Leftover Chapati Dough: ರಾತ್ರಿ ಕಲಿಸಿದ ಹಿಟ್ಟಿನಿಂದ ಮಾಡಿದ ಚಪಾತಿ ಆರೋಗ್ಯಕರವೇ?

Published : Nov 30, 2025, 07:41 AM IST

ಸಮಯ ಉಳಿಸಲು ಅನೇಕರು ಚಪಾತಿ ಹಿಟ್ಟನ್ನು ಮೊದಲೇ ಕಲಸಿ ಫ್ರಿಡ್ಜ್‌ನಲ್ಲಿಡುತ್ತಾರೆ.  ಹಿಟ್ಟನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಅವಧಿಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ಹಿಟ್ಟು

ಇಂದು ಬಹುತೇಕರು ಒಂದೇ ಬಾರಿಗೆ ಹಿಟ್ಟನ್ನು ಹೆಚ್ಚು ಕಲಸಿ, ಮರುದಿನ ಬಳಸುತ್ತಾರೆ. ಹಿಂದಿನ ದಿನದ ಹಿಟ್ಟಿನಿಂದ ರೊಟ್ಟಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಸಮಸ್ಯೆ ಇದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

25
ಚಪಾತಿಗೆ ಹಿಟ್ಟು

ಇಂದು ಯಾರ ಬಳಿಯೂ ಸಮಯ ಇಲ್ಲ. ಅದರಲ್ಲಿಯೂ ದುಡಿಯುವ ಮಹಿಳೆಯರು ಹೇಗೆ ಸಮಯ ಉಳಿಸಬೇಕು ಮತ್ತು ಕಡಿಮೆ ಸಮಯದಲ್ಲಿ ಯಾವ ರೀತಿ ಅಡುಗೆ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಕೆಲವರಂತೂ ರಾತ್ರಿಯೇ ಚಪಾತಿಗೆ ಹಿಟ್ಟು ಕಲಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುತ್ತಾರೆ. ನಂತರ ಬೆಳಗ್ಗೆ ಚಪಾತಿ ಮಾಡುತ್ತಾರೆ.

35
ಚಪಾತಿ

ಇನ್ನು ಕೆಲವರು ಒಂದೇ ಬಾರಿಗೆ ಎರಡ್ಮೂರು ದಿನಕ್ಕಾಗುವಷ್ಟು ಹಿಟ್ಟು ಕಲಿಸುತ್ತಾರೆ. ಈ ರೀತಿ ಸ್ಟೋರ್ ಮಾಡಿರುವ ಹಿಟ್ಟು ಬಳಸಿ ತಯಾರಿಸಿರುವ ಚಪಾತಿ ತಿನ್ನೋದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ

45
ಬ್ಯಾಕ್ಟೀರಿಯಾ

ಹಿಟ್ಟು ತೇವಾಂಶದಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಇದರಿಂದ ಹಿಟ್ಟು ಹುಳಿಯಾಗಿ, ರುಚಿ ಬದಲಾಗುತ್ತದೆ. ಹೊರಗಿಟ್ಟ ಹಿಟ್ಟಿನಿಂದ ರೊಟ್ಟಿ ಮಾಡಿದರೆ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ತನ್ನನ್ನೇ ತಾನು ತಿಂದ್ರೆ ಈ ತರಕಾರಿಗಳ ರಿಯಾಕ್ಷನ್​ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂಟ್​​ ವಿಡಿಯೋ ವೈರಲ್​

55
ಚಪಾತಿ ಸಾಫ್ಟ್

ಹಿಟ್ಟು ತಾಜಾವಾಗಿರಲು, ಅದನ್ನು ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಜ್‌ನಲ್ಲಿಡಿ. ಹೊರಗೆ 12 ಗಂಟೆಗಳಿಗಿಂತ ಹೆಚ್ಚು ಮತ್ತು ಫ್ರಿಜ್‌ನಲ್ಲಿ 48 ಗಂಟೆಗಳಿಗಿಂತ ಹೆಚ್ಚು ಇಡಬೇಡಿ. ರೊಟ್ಟಿ ಮಾಡುವ 30 ನಿಮಿಷ ಮೊದಲು ಹೊರತೆಗೆಯಿರಿ. ಇದರಿಂದ ಚಪಾತಿ ಸಾಫ್ಟ್ ಆಗುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಗಟ್ಟಿ ಮೊಸರು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್‌

Read more Photos on
click me!

Recommended Stories