Ginger Garlic Paste:‌ ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?

Published : Apr 26, 2026, 02:50 PM IST

Ginger Garlic Paste: ಅಡುಗೆಯಲ್ಲಿ ಪ್ರತಿದಿನ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇಬೇಕು. ಆದರೆ ಪ್ರತಿ ಬಾರಿಯೂ ಶುಂಠಿ ಸಿಪ್ಪೆ ತೆಗೆಯೋದು, ಬೆಳ್ಳುಳ್ಳಿ ಸುಲಿಯೋದು ದೊಡ್ಡ ಕೆಲಸ. ಹಾಗಾಗಿ ಹೆಚ್ಚಿನವರು ಪೇಸ್ಟ್ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳುಗಟ್ಟಲೆ ತಾಜಾ ಆಗಿಡಲು ಹೀಗೆ ಮಾಡಿ. 

PREV
15
ರಾಸಾಯನಿಕ ಒಳ್ಳೆಯದಲ್ಲ

ಯಾವುದೇ ಅಡುಗೆ ಇರಲಿ, ಅದು ಘಮಘಮಿಸಬೇಕು, ಒಳ್ಳೆ ರುಚಿ ಬರಬೇಕು ಅಂದ್ರೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇರಲೇಬೇಕು. ಆದರೆ ಪ್ರತಿದಿನ ಇದನ್ನು ರೆಡಿ ಮಾಡೋದು ಕಿರಿಕಿರಿ ಎನಿಸಬಹುದು. ಇದೇ ಕಾರಣಕ್ಕೆ ಹಲವರು ಸೂಪರ್‌ಮಾರ್ಕೆಟ್‌ಗಳಲ್ಲಿ ಸಿಗುವ ಪ್ಯಾಕೆಟ್‌ಗಳ ಮೇಲೆ ಅವಲಂಬಿತರಾಗುತ್ತಾರೆ. ಆದರೆ, ಇವುಗಳಲ್ಲಿ ಬಳಸುವ ರಾಸಾಯನಿಕಗಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

25
ತಿಂಗಳುಗಟ್ಟಲೇ ತಾಜಾ ಆಗಿರುತ್ತೆ

ಹಾಗಾದ್ರೆ, ಮನೆಯಲ್ಲೇ ಮಾಡಿದರೂ ತಿಂಗಳುಗಟ್ಟಲೆ ತಾಜಾ ಆಗಿರುವಂತೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುವುದು ಹೇಗೆ ಗೊತ್ತಾ? ಈ ಚಿಕ್ಕ ಟಿಪ್ಸ್ ಪಾಲಿಸಿದರೆ ಸಾಕು, ನಿಮ್ಮ ಅಡುಗೆ ಕೆಲಸ ಸುಲಭವಾಗುವುದಲ್ಲದೆ, ಅಡುಗೆಯ ರುಚಿಯೂ ಅದ್ಭುತವಾಗಿರುತ್ತದೆ.

35
ಏನು ಮಾಡಬೇಕು?

ಶುಂಠಿಯನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಬೆಳ್ಳುಳ್ಳಿ ಎಸಳುಗಳನ್ನು ಸುಲಿಯಿರಿ. ಎರಡನ್ನೂ ತೇವಾಂಶವಿಲ್ಲದಂತೆ ಒಣಗಿಸಿ. ಎರಡನ್ನೂ ಸಮಾನ ಪ್ರಮಾಣದಲ್ಲಿ ಅಥವಾ ನಿಮ್ಮ ರುಚಿಗೆ ತಕ್ಕಂತೆ ತೆಗೆದುಕೊಳ್ಳಿ. ಶುಂಠಿ, ಬೆಳ್ಳುಳ್ಳಿ ತುಂಡುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ. ಇಲ್ಲಿಯೇ ಅಸಲಿ ಮ್ಯಾಜಿಕ್ ಇರುವುದು. ಪೇಸ್ಟ್ ಮಾಡುವಾಗ ನೀರಿಗೆ ಬದಲಾಗಿ ಎರಡು ಚಮಚ ಎಣ್ಣೆ, ಅರ್ಧ ಚಮಚ ಅರಿಶಿನ ಮತ್ತು ತಕ್ಕಷ್ಟು ಉಪ್ಪು ಸೇರಿಸಿ. ನುಣ್ಣಗೆ ರುಬ್ಬಿಕೊಳ್ಳಿ. ನೀರನ್ನು ಸ್ವಲ್ಪವೂ ಸೇರಿಸಬಾರದು.

45
ಪೇಸ್ಟ್‌ ಕಪ್ಪಾಗೋದಿಲ್ಲ

ಎಣ್ಣೆಯು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಮೃದುವಾಗಿ ಇಡುತ್ತದೆ ಮತ್ತು ಹಾಳಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಪೇಸ್ಟ್ ಕಪ್ಪಾಗುವುದಿಲ್ಲ. ಉಪ್ಪು ಮತ್ತು ಅರಿಶಿನವು ಪ್ರಿಸರ್ವೇಟಿವ್‌ಗಳಂತೆ ಕೆಲಸ ಮಾಡಿ, ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತವೆ.

55
ಗಾಜಿನ ಬಾಟಲಿಯಲ್ಲಿ ಇಡಿ!

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಪ್ಲಾಸ್ಟಿಕ್ ಡಬ್ಬಿಗಳಿಗಿಂತ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸುವುದು ಉತ್ತಮ. ಪೇಸ್ಟ್ ತೆಗೆಯುವಾಗ ಯಾವಾಗಲೂ ಒಣ ಚಮಚವನ್ನೇ ಬಳಸಿ. ಈ ಪೇಸ್ಟ್ ಅನ್ನು ಫ್ರಿಜ್‌ನಲ್ಲಿಟ್ಟರೆ ಒಂದು ತಿಂಗಳವರೆಗೆ, ಫ್ರೀಜರ್‌ನಲ್ಲಿಟ್ಟರೆ ಮೂರು ತಿಂಗಳವರೆಗೆ ಆಗತಾನೇ ರುಬ್ಬಿದಷ್ಟು ತಾಜಾ ಆಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories