ಮಿಕ್ಸಿ ಜಾರ್‌ನ ಚೂಪಾದ ಬ್ಲೇಡ್ ಅಡಿಯಲ್ಲಿ ಜಿಡ್ಡು, ಕಲೆ ಕುಳಿತಿದ್ಯಾ? ಮುಟ್ಟದೆ ಕ್ಲೀನ್ ಮಾಡಲು ಇಲ್ಲಿದೆ 1 ನಿಮಿಷದ ಟ್ರಿಕ್

Published : Oct 13, 2026, 03:44 PM IST

How to clean mixer grinder jar: ಮಿಕ್ಸಿ ಜಾರ್‌ನ ಚೂಪಾದ ಬ್ಲೇಡ್ ಮುಟ್ಟದೆಯೇ ಅದರ ಅಡಿಯಲ್ಲಿರುವ ಹಠಮಾರಿ ಜಿಡ್ಡು ಮತ್ತು ವಾಸನೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಕಿಚನ್ ಹ್ಯಾಕ್! ಕೇವಲ ಒಂದೇ ನಿಮಿಷದಲ್ಲಿ ಜಾರ್ ಹೊಸದರಂತೆ ಹೊಳೆಯುತ್ತೆ.

PREV
14
ಕೇವಲ 1 ನಿಮಿಷ ಸಾಕು

ಕೇವಲ 1 ನಿಮಿಷ ಸಾಕು
ಭಾರತೀಯ ಅಡುಗೆ ಮನೆಯಲ್ಲಿ ಮಿಕ್ಸಿ ಜಾರ್ ಇಲ್ಲದೆ ದಿನವೇ ಶುರುವಾಗುವುದಿಲ್ಲ. ಚಟ್ನಿ, ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ರುಬ್ಬಲು ಮಿಕ್ಸಿ ಅತ್ಯಗತ್ಯ. ಆದರೆ, ಮಸಾಲೆಗಳನ್ನು ರುಬ್ಬಿದ ನಂತರ ಮಿಕ್ಸಿ ಜಾರ್‌ನಿಂದ ಬರುವ ತೀಕ್ಷ್ಣವಾದ ವಾಸನೆ ಮತ್ತು ಬ್ಲೇಡ್ ಅಡಿಯಲ್ಲಿ ಕುಳಿತುಕೊಳ್ಳುವ ಹಳದಿ ಕಲೆಗಳನ್ನು ಸ್ವಚ್ಛಗೊಳಿಸುವುದು ಗೃಹಿಣಿಯರಿಗೆ ದೊಡ್ಡ ತಲೆನೋವಿನ ಕೆಲಸ.

ಎಷ್ಟೇ ಸೋಪು ಹಾಕಿ ತೊಳೆದರೂ ವಾಸನೆ ಮಾತ್ರ ಹೋಗುವುದೇ ಇಲ್ಲ. ಅಷ್ಟೇ ಅಲ್ಲ, ಚೂಪಾದ ಬ್ಲೇಡ್ ಅಡಿಯಲ್ಲಿ ಕೈ ಹಾಕಿ ಉಜ್ಜುವಾಗ ಬೆರಳುಗಳಿಗೆ ಗಾಯವಾಗುವ ಅಪಾಯವೂ ಇರುತ್ತದೆ. ಈ ಸಮಸ್ಯೆಗೆ ಅಡುಗೆ ತಜ್ಞರು ಕೇವಲ 1 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಕಿಚನ್ ಹ್ಯಾಕ್ (Kitchen Hack) ತಿಳಿಸಿಕೊಟ್ಟಿದ್ದಾರೆ.

24
ಕಲೆ ಮತ್ತು ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ವಿಧಾನ

ಕಲೆ ಮತ್ತು ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ವಿಧಾನ
ಯಾವುದೇ ಕಷ್ಟವಿಲ್ಲದೆ, ಬ್ಲೇಡ್ ಮುಟ್ಟದೆಯೇ ಮಿಕ್ಸಿ ಜಾರ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ..

ಬೇಕಾಗುವ ಸಾಮಗ್ರಿಗಳು
ಅರ್ಧ ಚಮಚ ಅಡುಗೆ ಸೋಡಾ (Baking Soda), 1 ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ ಸೋಪ್ ಮತ್ತು ಅರ್ಧ ಕಪ್ ನೀರು.

34
ಹೊಸದರಂತೆ ಫಳಫಳನೆ ಹೊಳೆಯುತ್ತೆ

ಹೊಸದರಂತೆ ಫಳಫಳನೆ ಹೊಳೆಯುತ್ತೆ 
ಕೊಳೆಯಾದ ಅಥವಾ ವಾಸನೆ ಬರುತ್ತಿರುವ ಮಿಕ್ಸಿ ಜಾರ್‌ಗೆ ಮೇಲೆ ತಿಳಿಸಿದ ಈ ಮೂರೂ ಸಾಮಗ್ರಿಗಳನ್ನು ಹಾಕಿ ಮುಚ್ಚಳ ಮುಚ್ಚಿ. ಈಗ ಜಾರ್ ಅನ್ನು ಮಿಕ್ಸಿ ಮಷಿನ್ ಮೇಲೆ ಇಟ್ಟು ಕೇವಲ 1 ನಿಮಿಷದ ಕಾಲ ರನ್ (ಆನ್) ಮಾಡಿ. ನಂತರ ಮುಚ್ಚಳ ತೆಗೆದು, ಸಾಧಾರಣ ನೀರಿನಿಂದ ಜಾರ್ ಅನ್ನು ಒಮ್ಮೆ ತೊಳೆದರೆ ಸಾಕು, ಜಾರ್‌ನಲ್ಲಿದ್ದ ಹಠಮಾರಿ ಕಲೆಗಳು, ಬ್ಲೇಡ್ ಅಡಿಯಲ್ಲಿ ಸಿಲುಕಿದ್ದ ಜಿಡ್ಡು ಸಂಪೂರ್ಣವಾಗಿ ಮಾಯವಾಗಿ ಜಾರ್ ಹೊಸದರಂತೆ ಫಳಫಳನೆ ಹೊಳೆಯುತ್ತೆ.

44
ಈ ಟ್ರಿಕ್ ಹೇಗೆ ಕೆಲಸ ಮಾಡುತ್ತೆ?

ಈ ಟ್ರಿಕ್ ಹೇಗೆ ಕೆಲಸ ಮಾಡುತ್ತೆ?
ಅಡುಗೆ ಸೋಡಾದ ಶಕ್ತಿ: ಬೇಕಿಂಗ್ ಸೋಡಾವು ನೈಸರ್ಗಿಕ ಕ್ಲೆನ್ಸರ್ ಆಗಿದ್ದು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಸಾಲೆಗಳ ತೀಕ್ಷ್ಣ ವಾಸನೆಯನ್ನು ತಕ್ಷಣವೇ ಹೀರಿಕೊಳ್ಳುತ್ತದೆ ಮತ್ತು ಹಳದಿ ಕಲೆಗಳನ್ನು ನಿವಾರಿಸುತ್ತದೆ.

ಸುರಕ್ಷತೆ: ಮಿಕ್ಸಿ ಆನ್ ಮಾಡಿದಾಗ ನೀರಿನ ನೊರೆ ರಭಸವಾಗಿ ತಿರುಗಿ, ಕೈ ತಲುಪದ ಮೂಲೆ-ಮೂಲೆಗಳನ್ನು ಮತ್ತು ಬ್ಲೇಡ್‌ನ ಕೆಳಭಾಗವನ್ನು ಸ್ವತಃ ತಾನೇ ಸ್ವಚ್ಛಗೊಳಿಸುತ್ತದೆ. ಇದರಿಂದ ಚೂಪಾದ ಬ್ಲೇಡ್‌ಗೆ ಕೈ ಹಾಕಿ ಉಜ್ಜುವ ಅಗತ್ಯವೇ ಇರುವುದಿಲ್ಲ.

ಇನ್ಮುಂದೆ ಮಿಕ್ಸಿ ಜಾರ್‌ನಲ್ಲಿ ಮಸಾಲೆ ವಾಸನೆ ಬಂದರೆ ಅಥವಾ ಕಲೆಯಾದರೆ ಚಿಂತಿಸಬೇಡಿ, ಅಡುಗೆ ಸೋಡಾ ಮತ್ತು ಲಿಕ್ವಿಡ್ ಸೋಪ್ ಬಳಸಿ ಕೇವಲ ಒಂದೇ ನಿಮಿಷದಲ್ಲಿ ಈ ಸಮಸ್ಯೆಗೆ ಗುಡ್‌ಬೈ ಹೇಳಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories