Cooker Cleaning Tips: ಈ ವಿಧಾನ ಅನುಸರಿಸುವ ಮೂಲಕ ಕುಕ್ಕರ್‌ನಿಂದ ಕಪ್ಪು ಕಲೆಯನ್ನ ಸಂಪೂರ್ಣವಾಗಿ ತೆಗೆದುಹಾಕಿ ಅದನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು. ಲಾಂಗ್ ಟೈಂ ಉಪಯೋಗಿಸಬಹುದು. ಇದಕ್ಕೆ ರಾಸಾಯನಿಕಗಳ ಅಗತ್ಯವಿಲ್ಲ. ಸಾಮಾನ್ಯ ಮನೆಯ ಪದಾರ್ಥಗಳೇ ಸಾಕು. ವಿಡಿಯೋ ಸಮೇತ ಮಾಹಿತಿಗಾಗಿ ಮುಂದೆ ಓದಿ…
ಅಡುಗೆ ಉಪಕರಣಗಳ ನಿರ್ವಹಣೆ ಯಾವಾಗಲೂ ಮನೆಯ ಆರೈಕೆಯ ಪ್ರಮುಖ ಭಾಗವಾಗಿದೆ. ವಿಶೇಷವಾಗಿ ಸ್ಟೌವ್ ಮೇಲೆ ನಿಯಮಿತವಾಗಿ ಬಳಸಲಾಗುವ ಸುಂದರವಾದ ಕುಕ್ಕರ್‌ಗಳು ಕೆಲವೊಮ್ಮೆ ಕಪ್ಪು ಕಲೆಯಿಂದಾಗಿ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಆದರೆ ಅದನ್ನು ಮಾಮೂಲಿ ಸೋಪ್ ಅಥವಾ ಲಿಕ್ವಿಡ್ ಬಳಸಿ ತೆಗೆದುಹಾಕಲು ಸಾಧ್ಯವಾಗಲ್ಲ. ಹಾಗೆಂದು ನೀವು ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ. ಸಾಮಾನ್ಯ ಗೃಹೋಪಯೋಗಿ ಪದಾರ್ಥದೊಂದಿಗೆ ನಿಮ್ಮ ಕುಕ್ಕರ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.
26
ಕ್ಲೀನ್ ಮಾಡಲು ಬೇಕಾಗುವ ಪದಾರ್ಥ
ಉಪ್ಪು ಬೇಕಿಂಗ್ ಸೋಡಾ ವಿನೆಗರ್ (ಅಗತ್ಯವಿದ್ದಲ್ಲಿ)
36
ರಫ್ ಸ್ಪಾಂಜ್ ಬಳಸಿ
ವಿಡಿಯೋದಲ್ಲಿ ತೋರಿಸಿರುವಂತೆ ಕಲೆಯಾದ ಭಾಗದಲ್ಲಿ ಮೊದಲು ಸ್ವಲ್ಪ ಉಪ್ಪು ಸುರಿಯಿರಿ. ನಂತರ ಅಡುಗೆ ಸೋಡಾ ಹಾಕಿ. ಈಗ ಮೇಲೆ ನೀರು ಸಿಂಪಡಿಸಿ ಸ್ಟೀಲ್ ಸ್ಕ್ರಬ್ಬರ್ ನಂತಹ ಯಾವುದೇ ರಫ್ ಸ್ಪಾಂಜ್ ಬಳಸಿ ಚೆನ್ನಾಗಿ ಉಜ್ಜಿ. ಬೇಕಾದಲ್ಲಿ ನೀವು ನೀರಿನ ಬದಲು ಸ್ವಲ್ಪ ವಿನೆಗರ್ ಸೇರಿಸಬಹುದು. ವಿನೆಗರ್ ಸೇರಿಸಿದ ನಂತರ ಮೇಲೆ ಸ್ವಲ್ಪ ಗುಳ್ಳೆ ಬರುತ್ತದೆ. ಆ ಸಮಯದಲ್ಲಿ ಸ್ವಲ್ಪ ಎಚ್ಚರದಿಂದ ಉಜ್ಜಿ.
46
ಸಾಮಾನ್ಯ ಮನೆಯ ಪದಾರ್ಥಗಳು ಸಾಕು
ಈ ವಿಧಾನ ಅನುಸರಿಸುವ ಮೂಲಕ ನೀವು ಕುಕ್ಕರ್‌ನಿಂದ ಕಪ್ಪು ಕಲೆಯನ್ನ ಸಂಪೂರ್ಣವಾಗಿ ತೆಗೆದುಹಾಕಬಹುದು. ಅದನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು. ಇದಕ್ಕೆ ರಾಸಾಯನಿಕಗಳ ಅಗತ್ಯವಿಲ್ಲ. ಸಾಮಾನ್ಯ ಮನೆಯ ಪದಾರ್ಥಗಳು ಸಾಕು.
56
ಸೂಚನೆ
ವಿನೆಗರ್ ಮತ್ತು ಅಡುಗೆ ಸೋಡಾವನ್ನು ಸೇರಿಸುವಾಗ ಜಾಗರೂಕರಾಗಿರಿ. ಏಕೆಂದರೆ ಅವು ಗುಳ್ಳೆಗಳಾಗಿ ಸಿಡಿಯುತ್ತವೆ. ಈ ವಿಧಾನವನ್ನು ನಿರಂತರವಾಗಿ ಬಳಸುವುದರಿಂದ ಕುಕ್ಕರ್ ದೀರ್ಘಕಾಲದವರೆಗೆ ಹೊಸದಾಗಿ ಉಳಿಯುತ್ತದೆ.
66
ಇಲ್ಲಿದೆ ನೋಡಿ ವಿಡಿಯೋ
ಈ ಸರಳ ಮನೆ ಅಭ್ಯಾಸವನ್ನು ಅನುಸರಿಸುವ ಮೂಲಕ ನೀವು ನಿಮ್ಮ ಅಡುಗೆ ಸಲಕರಣೆಗಳನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಸ್ವಚ್ಛವಾಗಿಡಬಹುದು.