ಮಲ್ಲಿಗೆ ಇಡ್ಲಿಯಷ್ಟು ಮೃದುವಾದ ಮಟನ್ ಬೇಯಿಸಲು ಪುಟ್ಟ ಪ್ಲೇಟ್‌ನಿಟ್ಟು ನೀರು ಸೇರಿಸಿ!

Published : Sep 27, 2026, 03:46 PM IST

ಮಟನ್ ಬೇಗ ಮತ್ತು ಮೃದುವಾಗಿ ಬೇಯಲು ತಣ್ಣೀರಿನ ಬದಲು ಬಿಸಿನೀರನ್ನು ಬಳಸಬೇಕು. ಕುಕ್ಕರ್‌ನಲ್ಲಿ ಬೇಯಿಸುವಾಗ ಹಾಗೂ ಮಸಾಲೆ ಸೇರಿಸುವಾಗಲೂ ಬಿಸಿನೀರನ್ನೇ ಉಪಯೋಗಿಸುವುದರಿಂದ ಗ್ಯಾಸ್ ಮತ್ತು ಸಮಯ ಉಳಿಯುತ್ತದೆ. ಈ ಸಾಂಪ್ರದಾಯಿಕ ವಿಧಾನದಿಂದ ಮಾಂಸವು ಮಸಾಲೆಯನ್ನು ಹೀರಿಕೊಂಡು ರುಚಿಯಾಗುತ್ತದೆ.

PREV
15
ಮಟನ್ ಕುದಿಸುವ ಸಾಂಪ್ರದಾಯಿಕ ವಿಧಾನ

ಚಿಕನ್‌ಗಿಂತಲೂ ಮಟನ್ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸರಿಯಾಗಿ ಕ್ರಮಬದ್ಧ ರೀತಿಯಲ್ಲಿ ಮಟನ್ ಬೇಯಿಸಿದ್ರೆ ಹೆಚ್ಚು ಸಮಯ ಬೇಕಾಗಲ್ಲ. ಇದೇ ವೇಳೆ ಕೆಲವೊಮ್ಮೆ ಮಟನ್ ಅಡುಗೆ ಮಾಡುವಾಗ ಮಾಡುವ ತಪ್ಪುಗಳು ಸಹ ಹೆಚ್ಚು ಸಮಯಕ್ಕೆ ಕಾರಣವಾಗುತ್ತದೆ. ಇಂದು ನಾವು ನಿಮಗೆ ಹೇಳುವ ಈ ವಿಧಾನಗಳನ್ನು ಅನುಸರಿಸಿದ್ರೆ ಕಡಿಮೆ ಸಮಯದಲ್ಲಿಯೇ ಮಟನ್ ಬೇಯಿಸಬಹುದು.

25
ಮಲ್ಲಿಗೆ ಇಡ್ಲಿಯಷ್ಟು ಸಾಫ್ಟ್ ಆಗುತ್ತೆ ಮಟನ್

ಈ ವಿಧಾನಗಳನ್ನು ಅನುಸರಿಸಿದ್ರೆ ಮಟನ್ ಬೇಯಿಸಿದ್ರೆ ಮಲ್ಲಿಗೆ ಇಡ್ಲಿಯಂತೆ ಮೃದುವಾಗಿರುತ್ತದೆ. ಹಾಗೆಯೇ ಮಾಂಸವೂ ಎಲ್ಲಾ ಮಸಾಲೆಯನ್ನು ಹೀರಿಕೊಂಡು ಅದ್ಭುತವಾದ ರುಚಿಯನ್ನು ನೀಡುತ್ತದೆ. ಮಟನ್ ಬೇಯಿಸೋದರಿಂದ ಹಿಡಿದು ಅಂತಿಮವರೆಗೆ ಏನೆಲ್ಲಾ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

35
ಮಟನ್ ಬೇಯಿಸುವ ವಿಧಾನಗಳು

ಮಾರುಕಟ್ಟೆಯಿಂದ ತಂದ ಮಟನ್‌ನ್ನು ಬಿಸಿನೀರಿನಲ್ಲಿಯೇ ತೊಳೆದುಕೊಂಡು ನಿಮಗೆ ಬೇಕಾದ ಸೈಜ್‌ನಲ್ಲಿ ಕತ್ತರಿಸಿಕೊಳ್ಳಬೇಕು. ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳುತ್ತಿದ್ರೆ ಮಟನ್ ಹಾಕಿಕೊಂಡ ನಂತರ ಇದಕ್ಕೆ ಬಿಸಿನೀರನ್ನೇ ಸೇರಿಸಿಕೊಳ್ಳಬೇಕು. ನಂತರ ಚಿಟಿಕೆ ಅರಿಶಿನ, ಉಪ್ಪು ಸೇರಿಸಿಕೊಂಡು ಎರಡರಿಂದ ಮೂರು ಕೂಗು ಕೂಗಿಸಿಕೊಳ್ಳಿ.

45
ತಣ್ಣೀರು ಬೇಡವೇ ಬೇಡ!

ಕುಕ್ಕರ್‌ನಿಂದ ಬೇಯಿಸಿಕೊಂಡ ಮಾಂಸನವನ್ನು ಅಗಲವಾದ ಪಾತ್ರೆ ಅಥವಾ ಬಾಣಲೆಗೆ ಹಾಕಿಕೊಳ್ಳಿ. ನಂತರ ಮಾಂಸದ ಮೇಲೆ ಸಣ್ಣದಾದ ತಟ್ಟೆಯನ್ನಿಟ್ಟುಕೊಂಡು ಅದಕ್ಕೆ ನೀರು ಸೇರಿಸಿಕೊಳ್ಳಿ. ಈ ನೀರು ಬಿಸಿಯಾದ ನಂತರವೇ ಮಾಂಸದಡುಗೆಗೆ ಸೇರಿಸಿಕೊಳ್ಳಬೇಕು. ಮಟನ್ ಅಡುಗೆ ಮಾಡುವಾಗ ನೀರು ಸೇರಿಸಿಕೊಳ್ಳುವ ಸಮಯ ಬಂದಾಗೆಲ್ಲಾ ಈ ರೀತಿ ಮಾಡೋದರಿಂದ ಸಮಯದ ಜೊತೆ ಗ್ಯಾಸ್ ಸಹ ಉಳಿತಾಯವಾಗುತ್ತದೆ.

55
ಬಿಸಿನೀರಿನಲ್ಲಿಯೇ ಮಸಾಲೆ ಮಿಕ್ಸ್ ಮಾಡಿಕೊಳ್ಳಿ!

ಹಾಗೆಯೆ ಮಟನ್ ಅಡುಗೆಗೇ ಸೇರಿಸಿಕೊಳ್ಳಬೇಕಾದ ತೆಂಗಿನಕಾಯಿ, ಬೆಳ್ಳುಳ್ಳಿ, ಕೋತಂಬರಿ ಮತ್ತು ಶುಂಠಿ ಮಸಾಲೆಯನ್ನು ಸಹ ಮೊದಲು ಬಿಸಿನೀರಿನಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರವಷ್ಟೇ ಮಟನ್‌ಗೆ ಸೇರಿಸಿಕೊಳ್ಳಬೇಕು. ಕೆಲವರು ಮಟನ್ ಬೇಯಿಸುತ್ತಿರುವ ಪಾತ್ರೆ ಮೇಲೆ ಅಗಲ ಮತ್ತು ಆಳವಾದ ಪಾತ್ರೆಯನ್ನಿಟ್ಟುಕೊಳ್ಳುತ್ತಾರೆ. ನಂತರ ಈ ಪಾತ್ರೆಗೆ ನೀರು ಹಾಕುತ್ತಾರೆ.

ನೀರು ಬಿಸಿಯಾಗ್ತಿದ್ದಂತೆ ರುಬ್ಬಿಕೊಂಡಿರುವ ಮಸಾಲೆ ಸೇರಿಸುತ್ತಾರೆ. ಪಾತ್ರೆಯೊಳಗೆ ಮಟನ್ ಬೇಯುತ್ತಿದ್ದರೆ ಮೇಲಿನ ಪಾತ್ರೆಯಲ್ಲಿ ಮಸಾಲೆ ಬೇಯುತ್ತಿರುತ್ತದೆ. ಮಸಾಲೆ ಕುದಿಯಲು ಆರಂಭಿಸುತ್ತಿದ್ದಂತೆ ಅದನ್ನು ಮಟನ್ ಜೊತೆ ಸೇರಿಸಿಕೊಳ್ಳಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories