Kitchen Safety: ಅಡುಗೆಮನೆಯಲ್ಲಿ ಈ 6 ವಸ್ತುಗಳಿದ್ರೆ ದೊಡ್ಡ ಅಪಾಯ; ಇಂದೇ ಚೆಕ್ ಮಾಡಿ

Published : Aug 02, 2026, 01:55 PM IST

ನಾವು ಅಡುಗೆಮನೆಯಲ್ಲಿ ಬಳಸುವ ಕೆಲವು ವಸ್ತುಗಳು ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ಬೆಂಕಿ ಅವಘಡಕ್ಕೂ ಕಾರಣವಾಗಬಹುದು. ನಿಮ್ಮ ಅಡುಗೆಮನೆಯಲ್ಲಿ ಈ ಅಪಾಯಕಾರಿ ವಸ್ತುಗಳಿವೆಯೇ ಎಂದು ತಕ್ಷಣ ಪರಿಶೀಲಿಸಿ.

PREV
14
ಅಡುಗೆಮನೆ

ಪ್ರತಿಯೊಂದು ಮನೆಯ ಆರೋಗ್ಯವು ಅದರ ಅಡುಗೆಮನೆಯಲ್ಲೇ ನಿರ್ಧಾರವಾಗುತ್ತದೆ. ಕುಟುಂಬದವರ ಆರೋಗ್ಯವು ಅಡುಗೆಮನೆಯ ಸ್ವಚ್ಛತೆಯಿಂದಲೇ ಆರಂಭವಾಗುತ್ತದೆ. ಆದರೆ, ನಮ್ಮಲ್ಲಿ ಹಲವರು ಹಳೆಯ ಅಭ್ಯಾಸದಿಂದಾಗಿ, ಅವಧಿ ಮೀರಿದ ಮತ್ತು ಅಸುರಕ್ಷಿತ ವಸ್ತುಗಳನ್ನು ಬಳಸುತ್ತಲೇ ಇರುತ್ತೇವೆ. ಇವು ಆಹಾರದ ಗುಣಮಟ್ಟವನ್ನು ಕಡಿಮೆ ಮಾಡುವುದಲ್ಲದೆ, ಆರೋಗ್ಯ ಸಮಸ್ಯೆ ಮತ್ತು ಬೆಂಕಿ ಅವಘಡಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

24
ಪ್ಲಾಸ್ಟಿಕ್, ಹಳೆಯ ಬಟ್ಟೆ

ಬಹಳ ದಿನ ಬಳಸಿದ್ದರಿಂದ ಹಳದಿ ಬಣ್ಣಕ್ಕೆ ತಿರುಗಿದ ಪ್ಲಾಸ್ಟಿಕ್ ಡಬ್ಬಿಗಳು ಹಲವು ಮನೆಗಳಲ್ಲಿವೆ. ಬಿಸಿ ಮತ್ತು ಎಣ್ಣೆ ಮಸಾಲೆಗಳಿಂದಾಗಿ, ಈ ಡಬ್ಬಿಗಳು ಬಿಸಿಯಾದ ಆಹಾರವನ್ನು ಹಾಕಿದಾಗ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು. ಹಾಗಾಗಿ ಪ್ಲಾಸ್ಟಿಕ್‌ ಬದಲು ಗಾಜು ಅಥವಾ ಉತ್ತಮ ಗುಣಮಟ್ಟದ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಉತ್ತಮ. 

ಹಾಗೆಯೇ, ಪಾತ್ರೆ ಒರೆಸುವ ಹಳೆಯ ಬಟ್ಟೆಗಳಲ್ಲಿ ತೇವಾಂಶ ಉಳಿದು, ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ.

34
ಪಾತ್ರೆಗಳು

ಅಡುಗೆಮನೆಯಲ್ಲಿ ಬಳಸುವ ಸೌಟು, ಚಾಕುಗಳಂತಹ ಕಬ್ಬಿಣದ ವಸ್ತುಗಳು ತುಕ್ಕು ಹಿಡಿದಿದ್ದರೆ, ತಕ್ಷಣವೇ ಅವುಗಳನ್ನು ಬದಲಾಯಿಸುವುದು ಅಗತ್ಯ. ತುಕ್ಕು ಆಹಾರದ ರುಚಿ ಮತ್ತು ಗುಣಮಟ್ಟವನ್ನು ಹಾಳುಮಾಡುತ್ತದೆ. ಇದಕ್ಕಿಂತ ಅಪಾಯಕಾರಿ ಎಂದರೆ ಬಿರುಕು ಬಿಟ್ಟ ಗಾಜಿನ ಪಾತ್ರೆಗಳು. ಸಣ್ಣ ಬಿರುಕು ಕೂಡ ಕೈಗೆ ಗಾಯ ಮಾಡಬಹುದು. ಗಾಜಿನ ಚೂರುಗಳು ಆಕಸ್ಮಿಕವಾಗಿ ಆಹಾರದಲ್ಲಿ ಸೇರಿದರೆ ದೊಡ್ಡ ಅನಾಹುತವೇ ಸಂಭವಿಸಬಹುದು.

44
ಅಡುಗೆ ಎಣ್ಣೆ, ಪೇಪರ್ ಟವೆಲ್, ಪ್ಲಾಸ್ಟಿಕ್ ಬ್ಯಾಗ್‌

ಗ್ಯಾಸ್ ಸ್ಟೌವ್ ಬಳಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡುವುದು ತುಂಬಾ ಅಪಾಯಕಾರಿ. ಅಡುಗೆ ಎಣ್ಣೆ, ಪೇಪರ್ ಟವೆಲ್, ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಸ್ಟೌವ್‌ನಿಂದ ಸುರಕ್ಷಿತ ದೂರದಲ್ಲಿಡಿ. ಅಂಗಡಿಗಳಿಂದ ತಂದ ಪ್ಲಾಸ್ಟಿಕ್ ಕವರ್‌ಗಳನ್ನು ಅಡುಗೆಮನೆಯಲ್ಲಿ ರಾಶಿ ಹಾಕಬೇಡಿ. 

ಇವು ಧೂಳು ಮತ್ತು ಸೂಕ್ಷ್ಮಾಣುಗಳನ್ನು ಆಕರ್ಷಿಸುವುದಲ್ಲದೆ, ಬೆಂಕಿ ಅವಘಡಕ್ಕೂ ಕಾರಣವಾಗಬಹುದು. ಅವಧಿ ಮೀರಿದ ಮಸಾಲೆ ಪದಾರ್ಥಗಳು ಮತ್ತು ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗಾಗ ಪರಿಶೀಲಿಸಿ, ಹೊರಹಾಕಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories