ರುಬ್ಬೋದರಲ್ಲಿ ಅಲ್ಲ, ಕಾವಲಿಗೆ ಹಾಕೋದರಲ್ಲಿದೆ ಗೋಲ್ಡನ್, ಕ್ರಿಸ್ಪಿ ದೋಸೆಯ ಸೀಕ್ರೆಟ್

Published : Oct 12, 2026, 10:26 AM IST

Hotel Style Dose Making Ideas: ಮನೆಯಲ್ಲಿ ಹೋಟೆಲ್ ಶೈಲಿಯ ಗರಿಗರಿ ಮತ್ತು ಮೃದುವಾದ ದೋಸೆ ಮಾಡಲು ಕಾವಲಿಯ ಬಳಕೆ ಹಾಗೂ ಹಿಟ್ಟಿನ ಹದ ಬಹಳ ಮುಖ್ಯ. ಈ ಲೇಖನದಲ್ಲಿ ದೋಸೆ ಹಾಕುವ ವಿಧಾನ ತಿಳಿಸಲಾಗಿದೆ.

PREV
15
ಆರೋಗ್ಯಕರ ದೋಸೆ

ದೋಸೆ ಆರೋಗ್ಯಕರ ತಿಂಡಿಯಾಗಿದ್ದು, ಬಹುತೇಕರು ಇಷ್ಟಪಡುವ ಆಹಾರವಾಗಿದೆ. ಅದೇ ಹೋಟೆಲ್‌ನಲ್ಲಿ ದೋಸೆ ಆರ್ಡರ್ ಮಾಡಿದಾಗ ಅದು ಗೋಲ್ಡನ್ ಕಲರ್, ಹೊರಗೆ ಕ್ರಿಸ್ಪಿ ಮತ್ತು ಒಳಗೆ ಸಾಫ್ಟ್ ಆಗಿರುತ್ತದೆ. ಮನೆಯಲ್ಲಿ ಮಾಡಿದಾಗ ಹೋಟೆಲ್ ಶೈಲಿಯಲ್ಲಿ ದೋಸೆ ಬರಲ್ಲ. ಈ ರೀತಿಯಾಗಿ ದೋಸೆ ಮಾಡಿಕೊಳ್ಳೋದು ಹೇಗೆ ಎಂದು ನೋಡೋಣ ಬನ್ನಿ.

25
ದೋಸೆ ಹಾಕೋದು ಹೇಗೆ?

ದೋಸೆಹಿಟ್ಟನ್ನು ಸಿದ್ಧ ಮಾಡಿಕೊಳ್ಳುವಾಗ ಜನರು ತುಂಬಾನೇ ಎಚ್ಚರಿಕೆಯಿಂದಿರುತ್ತಾರೆ. ಆದರೆ ದೋಸೆ ಹಾಕಿಕೊಳ್ಳುವಾಗ ಕೆಲ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ದೋಸೆ ಲುಕ್ ಬದಲಾಗಿ, ಹೋಟೆಲ್ ಶೈಲಿಯ ರುಚಿಯನ್ನು ನೀಡಲ್ಲ. ಹಿಟ್ಟು ಎಷ್ಟು ಮುಖ್ಯವೋ ಹಾಗೆಯೇ ಕಾವಲಿ ಮೇಲೆ ದೋಸೆ ಹಾಕೋದು ಸಹ ಮುಖ್ಯವಾಗುತ್ತದೆ.

35
ಉಪ್ಪು ಯಾವಾಗ ಸೇರಿಸಿಕೊಳ್ಳಬೇಕು?

ದೋಸೆ ಹಿಟ್ಟು ಸಿದ್ದವಾಗುತ್ತಿದ್ದಂತೆ ಉಪ್ಪು ಸೇರಿಸಿಕೊಳ್ಳಬಾರದು. ದೋಸೆ ಮಾಡಲು ಇನ್ನೇಲು ಎರಡ್ಮೂರು ನಿಮಿಷ ಇರುವಾಗಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಇಡೀ ಹಿಟ್ಟಿಗೆ ಒಮ್ಮಲೇ ಉಪ್ಪು ಸೇರಿಸಬಾರದು.

45
ನೀರು ಮತ್ತು ಈರುಳ್ಳಿ ಸಲಹೆ

ಒಂದು ವೇಳೆ ನೀವು ಕಬ್ಬಿಣದ ಕಾವಲಿ ಬಳಕೆ ಮಾಡುತ್ತಿದ್ರೆ ಪದೇ ಪದೇ ನೀರು ಚುಮುಕಿಸುತ್ತಿರಬೇಕು. ಕಾವಲಿ ಮೇಲೆ ನೀರು ಚುಮುಕಿಸಿದಾಗ ಅದು ಗುಳ್ಳೆಯಂತೆ ಬರಬೇಕು. ನಂತರ ಕಾಟನ್ ಬಟ್ಟೆಯಿಂದ ಒರೆಸಿಕೊಂಡು ದೋಸೆ ಹಾಕಿಕೊಳ್ಳಿ. ಇದರಿಂದ ದೋಸೆ ಕ್ರಿಸ್ಪಿಯಾಗುತ್ತದೆ. ನಾನ್ ಸ್ಟಿಕ್ ಕಾವಲಿಯಾಗಿದ್ರೆ, ಈರುಳ್ಳಿಯನ್ನು ಅರ್ಧ ತುಂಡು ಮಾಡಿಕೊಂಡು ಅಡುಗೆಎಣ್ಣೆಯಲ್ಲಿ ಅದ್ದಿ ಕಾವಲಿ ಮೇಲೆ ಸವರಿ ದೋಸೆ ಹಾಕಿಕೊಳ್ಳಬೇಕು.

55
ಗೋಲ್ಡನ್ ಕಲರ್

ಇನ್ನು ದೋಸೆ ಗೋಲ್ಡನ್ ಕಲರ್‌ಗಾಗಿ ಸಕ್ಕರೆಯನ್ನು ಸೇರಿಸಿಕೊಳ್ಳಬೇಕು. ಸಕ್ಕರೆಯೂ ದೋಸೆಗೆ ಹೊಂಬಣ್ಣ ನೀಡುತ್ತದೆ. ಒಂದು ಕೆಜಿ ದೋಸೆಹಿಟ್ಟಿಗೆ ಅರ್ಧ ಟೀ ಸ್ಪೂನ್ ನಷ್ಟು ಮಾತ್ರ ಸಕ್ಕರೆ ಸೇರಿಸಿಕೊಳ್ಳಬೇಕು. ಸಕ್ಕರೆ ಅತಿಯಾದ್ರೆ ದೋಸೆ ತಳಹಿಡಿದು ಸೀದು ಹೋಗುತ್ತದೆ. ದೋಸೆಯನ್ನು ದಪ್ಪವಾಗಿ ಹಾಕಿದ್ರೆ ಅದು ಸಾಫ್ಟ್ ಆಗುತ್ತೆ. ಹಾಗಾಗಿ ಮಧ್ಯದಲ್ಲಿ ದಪ್ಪ ಮತ್ತು ಅಂಚಿನಲ್ಲಿ ತೆಳುವಾಗಿ ಹಾಕಿ. ಇದರಿಂದ ದೋಸೆ ಕ್ರಿಸ್ಪಿ ಆಂಡ್ ಸಾಫ್ಟ್ ಆಗುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories