How to clean induction cooktop: ಆಧುನಿಕ ಅಡುಗೆಮನೆಗಳಲ್ಲಿ ಇಂಡಕ್ಷನ್ ಕುಕ್‌ಟಾಪ್ ಬಳಕೆ ಸಾಮಾನ್ಯ. ಹಾಗಾದ್ರೆ ಇಂಡಕ್ಷನ್ ಹಾಳಾಗದಂತೆ ಸುರಕ್ಷಿತವಾಗಿ ಸ್ವಚ್ಛಗೊಳಿಸುವ ಆ ಸರಿಯಾದ ವಿಧಾನ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮುನ್ನೆಚ್ಚರಿಕೆಗಳು ಮತ್ತು ಸರಿಯಾದ ವಿಧಾನ ಇಂದಿನ ಆಧುನಿಕ ಅಡುಗೆಮನೆಗಳಲ್ಲಿ ಇಂಡಕ್ಷನ್ ಸ್ಟವ್‌ಗಳು (Induction Cooktop) ಅತ್ಯಂತ ಜನಪ್ರಿಯವಾಗಿವೆ. ಸಮಯ ಉಳಿತಾಯ ಹಾಗೂ ಸರಳ ಅಡುಗೆಗೆ ಇದು ಹೇಳಿಮಾಡಿಸಿದ ಸಾಧನ. ಆದರೆ, ಅಡುಗೆಯಾದ ನಂತರ ಗ್ಯಾಸ್ ಸ್ಟವ್ ತೊಳೆಯುವಂತೆ ಇಂಡಕ್ಷನ್ ಸ್ಟವ್ ತೊಳೆಯಲು ಹೋದರೆ ಅದು ಶಾಶ್ವತವಾಗಿ ಹಾಳಾಗುವ ಅಪಾಯವಿರುತ್ತದೆ. ಏಕೆಂದರೆ ಇದು ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದರ ನಿರ್ವಹಣೆಗೆ ವಿಶೇಷ ಎಚ್ಚರಿಕೆ ಅಗತ್ಯ. ಆದ್ದರಿಂದ ಇಂಡಕ್ಷನ್ ಸ್ಟವ್ ಸ್ವಚ್ಛಗೊಳಿಸುವಾಗ ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸರಿಯಾದ ವಿಧಾನ ಇಲ್ಲಿದೆ..
26
ಬಿಸಿ ಇರುವಾಗಲೇ ಒರೆಸಬೇಡಿ
ಬಿಸಿ ಇರುವಾಗಲೇ ಒರೆಸಬೇಡಿ ಅಡುಗೆ ಮಾಡಿದ ತಕ್ಷಣ ಇಂಡಕ್ಷನ್ ಗ್ಲಾಸ್ ಅತಿಯಾಗಿ ಬಿಸಿಯಾಗಿರುತ್ತದೆ. ಆ ಸಮಯದಲ್ಲಿ ತಣ್ಣೀರು ಅಥವಾ ಒದ್ದೆ ಬಟ್ಟೆ ಮುಟ್ಟಿಸಿದರೆ ‘ಉಷ್ಣಾಘಾತ’ (Thermal Shock) ಉಂಟಾಗಿ, ಮೇಲಿರುವ ದುಬಾರಿ ಸೆರಾಮಿಕ್ ಗ್ಲಾಸ್ ಬಿರುಕು ಬಿಡುವ (ಒಡೆಯುವ) ಸಾಧ್ಯತೆ ಇರುತ್ತದೆ. ಹೀಟ್ ಇಂಡಿಕೇಟರ್ ಆಫ್ ಆಗಿ, ಗ್ಲಾಸ್ ಸಂಪೂರ್ಣ ತಣ್ಣಗಾಗುವವರೆಗೆ ಕಾಯಿರಿ.
36
ನೇರವಾಗಿ ನೀರು ಸುರಿಯಬೇಡಿ
ನೇರವಾಗಿ ನೀರು ಸುರಿಯಬೇಡಿ ಇದು ಎಲೆಕ್ಟ್ರಾನಿಕ್ ಡಿವೈಸ್ ಆಗಿರುವುದರಿಂದ ನೀರು ಸುರಿದು ತೊಳೆಯಬಾರದು. ಸಣ್ಣ ರಂಧ್ರಗಳ ಮೂಲಕ ನೀರು ಒಳಗಿನ ಸರ್ಕ್ಯೂಟ್ ಬೋರ್ಡ್‌ಗೆ ಇಳಿದರೆ ಮಷಿನ್ ಶಾರ್ಟ್ ಸರ್ಕ್ಯೂಟ್ ಆಗಿ ಸಂಪೂರ್ಣ ಕೆಟ್ಟುಹೋಗುತ್ತದೆ.
ಸ್ಟೀಲ್ ಸ್ಕ್ರಬ್ಬರ್ ಬಳಸಬೇಡಿ ಜಿಡ್ಡು ತೆಗೆಯಲು ಸ್ಟೀಲ್ ನಾರು ಅಥವಾ ಗಟ್ಟಿಯಾದ ಪ್ಲಾಸ್ಟಿಕ್ ಸ್ಕ್ರಬ್ಬರ್ ಬಳಸಿದರೆ ಗ್ಲಾಸ್ ಮೇಲೆ ಶಾಶ್ವತವಾದ ಗೀರುಗಳು (Scratches) ಬೀಳುತ್ತವೆ.
56
ಅಮೋನಿಯಾ ಇರುವ ಗ್ಲಾಸ್ ಕ್ಲೀನರ್ ಬೇಡ
ಅಮೋನಿಯಾ ಇರುವ ಗ್ಲಾಸ್ ಕ್ಲೀನರ್ ಬೇಡ ಸಾಮಾನ್ಯ ಕಿಟಕಿ ಗ್ಲಾಸ್ ಕ್ಲೀನರ್‌ಗಳಲ್ಲಿ ಅಮೋನಿಯಾ ಇರುತ್ತದೆ. ಇದನ್ನು ಇಂಡಕ್ಷನ್ ಮೇಲೆ ಬಳಸಿದರೆ, ನಂತರ ಬಿಸಿಯಾದಾಗ ಗ್ಲಾಸ್ ಮೇಲೆ ಕಲೆಗಳು ಉಳಿದು ಹೊಳಪು ಹಾಳಾಗುತ್ತದೆ.
66
ಇಂಡಕ್ಷನ್ ಸ್ಟವ್ ಸ್ವಚ್ಛಗೊಳಿಸುವ ಸರಿಯಾದ & ಸುರಕ್ಷಿತ ವಿಧಾನ
ಇಂಡಕ್ಷನ್ ಸ್ಟವ್ ಸ್ವಚ್ಛಗೊಳಿಸುವ ಸರಿಯಾದ & ಸುರಕ್ಷಿತ ವಿಧಾನ ಪ್ಲಗ್ ತೆಗೆಯಿರಿ: ಸ್ವಚ್ಛಗೊಳಿಸುವ ಮುನ್ನ ಮೊದಲು ಸ್ವಿಚ್ ಆಫ್ ಮಾಡಿ ಪ್ಲಗ್ ಅನ್ನು ಸಾಕೆಟ್‌ನಿಂದ ಹೊರತೆಗೆಯಿರಿ.
ಬೇಕಿಂಗ್ ಸೋಡಾ & ವಿನೆಗರ್ : ಇಂಡಕ್ಷನ್ ಮೇಲಿರುವ ಜಿಡ್ಡು ಮತ್ತು ಸೀದುಹೋದ ಕಲೆಗಳ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ (ಅಡುಗೆ ಸೋಡಾ) ಉದುರಿಸಿ. ನಂತರ ಸಮಪ್ರಮಾಣದ ನೀರು ಮತ್ತು ವಿನೆಗರ್ ಬೆರೆಸಿದ ದ್ರಾವಣವನ್ನು ಸೋಡಾದ ಮೇಲೆ ಲಘುವಾಗಿ ಸ್ಪ್ರೇ ಮಾಡಿ. ಇದು ನೊರೆ ಉಂಟುಮಾಡಿ ಗಟ್ಟಿಯಾದ ಜಿಡ್ಡನ್ನು ಸಡಿಲಗೊಳಿಸುತ್ತದೆ. 2 ನಿಮಿಷ ಹಾಗೆಯೇ ಬಿಡಿ.
ಮೃದುವಾದ ಮೈಕ್ರೋಫೈಬರ್ ಬಟ್ಟೆ ಬಳಸಿ: ತೇವವಾದ ಮೃದುವಾದ ಸ್ಪಾಂಜ್ ಅಥವಾ ಮೈಕ್ರೋಫೈಬರ್ ಬಟ್ಟೆಯಿಂದ (Microfiber Cloth) ವೃತ್ತಾಕಾರದಲ್ಲಿ ಮೃದುವಾಗಿ ಉಜ್ಜಿ ಕೊಳೆಯನ್ನು ತೆಗೆಯಿರಿ.
ಒಣ ಬಟ್ಟೆಯಿಂದ ಪಾಲಿಶ್ ಮಾಡಿ: ಕೊನೆಯಲ್ಲಿ ಒಂದು ಒಣ ಮೈಕ್ರೋಫೈಬರ್ ಬಟ್ಟೆಯಿಂದ ನೀರಿನಾಂಶವಿಲ್ಲದಂತೆ ಒರೆಸಿದರೆ, ನಿಮ್ಮ ಇಂಡಕ್ಷನ್ ಒಲೆ ಯಾವುದೇ ಗೀರುಗಳಿಲ್ಲದೆ ಹೊಸದರಂತೆ ಥಳಥಳನೆ ಹೊಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.