ಪಾಲಕ್, ಮೆಂತ್ಯ ಸೇರಿದಂತೆ ಹಸಿರು ಸೊಪ್ಪನ್ನ ಕ್ಲೀನ್ ಮಾಡುವ ಟಿಪ್ಸ್, ಒಂಚೂರು ಕಲ್ಲು ಮಣ್ಣು ಸಿಗಲ್ಲ

Published : Dec 02, 2025, 06:36 PM IST

Wash green leafy vegetables: ಸೊಪ್ಪನ್ನು ಇಷ್ಟಪಡುವವರರಂತೂ ಪ್ರತಿದಿನ ಬೇಯಿಸಿ ತಿಂತಾರೆ. ಆದರೆ ಸೊಪ್ಪಿನ ಒಂದು ಸಮಸ್ಯೆ ಎಂದರೆ ಅವುಗಳನ್ನು ಕತ್ತರಿಸಿ ತೊಳೆಯುವುದು. ಏಕೆಂದರೆ ಅವು ಅಂಟಿಕೊಂಡಿರುತ್ತವೆ ಅಥವಾ ಅದರಲ್ಲಿ ಕೀಟಗಳಿರುತ್ತವೆ.  

PREV
16
ಪೌಷ್ಟಿಕ, ಆರೋಗ್ಯಕರ ಮತ್ತು ರುಚಿಕರ

ಚಳಿಗಾಲದಲ್ಲಿ ತರಕಾರಿ ಮಾರುಕಟ್ಟೆಯು ಹಸಿರು ಎಲೆಗಳ ಸೊಪ್ಪಿನಿಂದ ತುಂಬಿ ತುಳುಕುತ್ತಿರುತ್ತದೆ. ಹಾಗಾಗಿ ವಿವಿಧ ರೀತಿಯ ಸೊಪ್ಪುಗಳು ಬಹಳ ಬೇಗ ಮಾರಾಟವಾಗುತ್ತವೆ. ತಾಜಾ ಪಾಲಕ್, ಬತುವಾ, ಮೆಂತ್ಯ, ಸಾಸಿವೆ, ನುಗ್ಗೆಕಾಯಿ ಮತ್ತು ಇತರ ಅನೇಕ ಸೊಪ್ಪುಗಳು ಲಭ್ಯ ಇರುತ್ತವೆ. ಇವೆಲ್ಲ ತುಂಬಾ ಪೌಷ್ಟಿಕ, ಆರೋಗ್ಯಕರ ಮತ್ತು ರುಚಿಕರ.

26
ತಿಳಿದಿರಬೇಕು ಸರಿಯಾದ ವಿಧಾನ

ಸೊಪ್ಪನ್ನು ಇಷ್ಟಪಡುವವರರಂತೂ ಪ್ರತಿದಿನ ಬೇಯಿಸಿ ತಿಂತಾರೆ. ಆದರೆ ಸೊಪ್ಪಿನ ಒಂದು ಸಮಸ್ಯೆ ಎಂದರೆ ಅವುಗಳನ್ನು ಕತ್ತರಿಸಿ ತೊಳೆಯುವುದು. ಏಕೆಂದರೆ ಅವು ಅಂಟಿಕೊಂಡಿರುತ್ತವೆ ಅಥವಾ ಅದರಲ್ಲಿ ಕೀಟಗಳಿರುತ್ತವೆ. ಆದ್ದರಿಂದ ಅವುಗಳನ್ನು ನೀರಿನಲ್ಲಿ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮಣ್ಣು ತಿಂದ ತರ ಅನುಭವಿಸಬಹುದು. ಆದರೆ ಈ ಸೊಪ್ಪನ್ನು ತೊಳೆಯಲು ಆತುರಪಡಬೇಡಿ. ಅವುಗಳನ್ನು ಒಮ್ಮೆ ಅಥವಾ ಎರಡು ಬಾರಿ ತೊಳೆಯುವುದು ಸಾಕಾಗುವುದಿಲ್ಲ. ಸರಿಯಾದ ವಿಧಾನವನ್ನು ತಿಳಿದಿರಬೇಕು.

36
ತೊಳೆಯುವುದು ಹೇಗೆ?

ಮಾಸ್ಟರ್ ಶೆಫ್ ಪಂಕಜ್ ಭದೌರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೊಪ್ಪನ್ನು ತೊಳೆಯುವ ಸರಿಯಾದ ವಿಧಾನವನ್ನು ವಿವರಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾದರೆ ಬನ್ನಿ ಪಾಲಕ್, ಸಾಸಿವೆ, ಬತುವಾ ಅಥವಾ ಯಾವುದೇ ಇತರ ಸೊಪ್ಪನ್ನು ಕತ್ತರಿಸಿ ಬೇಯಿಸುವ ಮೊದಲು ಅವುಗಳನ್ನು ಹೇಗೆ ತೊಳೆಯುವುದು ಎಂದು ನೋಡೋಣ..

46
ಸ್ವಚ್ಛಗೊಳಿಸುವ ವಿಧಾನ

ನೀವು ಪಾಲಕ್, ಸಾಸಿವೆ, ಬತುವಾ ಅಥವಾ ಯಾವುದೇ ಇತರ ಸೊಪ್ಪನ್ನು ಖರೀದಿಸಿದ್ದರೆ ಮತ್ತು ಅದರಲ್ಲಿ ಬಹಳಷ್ಟು ಕೊಳಕು ಇದ್ದರೆ ಅದನ್ನು ಒಂದು ಅಥವಾ ಎರಡು ಬಾರಿ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪು ಇದ್ದರೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ. ಈ ಪಾತ್ರೆಯನ್ನ ನೀರಿನಿಂದ ತುಂಬಿಸಿ.

56
ಕೈಗಳಿಂದ ಹಿಡಿದು ಮೇಲಕ್ಕೆತ್ತಿ

ಈ ಸೊಪ್ಪನ್ನ ತೊಳೆಯಲು ಸರಿಯಾದ ಮಾರ್ಗವೆಂದರೆ ಅವುಗಳನ್ನು ನೀರಿನಿಂದ ತುಂಬಿದ ಬಟ್ಟಲಿನಲ್ಲಿ ಮುಳುಗಿಸಿಡುವುದು. ನಂತರ ಸೊಪ್ಪನ್ನು ನಿಮ್ಮ ಕೈಗಳಿಂದ ಹಿಡಿದು ಮೇಲಕ್ಕೆತ್ತಿ (ವಿಡಿಯೋದಲ್ಲಿ ತೋರಿಸಿರುವ ಹಾಗೆ) ಈಗ ಪಾತ್ರೆಯ ನೀರನ್ನು ಸುರಿಯಿರಿ. ಅದರಲ್ಲಿ ಶುದ್ಧ ನೀರನ್ನು ಸೇರಿಸಿ, ಮತ್ತೆ ಸೊಪ್ಪನ್ನು ನೀರಿನಲ್ಲಿ ಅದ್ದಿ. 

66
ಬಟ್ಟಲಿನಲ್ಲಿರುವಾಗಲೇ ಸುರಿಯದಿರಿ

ಅಂದರೆ ಎಲೆಗಳು ಬಟ್ಟಲಿನಲ್ಲಿರುವಾಗಲೇ ಎಂದಿಗೂ ನೀರನ್ನು ಸುರಿಯಬೇಡಿ. ನೀವು ಸೊಪ್ಪನ್ನು ನೇರವಾಗಿ ನಿಮ್ಮ ಕೈಗಳಿಂದ ಎತ್ತಿದಾಗ ಕೊಳಕು ಮತ್ತು ಧೂಳು ನೀರಿನ ಮೇಲ್ಮೈಯಲ್ಲಿ ಉಳಿಯುತ್ತದೆ. ಸೊಪ್ಪುಗಳು ಬಟ್ಟಲಿನಲ್ಲಿರುವಾಗಲೇ ನೀವು ನೀರನ್ನು ಸುರಿದರೆ ಕೊಳಕು ಮತ್ತೆ ಎಲೆಗಳಿಗೆ ಅಂಟಿಕೊಳ್ಳಬಹುದು. ಆದ್ದರಿಂದ ಮುಂದಿನ ಬಾರಿ ಸೊಪ್ಪನ್ನ ತೊಳೆಯುವಾಗ ಈ ವಿಡಿಯೋ ನಿಮಗೆ ಸಹಕಾರಿಯಾಗಬಹುದು. 

Read more Photos on
click me!

Recommended Stories