ಕುಕ್ಕರ್ ಶಿಳ್ಳೆ ಹೊಡೆಯಲ್ವಾ, ಮಸಿ ಬಟ್ಟೆ ಕ್ಲೀನ್ ಆಗ್ತಿಲ್ವಾ?.. ಇಲ್ಲಿವೆ ಟಾಪ್ 5 Kitchen and Home tips

Published : Dec 02, 2025, 04:50 PM IST

Money saving kitchen tips: ಕಡಿಮೆ ವೆಚ್ಚದಲ್ಲಿ ಮನೆಕೆಲಸಗಳು ಸುಲಭವಾಗುವಂತೆ ಪರಿಣಾಮಕಾರಿ ಸಲಹೆಗಳನ್ನು ಇಂದು ಹಂಚಿಕೊಳ್ಳುತ್ತಿದ್ದೇವೆ. ಈ ಐದು ಟಿಪ್ಸ್ ಅನುಸರಿಸುವುದರಿಂದ ನಿಮ್ಮ ಅಡುಗೆಮನೆ ಮತ್ತು ಇಡೀ ಮನೆಯನ್ನು ಸ್ವಚ್ಛವಾಗಿಡಬಹುದು ಮತ್ತು ಹಣ ಉಳಿತಾಯ ಮಾಡಬಹುದು.

PREV
15
ಟಿಪ್ಸ್ 1: ಕುಕ್ಕರ್ ಶಿಳ್ಳೆ ಬರದಿದ್ದಾಗ

ಕುಕ್ಕರ್ ಬಳಸುವಾಗ ಶಿಳ್ಳೆ ಹೊಡೆಯುವ ಜಾಗವನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ. ಶಿಳ್ಳೆ ಹೊಡೆಯುವ ಸಣ್ಣ ಜಾಗಗಳಲ್ಲಿ ಸಿಲುಕಿರುವ ಧೂಳು ಮತ್ತು ಕೊಳೆಯನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಆದ್ದರಿಂದ  ಲೇಖನದ ಕೊನೆಯಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ತೋರಿಸುವ ಹಾಗೆ ನೀವು ಸೂಜಿ ಮತ್ತು ದಾರವನ್ನು ವಿಶಲ್ ಮುಚ್ಚುವ ಜಾಗದಲ್ಲಿ ಬಳಸಬಹುದು. ಆ ನಂತರ ನೀವು ಊದಿ ಆ ಪ್ರದೇಶಗಳಿಂದ ದಾರವನ್ನು ಸರಿಸಿದರೆ ಸ್ವಚ್ಛವಾಗಿರುತ್ತೆ. 

25
ಟಿಪ್ಸ್ 2: ಎಣ್ಣೆ ಮರುಬಳಕೆ ಮಾಡಿ

ಎಣ್ಣೆಯಲ್ಲಿ ಕೆಲವು ಪದಾರ್ಥ ಫ್ರೈ ಮಾಡಿದ ನಂತರ ಅದರಲ್ಲಿ ಕರಿದ ತುಣುಕುಗಳು ಹಾಗೆಯೇ ಉಳಿದುಬಿಡುತ್ತವೆ. ಜಾಲರಿ ತೆಗೆದುಕೊಂಡು ಸೋಸಿದರೂ ಏನು ಪ್ರಯೋಜನವಾಗುವುದಿಲ್ಲ. ಆಗ ನೀವು ಅದನ್ನು ಕೊಳಕೆಂದು ಎಸೆಯಬೇಕಾಗಿಲ್ಲ. ಅದೇ ಎಣ್ಣೆಯನ್ನು ದೋಸೆ, ಚಪಾತಿ ಅಥವಾ ತಡ್ಕಾ ತಯಾರಿಸಲು ಬಳಸಬಹುದು. ಹೇಗೆಂದರೆ ಜಾಲರಿಯಲ್ಲಿ ನೇರವಾಗಿ ಸೋಸದೆ ಅದರ ಮೇಲೆ ನೀವು ಬಟ್ಟೆ ಅಥವಾ ಹತ್ತಿ ಇರಿಸಿ ನಂತರ ಅದರ ಮೇಲೆ ಸೋಸಿದರೆ ಎಣ್ಣೆ ಬಸಿದು ಅದರಲ್ಲಿರುವ ಧೂಳು ಮತ್ತು ಸಣ್ಣ ಕಲ್ಮಶಗಳು ಬೇರ್ಪಡುತ್ತವೆ.

35
ಟಿಪ್ಸ್ 3: ಮಸಿ ಬಟ್ಟೆ ಸ್ವಚ್ಛಗೊಳಿಸುವುದು ಹೇಗೆ

ಒಂದು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ 
ಅರ್ಧ ಚಮಚ ಅಡುಗೆ ಸೋಡಾ
ಒಂದು ಕಪ್ ಬಿಸಿ ನೀರು

ಈ ಪದಾರ್ಥಗಳನ್ನು ಬೆರೆಸಿ ಇದರಲ್ಲಿ ಬಟ್ಟೆಯನ್ನು 5 ನಿಮಿಷಗಳ ಕಾಲ ನೆನೆಸಿ. ನಂತರ ಚೆನ್ನಾಗಿ ತೊಳೆದರೆ ಬಟ್ಟೆಗಳು ಹೊಸದರಂತೆ ಹೊಳೆಯುತ್ತವೆ.

45
ಟಿಪ್ಸ್ 4: ಕ್ಲೀನಿಂಗ್ ಲಿಕ್ವಿಡ್

ಗಾಜು ಮತ್ತು ಸ್ಟೌವ್‌ಟಾಪ್‌ ಸ್ವಚ್ಛಗೊಳಿಸಲು ನೀವು ಮಾರುಕಟ್ಟೆಯಲ್ಲಿ ಸ್ಟ್ರಾಂಗ್ ಲಿಕ್ವಿಡ್ ಹುಡುಕುತ್ತಿದ್ದರೆ ಅದೆಲ್ಲಾ ಏನು ಬೇಡ. ಇದಕ್ಕಾಗಿ ನಿಮಗೆ ಬೇಕಾಗಿರುವುದು..

ಶಾಂಪೂ ಪ್ಯಾಕೆಟ್
ಒಂದು ಲೋಟ ನೀರು
ವಿನೆಗರ್

ನೀವು ಇದನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಬೆರೆಸಿ ಬಳಸಿದರೆ ನಿಮ್ಮ ಕನ್ನಡಿ, ಒಲೆ ಮತ್ತು ಇಡೀ ಮನೆಯನ್ನು ಸ್ವಚ್ಛಗೊಳಿಸಬಹುದು. ನೀವು ಹೀಗೆ ಮಾಡಿದರೆ ದುಬಾರಿ ದ್ರವಗಳನ್ನು ಖರೀದಿಸುವ ಅಗತ್ಯವಿಲ್ಲ.

55
ಟಿಪ್ಸ್ 5 ಸೂಜಿಯಲ್ಲಿ ದಾರ ಹಾಕಲು ಸುಲಭವಾದ ಮಾರ್ಗ

ತೆಂಗಿನಕಾಯಿ ನಾರು ತೆಗೆದುಕೊಳ್ಳಿ.
ಬಡ್ಸ್ ಎರಡೂ ತುದಿಗಳನ್ನು ಕತ್ತರಿಸಿ.
ನಾರನ್ನು ಇದರಲ್ಲಿ ಪೋಣಿಸಿ. ನಂತರ ವಿಡಿಯೋದಲ್ಲಿ ತೋರಿಸಿರುವ ಹಾಗೆ ಮಾಡಿ. ಇದು ಸೂಜಿ ದಾರ ಪೋಣಿಸಲು ಸುಲಭಗೊಳಿಸುತ್ತದೆ.

ಇವುಗಳೆಲ್ಲವೂ ನಿಮ್ಮ ಅಡುಗೆಮನೆ ಮತ್ತು ಮನೆಯನ್ನು ಹೆಚ್ಚು ಶ್ರಮವಿಲ್ಲದೆ ಸ್ವಚ್ಛವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಕ್ಲೀನ್ ಮಾಡುವ ಬುದ್ಧಿವಂತ ಮಾರ್ಗಗಳಾಗಿವೆ.

ಇಲ್ಲಿದೆ ನೋಡಿ ವಿಡಿಯೋ 

Read more Photos on
click me!

Recommended Stories