ಈ ಟ್ರಿಕ್ಸ್ ಟ್ರೈ ಮಾಡಿದ್ರೆ… ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದೇ ಇಲ್ಲ

Published : Apr 10, 2026, 04:40 PM IST

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದು ಸಾಮಾನ್ಯ. ಅದಕ್ಕಾಗಿಯೇ ಹೆಚ್ಚಿನ ಜನರಿಗೆ ಈರುಳ್ಳಿ ಕತ್ತರಿಸೋದಕ್ಕೆ ಇಷ್ಟ ಆಗಲ್ಲ. ನೀವು ಕೂಡ ಇದರಿಂದ ತೊಂದರೆಗೊಳಗಾಗಿದ್ದರೆ, ಇಲ್ಲಿ ಹೇಳಿರೋ ಟ್ರಿಕ್ಸ್ ನೀವು ಟ್ರೈ ಮಾಡಿ. ಇದರಿಂದ ಈರುಳ್ಳಿ ಕತ್ತರಿಸೋವಾಗ ಕಣ್ಣೀರು ಬರೋದಕ್ಕೆ ಗುಡ್ ಬೈ ಹೇಳಬಹುದು. 

PREV
16
ಈರುಳ್ಳಿ ಕತ್ತರಿಸುವಾಗ ನಿಮಗೂ ಕಣ್ಣೀರು ಬರುತ್ತಾ?

ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಈರುಳ್ಳಿಯನ್ನು ಕತ್ತರಿಸುವ ವಿಷಯಕ್ಕೆ ಬಂದಾಗಲೆಲ್ಲಾ, ಹರಿದು ಬರೋ ಕಣ್ಣೀರು ನೆನಪಾಗಿ, ಈರುಳ್ಳಿ ಕತ್ತರಿಸೋದೆ ಬೇಡ ಎನಿಸಿ ಬಿಡುತ್ತೆ. ಇದೇ ಕಾರಣಕ್ಕೆ ಕೆಲವರು ಈರುಳ್ಳಿ ಕತ್ತರಿಸೋದೆ ಇಲ್ಲ. ನಿಮಗೂ ಕೂಡ ಈರುಳ್ಳಿಯನ್ನು ಕತ್ತರಿಸುವುದರಿಂದ ಕಣ್ಣುಗಳಲ್ಲಿ ಉರಿ, ಕಣ್ಣೀರು ಮತ್ತು ಮೂಗು ಸೋರುವಿಕೆ ಉಂಟಾಗುತ್ತದೆ. ಇದಕ್ಕೆ ಕಾರಣ ಏನು? ಹೇಗೆ ಕಣ್ಣು ಉರಿ ಆಗೋದನ್ನು ತಡೆಯಬಹುದು ನೋಡೋಣ.

26
ಗಾಳಿಯಲ್ಲಿ ಹರಡುವ ಸಂಯುಕ್ತಗಳು

ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಅಥವಾ ಕಣ್ಣಿರು ಬರಲು ಮುಖ್ಯ ಕಾರಣ ಈರುಳ್ಳಿಯಲ್ಲಿರುವ ಸಲ್ಫರ್ ಹೊಂದಿರುವ ಸಂಯುಕ್ತಗಳು. ನಾವು ಈರುಳ್ಳಿಯನ್ನು ಕತ್ತರಿಸಿದಾಗ, ಅವು ಗಾಳಿಯಲ್ಲಿ ಹರಡಿ ಕಣ್ಣೀರು ಹರಿಯುವಂತೆ ಮಾಡುತ್ತದೆ. ಆದರೆ, ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ಇವತ್ತು, ಈ ಸಮಸ್ಯೆಯನ್ನು ತಪ್ಪಿಸಲು ನೀವು ಬಳಸಬಹುದಾದ ಕೆಲವು ತಂತ್ರಗಳನ್ನು ನಿಮಗೆ ತಿಳಿಸುತ್ತೇವೆ.

36
ಈರುಳ್ಳಿಯನ್ನು ಫ್ರೀಜರಲ್ಲಿಡಿ

ಈ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿದೆ. ನೀವು ಈರುಳ್ಳಿಯನ್ನು ಕತ್ತರಿಸಬೇಕಾಗಿ ಬಂದಾಗ, ಕತ್ತರಿಸುವ ಕನಿಷ್ಠ 10 ರಿಂದ 30 ನಿಮಿಷಗಳ ಮೊದಲು ರೆಫ್ರಿಜರೇಟರ್‌ನಲ್ಲಿ ಇರಿಸಿ, ಅಥವಾ 5-10 ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ. ಈರುಳ್ಳಿ ತಂಪಾಗುವುದರಿಂದ ಕಣ್ಣೀರು ಉತ್ಪಾದಿಸುವ ಅನಿಲಗಳನ್ನು ಬಿಡುಗಡೆ ಮಾಡುವ ಕಿಣ್ವಗಳನ್ನು ನಿಧಾನಗೊಳ್ಳುತ್ತದೆ. ಇದು ಕಣ್ಣೀರು ಬರೋದನ್ನು ತಡೆಯುತ್ತದೆ.

46
ಹರಿಯುವ ನೀರಿನ ಅಡಿಯಲ್ಲಿ ಇರಿಸಿ

ನಿಮಗೆ ರೆಫ್ರಿಜರೇಟರ್‌ನಲ್ಲಿ ಇಡಲು ಸಮಯವಿಲ್ಲದಿದ್ದರೆ, ಯಾವಾಗಲೂ ಹರಿಯುವ ನೀರಿನ ಅಡಿಯಲ್ಲಿ ಅಥವಾ ನೀರಿನಲ್ಲಿ ಇಟ್ಟು ಈರುಳ್ಳಿಯನ್ನು ಕತ್ತರಿಸಿ. ಅಂದರೆ ಈರುಳ್ಳಿಯನ್ನು ಸಿಪ್ಪೆ ತೆಗೆದು ನೀರು ತುಂಬಿದ ಬಟ್ಟಲಿನಲ್ಲಿ ಕತ್ತರಿಸಿ. ಇದು ಕಣ್ಣೀರನ್ನು ತಡೆಯುತ್ತದೆ.

56
ಹರಿತವಾದ ಚಾಕುವನ್ನು ಬಳಸಿ

ಇದು ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಯಾವಾಗಲೂ ಹರಿತವಾದ ಚಾಕು ಬಳಸಿ ಈರುಳ್ಳಿಯನ್ನು ಕತ್ತರಿಸಿ. ಹರಿತವಾದ ಚಾಕು ಕ್ಲೀನ್ ಕಟ್ ಮಾಡುತ್ತದೆ ಮತ್ತು ಕತ್ತರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಇದು ಕಣ್ಣೀರು ಬರದಂತೆ ತಡೆಯುತ್ತದೆ.

66
ಬೇರಿನ ತುದಿಯನ್ನು ಕತ್ತರಿಸಿ

ಈರುಳ್ಳಿಯ ಬೇರಿನ ತುದಿಯನ್ನು, ಕೆಳಭಾಗವನ್ನು, ಕೊನೆಯಲ್ಲಿ ಕತ್ತರಿಸಿ; ಇದು ಹೆಚ್ಚು ಕಣ್ಣೀರು ಉತ್ಪಾದಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ. ಮೊದಲು ಮೇಲಿನ ತುದಿಯನ್ನು ಕತ್ತರಿಸಿ ಬೇರಿನ ತುದಿಯನ್ನು ಬಿಡಿ. ಇದು ಅನಿಲವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣೀರನ್ನು ತಡೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories