ಮೊದಲಿಗೆ ಚಹಾದಿಂದ ಉಳಿದಿರುವ ಶುಂಠಿ ಚಟ್ನಿ ತೆಗೆದಿಡಿ. ಅದರಲ್ಲಿ ಚಹಾಪುಡಿ ಅಥವಾ ಚಹಾದ ಎಲೆಗಳಿದ್ದರೆ ಬೇರ್ಪಡಿಸಿ. ಬಳಿಕ ಶುಂಠಿಯನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಬಳಿಕ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. ಶುಂಠಿ ಸಾಕಷ್ಟು ಮೆತ್ತಗಾಗಿದ್ದರೆ ಅದನ್ನ ನೇರವಾಗಿಯೇ ಬಳಸಬಹುದು. ಚಟ್ನಿಯ ಘಮ್ಮೆನ್ನುವಂತೆ ಮಾಡಲು ಅದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ ಈ ಎಲ್ಲವನ್ನು ಸೇರಿಸಿ ಪಕ್ಕಕ್ಕಿಡಿ.
ಈ ತೆಗೆದಿಟ್ಟ ಶುಂಠಿಗೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಹುರಿದ ಜೀರಿಗೆ, ನಿಂಬೆ ರಸ ಸೇರಿಸಿ. ನಿಮಗೆ ಸ್ವಲ್ಪ ಹುಳಿ ಬೇಕೆಂದರೆ ನೀವು ನಿಂಬೆಯ ರಸ ಹೆಚ್ಚಿಗೆ ಹಾಕಬಹುದು. ಅದಿಲ್ಲದಿದ್ರೆ ಹುಣಸೆ ರಸವೂ ಒಳ್ಳೆಯ ಟೇಸ್ಟಿ ಇರುತ್ತೆ.
ಎಲ್ಲ ಪದಾರ್ಥ ಒಟ್ಟಿಗೆ ಸೇರಿಸಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿ
ಈಗ ರೆಡಿಯಾದ ಎಲ್ಲ ಪದಾರ್ಥ ಒಟ್ಟಿಗೆ ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ಚಟ್ನಿಯನ್ನು ತುಂಬಾ ತೆಳುವಾಗಿ ಮಾಡಬೇಡಿ; ಸ್ವಲ್ಪ ದಪ್ಪವಾಗಿದ್ದರೆ ರುಚಿ ಚೆನ್ನಾಗಿರುತ್ತದೆ. ಸ್ವಲ್ಪ ನೀರು ಬೆರಸಿ. ಮಿಕ್ಸರ್‌ನಲ್ಲ ಚಟ್ನಿಯನ್ನು ರುಬ್ಬಿದ ನಂತರ, ಅದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮೇಲೆ ಸ್ವಲ್ಪ ನಿಂಬೆ ರಸ ಅಥವಾ ಹುರಿದ ಜೀರಿಗೆ ಉದುರಿಸಿ. ಇದು ಶುಂಠಿ ಚಟ್ನಿಗೆ ರುಚಿ ಇನ್ನಷ್ಟು ಹೆಚ್ಚಿಸುತ್ತದೆ.
ಈಗ ಶುಂಠಿ ಚಟ್ನಿ ರೆಡಿ, ಇದನ್ನ ಎಲ್ಲ ರೀತಿಯ ಊಟಕ್ಕೂ ಬಳಸಬಹುದು. ಅದರಲ್ಲೂ ಪರಾಠಾ, ಪಕೋಡಾ, ಸಮೋಸಾ, ಬಿಸಿ ಬಿಸಿ ಅನ್ನದೊಂದಿಗೂ ತಿನ್ನಬಹುದು. ನೀವು ಹೆಚ್ಚು ಖಾರ ತಿನ್ನುವವರಾದರೆ ಈ ಚಟ್ನಿ ನಿಮ್ಮ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚಹಾ ಮಾಡಿದ ನಂತರ ಉಳಿದಿರುವ ಶುಂಠಿಯು ಖಾಲಿಯಾಗುತ್ತದೆ ಕಸದ ಬುಟ್ಟಿಗೆ ಎಸೆಯಬೇಕಿಲ್ಲ. ಊಟಕ್ಕೆ ಚಟ್ನಿಯೂ ಸಿಕ್ಕಂತಾಯ್ತು!