ಲಿಂಬೆ ಹಣ್ಣು ಫ್ರಿಜ್​ನಲ್ಲಿ ಇಟ್ರೂ ಡ್ರೈ ಆಗತ್ತಾ? ಈ ಟಿಪ್ಸ್​ ಫಾಲೋ ಮಾಡಿ ತಿಂಗಳುಗಟ್ಟಲೆ ರಸಭರಿತವಾಗಿ ಫ್ರೆಷ್​ ಆಗಿರಿಸಿ

Published : May 11, 2026, 10:01 PM IST

ಬೇಸಿಗೆಯಲ್ಲಿ ದುಬಾರಿಯಾಗುವ ಲಿಂಬೆ ಹಣ್ಣುಗಳನ್ನು ಖರೀದಿಸಿದ ನಂತರ ಅವುಗಳನ್ನು ತಾಜಾವಾಗಿಡುವುದು ಒಂದು ಸವಾಲು. ಅಡುಗೆ ಎಣ್ಣೆಯನ್ನು ಸವರಿ, ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಜ್‌ನಲ್ಲಿ ಇರಿಸುವುದರಿಂದ ಲಿಂಬೆ ಹಣ್ಣುಗಳನ್ನು ತಿಂಗಳುಗಟ್ಟಲೆ ತಾಜಾ ಹಾಗೂ ರಸಭರಿತವಾಗಿ ಸಂಗ್ರಹಿಸಬಹುದು.

PREV
15
ಸಿಕ್ಕಾಪಟ್ಟೆ ಡಿಮಾಂಡ್​

ಬೇಸಿಗೆ ಕಾಲದಲ್ಲಿ ಲಿಂಬೆ ಹಣ್ಣಿಗೆ ಸಿಕ್ಕಾಪಟ್ಟೆ ಡಿಮಾಂಡ್​ ಇದದ್ದೇ. ಅದೇ ಕಾರಣಕ್ಕೆ ಲಿಂಬೆ ಹಣ್ಣು ಅಷ್ಟೇ ದುಬಾರಿ ಕೂಡ. ಎಲ್ಲಿಯೋ ಸ್ವಲ್ಪ ಕಮ್ಮಿ ಬೆಲೆಗೆ ಹಣ್ಣು ಸಿಕ್ಕಾಗ ತಂದುಕೊಂಡರೆ ಅದನ್ನು ಫ್ರೆಷ್​ ಆಗಿ ಇಟ್ಟುಕೊಳ್ಳುವುದೇ ದೊಡ್ಡ ಸವಾಲು.

25
ಫ್ರಿಜ್​ನಲ್ಲಿ ಇಟ್ಟರೂ ಡ್ರೈ

ಹೊರಗಡೆ ಇಟ್ಟರಂತೂ ಡ್ರೈ ಆಗಿಬಿಡುತ್ತದೆ. ಹಾಗೆಂದು ಫ್ರಿಜ್​ನಲ್ಲಿ ಇಟ್ಟರೂ ಡ್ರೈ ಆಗುತ್ತೆ. ಕಂಟೇನರ್​ನಲ್ಲಿ, ಪ್ಲಾಸ್ಟಿಕ್​ನಲ್ಲಿ ಹೇಗೆಯೇ ಇಟ್ಟರೂ ಒಣಗಿ ಹೋಗುವುದಂತೂ ಖಂಡಿತ. ಇಲ್ಲವೇ ಕೆಲವೇ ದಿನಗಳಲ್ಲಿ ಡ್ರೈ ಆಗುತ್ತದೆ.

35
ಫ್ರೆಷ್​ ಆಗಿ ಇಡುವುದು ಹೀಗೆ

ಹಾಗಿದ್ದರೆ ಲಿಂಬೆ ಹಣ್ಣನ್ನು ತಿಂಗಳುಗಟ್ಟಲೆ ಫ್ರೆಷ್​ ಆಗಿ ಇರಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯೇ, ಅದಕ್ಕೊಂದು ಸೂಪರ್​ ಟಿಪ್ಸ್​ ಇಲ್ಲಿದೆ.

45
ಅಡುಗೆ ಎಣ್ಣೆ ಸವರಿ

ಲಿಂಬೆ ಹಣ್ಣನ್ನು ಚೆನ್ನಾಗಿ ತೊಳೆದು ಒರೆಸಿ. ಬಳಿಕ ಲಿಂಬೆಹಣ್ಣಿಗೆ ಯಾವುದೇ ಅಡುಗೆ ಎಣ್ಣೆಯನ್ನು ಸ್ವಲ್ಪ ಸವರಿ ಇಡಿ. ಇದು ತೇವಾಂಶವನ್ನು ಲಾಕ್ ಮಾಡುವ ನೈಸರ್ಗಿಕ ತಡೆಗೋಡೆ ಸೃಷ್ಟಿಯಾಗುತ್ತದೆ ಮತ್ತು ಹಾಳಾಗುವುದನ್ನು ನಿಧಾನಗೊಳಿಸುತ್ತದೆ.

55
ಕಂಟೇನರ್​ನಲ್ಲಿ ಇಡಿ

ಹೀಗೆ ಮಾಡಿ ಲಿಂಬೆಹಣ್ಣನ್ನು ಏರ್​ಟೈಟ್​ ಕಂಟೇನರ್​ನಲ್ಲಿ ಫ್ರಿಜ್​ನಲ್ಲಿ ಇಟ್ಟರೆ ಮುಗಿಯಿತು. ತಿಂಗಳಾದರೂ ಕೆಡುವುದೇ ಇಲ್ಲ, ಮಾತ್ರವಲ್ಲದೇ ಲಿಂಬೆ ಹಣ್ಣು ರಸಭರಿತವಾಗಿಯೂ ಇರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories