್ ಅಥವಾ ಬಿದಿರಿನ ಬುಟ್ಟಿಗಳನ್ನು ಬಳಸಿ ಅದರೊಳಗೆ ಇಟ್ಟರೆ ನಿಮಗೆ ಬೇಕಾದಾಗ ಇಡೀ ಬುಟ್ಟಿಯನ್ನೇ ಕೆಳಗೆ ಇಳಿಸಿ ಸುಲಭವಾಗಿ ಬೇಕಾದ ವಸ್ತುವನ್ನು ಹುಡುಕಬಹುದು.
210
ಸಣ್ಣ ಕಪಾಟು ಮಾಡಿಸಿ
ನೀವು ಹೊಸದಾಗಿ ಕಿಚನ್ ಮಾಡಿಸುತ್ತಿದ್ದರೆ ಫ್ರಿಡ್ಜ್ ಮೇಲೆ ಒಂದು ಚಿಕ್ಕ ಕಪಾಟನ್ನು (Cabinet) ಮಾಡಿಸಿಕೊಳ್ಳಿ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.
310
ಶೋ-ಪೀಸ್ ಇರಿಸಿ
ಅಡುಗೆಮನೆಗೆ ಮೆರುಗು ನೀಡಲು ಸುಂದರವಾದ ಯಾವುದಾದರೂ ಸೆರಾಮಿಕ್ ಬೌಲ್ ಅಥವಾ ಅಲಂಕಾರಿಕ ವಸ್ತುಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಬಹುದು.
ನೀವು ಅಡುಗೆ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದರೆ ಅವುಗಳನ್ನು ಒಂದು ಮೂಲೆಯಲ್ಲಿ ಜೋಡಿಸಿ ಇಡಿ.
510
ಗಾಜಿನ ಡಬ್ಬಿಗಳ ಅಲಂಕಾರ
ಕಾಳುಕಡಿಗಳನ್ನು ಸುಂದರವಾದ ಗಾಜಿನ ಡಬ್ಬಿಗಳಲ್ಲಿ ತುಂಬಿಸಿ ಸಾಲಾಗಿ ಜೋಡಿಸಿದರೆ ನೋಡಲು ಚೆನ್ನಾಗಿರುತ್ತದೆ ಮತ್ತು ಯಾವ ವಸ್ತು ಎಲ್ಲಿದೆ ಎಂದು ತಕ್ಷಣ ತಿಳಿಯುತ್ತದೆ.
610
ಸಣ್ಣ ಗಿಡಗಳನ್ನು ಇಡಿ
ಅಡುಗೆಮನೆಯಲ್ಲಿ ತಾಜಾತನ ಬೇಕೆಂದರೆ ಫ್ರಿಡ್ಜ್ ಮೇಲೆ ಸಣ್ಣ ಸಣ್ಣ ಇಂಡೋರ್ ಪ್ಲಾಂಟ್ಸ್ (ಗಿಡಗಳನ್ನು) ಇಡಬಹುದು.
710
ಎಕ್ಸ್ಟ್ರಾ ದಿನಸಿ ಪ್ಯಾಕೆಟ್
ಅಡುಗೆಗೆ ತಂದಿರುವ ಎಕ್ಸ್ಟ್ರಾ ಪಾಸ್ತಾ, ನೂಡಲ್ಸ್ ಅಥವಾ ತಿಂಡಿಗಳ ಪ್ಯಾಕೆಟ್‌ಗಳನ್ನು ಡಬ್ಬಿಗಳಲ್ಲಿ ಹಾಕಿ ಇಲ್ಲಿ ಇರಿಸಿದರೆ ಕಿಚನ್ ಶೆಲ್ಫ್‌ಗಳು ಖಾಲಿಯಾಗುತ್ತವೆ.
810
ದೊಡ್ಡ ತಟ್ಟೆ ಮತ್ತು ಬಟ್ಟಲುಗಳನ್ನು ಇಡಿ
ಅಡುಗೆಮನೆಯ ಕಪಾಟಿನಲ್ಲಿ ಜಾಗ ಸಾಲದಿದ್ದರೆ ದೊಡ್ಡದಾದ ಸರ್ವಿಂಗ್ ಪ್ಲೇಟ್‌ಗಳು ಅಥವಾ ಅಗಲವಾದ ಪಾತ್ರೆಗಳನ್ನು ಫ್ರಿಡ್ಜ್ ಮೇಲೆ ಜೋಡಿಸಿ ಇಡಬಹುದು.
910
ಟ್ರೇಗಳಲ್ಲಿ ವಸ್ತುಗಳನ್ನು ಗುಂಪು ಮಾಡಿ
ಬಟ್ಟೆಗಳು ಅಥವಾ ಅಡುಗೆಗೆ ಬಳಸುವ ಫಾಯಿಲ್ ಪೇಪರ್‌ಗಳನ್ನು ಚೆಲ್ಲಾಪಿಲ್ಲಿ ಮಾಡದೆ ಒಂದು ಟ್ರೇನಲ್ಲಿ ಹಾಕಿ ಇಟ್ಟರೆ ಬೇಕಾದಾಗ ಸುಲಭವಾಗಿ ಸಿಗುತ್ತದೆ.
1010
ನೆನಪಿಡಿ
ನೀಟಾಗಿ ವಿಂಗಡಿಸಿ: ಬುಟ್ಟಿ ಮತ್ತು ಡಬ್ಬಿಗಳನ್ನು ಬಳಸಿ ಆ ಜಾಗವನ್ನು ಒಂದು ಸುಂದರವಾದ 'ಸ್ಟೋರೇಜ್ ಕಾರ್ನರ್' ಆಗಿ ಬದಲಾಯಿಸಿ.
ಫ್ರಿಡ್ಜ್ ಮೇಲ್ಭಾಗದಲ್ಲಿ ಧೂಳು ಮತ್ತು ಜಿಡ್ಡು ಬೇಗ ಕುಳಿತುಕೊಳ್ಳುತ್ತದೆ. ಅದಕ್ಕಾಗಿ ಅಲ್ಲಿ ಯಾವುದೇ ವಸ್ತು ಇಡುವ ಮುನ್ನ ಒಂದು ಹಳೆಯ ನ್ಯೂಸ್‌ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ಹಾಸಿ. ತಿಂಗಳಿಗೊಮ್ಮೆ ಇದನ್ನು ಬದಲಾಯಿಸಿದರೆ ಸಾಕು, ನಿಮ್ಮ ಪಾತ್ರೆಗಳು ಮತ್ತು ಫ್ರಿಡ್ಜ್ ಮೇಲೆ ಕೊಳೆಯಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.