ಕೆಲವರು ಬೆಳಗಿನ ಜಾವ, ಇನ್ನು ಕೆಲವರು ರಾತ್ರಿಯ ಸಮಯ ಮನೆಯ ನೆಲ ಒರೆಸುತ್ತಾರೆ. ಆದರೆ ನಿಜವಾಗಿಯೂ ನೆಲ ಒರೆಸಲು ಯಾವ ಸಮಯ ಬೆಸ್ಟ್? ರಾತ್ರಿ ವೇಳೆ ಮಾಡಬಾರದ ಕೆಲಸಗಳೇನು? ಗೃಹಿಣಿಯರಿಗೆ ಈ ವಿಷಯ ತಿಳಿದರೆ ಅನಾಹುತ ತಡೆಯಬಹುದು!
ಭಾರತೀಯ ಮಹಿಳೆಯರು ಮನೆಯ ಸ್ವಚ್ಛವಾಗಿಡಲು ಮೊದಲ ಆದ್ಯತೆ ನೀಡ್ತಾರೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಮಾಡುವ ಕೆಲಸವೆಂದರೆ ಮನೆಯ ನೆಲ ಒರೆಸುವುದು, ಕಸಗೂಡಿಸುವುದು, ಇದು ಮಾಡದೆ ಬೇರೆ ಯಾವುದೇ ಕೆಲಸ ಶುರುವಾಗುವುದಿಲ್ಲ. ಗೃಹಿಣಿಯರು ಸಾಮಾನ್ಯವಾಗಿ ಬೆಳಗಿನ ಜಾವವೇ ಮನೆಯ ನೆಲ ಒರೆಸುವುದು. ಆದರೆ ಕೆಲವರು ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲಸ ಮಾಡುವವರು ಬೆಳಗ್ಗೆ ಮನೆ ಸ್ವಚ್ಛಗೊಳಿಸಲು ಸಮಯವೇ ಸಿಗುವುದಿಲ್ಲ. ಹೀಗಾಗಿ ನಗರದಲ್ಲಿನ ಮಹಿಳೆಯರು ರಾತ್ರಿಯೇ ನೆಲ ಒರೆಸುವುದು ಹೆಚ್ಚು. ಹಾಗಾದರೆ ನೆಲ ಒರೆಸುವುದಕ್ಕೆ ಯಾವ ಸಮಯ ಬೆಸ್ಟ್? ರಾತ್ರಿಯೋ? ಬೆಳಗಿನ ಜಾವ?
26
ನೆಲ ಒರೆಸುವ ಸರಿಯಾದ ಸಮಯ ಯಾವುದು? ಬೆಳಗ್ಗೆಯೋ? ರಾತ್ರಿಯೋ?
ಬೆಳಗ್ಗೆಯೋ ಸಂಜೆಯೋ ಆದರೆ ಮನೆಯಲ್ಲಿ ಅತ್ತಿಂದಿತ್ತ ಓಡಾಡುವುದು ಕಡಿಮೆ ಇದ್ದಾಗ ನೆಲ ಒರೆಸುವುದು ಸೂಕ್ತ, ಇದು ಹೆಚ್ಚಾಗಿ ಕೆಲವರಿಗೆ ರಾತ್ರಿ ಅಥವಾ ಇನ್ನು ಕೆಲವರಿಗೆ ಬೆಳಗಿನ ಜಾವ ಉತ್ತಮ. ನೆಲ ಒರೆಸಿದಾಗ ನೆಲವು ಒದ್ದೆಯಾಗಿರುತ್ತದೆ. ಇದೆ ವೇಳೆ ಒದ್ದೆಯಾದ ನೆಲದ ಮೇಲೆ ನಡೆಯುವುದರಿಂದ ಹೆಜ್ಜೆಯ ಗುರುತು ಮೂಡಿ ತೊಳೆದಂತೆ ಕಾಣುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ಸಮಯ ಹಿರಿಯರು ಓಡಾಡುವುದರಿಂದ ಕಾಲು ಜಾರುವ ಸಾಧ್ಯತೆ ಇರುತ್ತೆ. ಹೀಗಾಗಿ ನೆಲ ಒರೆಸಲಿಕ್ಕೆ ಮೇಲೆ ಹೇಳಿದಹಾಗೆ ಅತ್ತಿಂದಿತ್ತ ಓಡಾಡದ ಸಮಯ ನೋಡಿ ಒರೆಸುವುದು ಸೂಕ್ತ.
36
ನೆಲ ಒರೆಸಿದ ಮೇಲೆ ರಾತ್ರಿಯಿಡೀ ಮಾಪ್ ಬಿಡುವುದು ತಪ್ಪು
ಮನೆಯ ನೆಲ ಒರೆಸಿದ ಮೇಲೆ ಕೆಲವರು ಬಾತ್‌ರೂಮ ಮೂಲೆಯಲ್ಲೋ, ಬಾಲ್ಕನಿಯಲ್ಲೋ ಇಡುತ್ತಾರೆ. ಒದ್ದೆಯಾದ ಮಾಪ್ ಹೀಗೆ ಇಡುವುದು ಸರಿಯಲ್ಲ. ಏಕೆಂದರೆ. ಅದು ತೇವಾಂಶವನ್ನು ಹಾಗೆ ಉಳಿಸಿಕೊಳ್ಳಬಹುದು. ಆಗ ಬಾತ್‌ರೂಂನಂತಹ ಮುಚ್ಚಿದ ರೂಮಿನಲ್ಲಿ ಅದನ್ನು ಇಟ್ಟಾಗ ಕೆಟ್ಟಗಾಳಿ, ವಾಸನೆ ಬರುವಂತಾಗುತ್ತೆ. ಹೀಗಾಗಿ ನೆಲ ಒರೆಸಿದ ನಂತರ ಬಿಸಿಲಿನಲ್ಲಿ ಅಥವಾ ಚೆನ್ನಾಗಿ ಗಾಳಿ ಬರುವಲ್ಲಿ ಇಡುವುದು ಬೆಸ್ಟ್.
ರಾತ್ರಿಯಲ್ಲಿ ನೀವು ಇಡೀ ಮನೆಯನ್ನು ಒರೆಸಿದರೆ, ಒದ್ದೆಯಾದ ನೆಲವು ಸ್ವತಃ ತೊಂದರೆಯಾಗಬಹುದು. ಕುಟುಂಬದ ಸದಸ್ಯರು ರಾತ್ರಿಯಲ್ಲಿ ನೀರು ಕುಡಿಯಲು, ಸ್ನಾನಗೃಹಕ್ಕೆ ಹೋಗಲು ಅಥವಾ ಇನ್ನೇನಾದರೂ ಮಾಡಲು ಎದ್ದರೆ, ಒದ್ದೆಯಾದ ನೆಲದ ಮೇಲೆ ಕಾಲಿಟ್ಟು ಜಾರಿಬೀಳುವ ಅಪಾಯವಿರುತ್ತದೆ. ಹಗಲಿನಲ್ಲಿ ನೆಲ ಒರೆಸುವುದರಿಂದ ಸೂರ್ಯನ ಬೆಳಕಿನಿಂದ ನೆಲ ಒರೆಸಿರುವುದು ಓಡಾಡುವವರಿಗೆ ಕಾಣಿಸುತ್ತದೆ ಆಗ ಜಾಗರೂಕವಾಗಿ ಓಡಾಡುತ್ತಾರೆ. ಅದೇ ರಾತ್ರಿಯಲ್ಲಿ ನೆಲ ಒದ್ದೆಯಾಗಿರುವುದು ಕಾಣುವುದಿಲ್ಲ. ರಾತ್ರಿಯಲ್ಲಿ ಹಾಲು, ಚಹ, ಅನ್ನ, ಇನ್ನೇನಾದರೂ ಚೆಲ್ಲಿದ್ದರೆ ಅದಕ್ಕಾಗಿ ಇಡೀ ಮನೆಯ ನೆಲ ಒರೆಸುವ ಬದಲು ಆ ಸ್ಥಳವನ್ನಷ್ಟೇ ಒರೆಸುವುದು ಬೆಟರ್. ಒರೆಸಿದ ನಂತರ ಬೇಗ ಒಣಗಲು ಫ್ಯಾನ್ ಹಾಕಬಹುದು. ಮಕ್ಕಳಿದ್ದರೆ ಅಲ್ಲಿ ಓಡಾಡದಂತೆ ಎಚ್ಚರಿಸಬೇಕು.
56
ರಾತ್ರಿ ವೇಳೆ ಈ ಕೆಲಸ ಮಾಡಬೇಡಿ!
ರಾತ್ರಿ ವೇಳೆ ಇಡೀ ಮನೆ ನೆಲ ಒರೆಸುವುದು ಒಳ್ಳೆದಲ್ಲ. ನೆಲ ಒರೆಸುವಾಗ ಬಳಸುವ ರಾಸಾಯನಿಕ ಕ್ಲೀನರ್ ಬಳಸುವಾಗ ಮನೆಯಲ್ಲಿ ಸಾಕಾಷ್ಟು ಗಾಳಿಯಾಡುವಂತಿರಬೇಕು. ಇಲ್ಲದಿದ್ರೆ ರಾತ್ರಿಯಿಡೀ ಮನೆಯಲ್ಲಿ ಆ ವಾಸನೆಗೆ ತಲೆ ಚಿಟ್ಟುಹಿಡಿಬಹುದು. ಕೆಲವರಿಗೆ ವಾಸನೆಯಿಂದ ಅಲರ್ಜಿ ಆಗಬಹುದು. ಹಗಲಿನಲ್ಲಾದರೆ ಕಿಟಕಿ ಬಾಗಿಲು ತೆರೆದು ಒರೆಸುವುದರಿಂದ ಗಾಳಿಯಾಡುತ್ತದೆ. ಹಾಗಾಂತ ರಾತ್ರಿಯೂ ನೆಲ ಒರೆಸುವಾಗ ಕಿಟಕಿ ಬಾಗಿಲು ತೆರೆದು ಒರೆಸಿ ಮಲಗುವುದು ಸುರಕ್ಷತೆ ದೃಷ್ಟಿಯಿಂದ ಸರಿಯಲ್ಲ.
66
ರಾತ್ರಿ ವ್ಯಾಕ್ಯೂಮ್ ಕ್ಲೀನರ್ ಬಳಸುವುದು ಬೇಡ
ರಾತ್ರಿಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸುವುದು ಒಳ್ಳೆಯದಲ್ಲ. ವಿಶೇಷವಾಗಿ ಕುಟುಂಬಸ್ಥರು ಮಲಗಿರುವಾಗ. ಅಪಾರ್ಟ್‌ಮೆಂಟ್‌ಗಳು ಅಥವಾ ಪಕ್ಕದ ಮನೆಗಳಲ್ಲಿ, ಶಬ್ದವು ನೆರೆಹೊರೆಯವರಿಗೆ ತೊಂದರೆ ಉಂಟುಮಾಡಬಹುದು. ರಾತ್ರಿಯಲ್ಲಿ ಸಣ್ಣಪುಟ್ಟ ಶುಚಿಗೊಳಿಸುವ ಕೆಲಸಗಳಿಗೆ, ಪೊರಕೆ ಅಥವಾ ಇತರ ನಿಶ್ಯಬ್ದ ಪರ್ಯಾಯಗಳನ್ನು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.