ಫ್ರಿಡ್ಜ್ ಡೋರ್‌ನಲ್ಲಿ ತಾಪಮಾನದ ಬದಲಾವಣೆ ಹೆಚ್ಚಾಗಿರುವುದರಿಂದ ಯಾವ ವಸ್ತುಗಳನ್ನು ಇರಿಸಬೇಕು ಮತ್ತು ಯಾವುದನ್ನು ಇರಿಬಾರದು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಈ ಕುರಿತಾದ ಮಾಹಿತಿಯನ್ನು ಲೇಖನ ಒಳಗೊಂಡಿದೆ.
ಮನೆಯಲ್ಲಿ ಬಳಸುವ ಫ್ರಿಡ್ಜ್‌ನಲ್ಲಿ ಪ್ರತಿಯೊಂದು ವಸ್ತುವನ್ನು ಸರಿಯಾದ ಜಾಗದಲ್ಲಿ ಇಡುವುದು ಬಹಳ ಮುಖ್ಯ. ಅದರಲ್ಲೂ, ಅನೇಕರು ಹಾಲು, ಮೊಟ್ಟೆಯಂತಹ ವಸ್ತುಗಳನ್ನು ಸುಲಭವಾಗಿ ಸಿಗುತ್ತದೆ ಎಂದು ಫ್ರಿಡ್ಜ್ ಡೋರ್‌ನಲ್ಲಿ ಇಡುತ್ತಾರೆ. ಆದರೆ, ಫ್ರಿಡ್ಜ್‌ನ ಇತರ ಭಾಗಗಳಿಗೆ ಹೋಲಿಸಿದರೆ, ಡೋರ್ ಭಾಗದಲ್ಲಿ ತಾಪಮಾನದ ಬದಲಾವಣೆ ಹೆಚ್ಚಾಗಿರುತ್ತದೆ.
ಹೀಗಾಗಿ, ಬೇಗನೆ ಹಾಳಾಗುವ ಆಹಾರಗಳನ್ನು ಅಲ್ಲಿ ಇಡುವುದು ಸರಿಯಾದ ಕ್ರಮವಲ್ಲ. ಹಾಗಾಗಿ, ಫ್ರಿಡ್ಜ್ ಡೋರ್‌ನಲ್ಲಿ ಹೆಚ್ಚು ಕಾಲ ಕೆಡದೆ ಇರುವ ವಸ್ತುಗಳನ್ನು ಮಾತ್ರ ಇಡುವುದು ಉತ್ತಮ.
25
ಈ ಆಹಾರಗಳನ್ನು ಇರಿಸಬಹುದು
ಸಾಸ್ ಮತ್ತು ಕಾಂಡಿಮೆಂಟ್ಸ್: ಕೆಚಪ್, ಮಸ್ಟರ್ಡ್, ಸೋಯಾ ಸಾಸ್, ಮಯೋನೈಸ್, ಸಲಾಡ್ ಡ್ರೆಸ್ಸಿಂಗ್‌ನಂತಹ ವಸ್ತುಗಳನ್ನು ನೀವು ಡೋರ್ ಭಾಗದಲ್ಲಿ ಇಡಬಹುದು. ಇವುಗಳಲ್ಲಿ ಉಪ್ಪು, ಸಕ್ಕರೆ, ವಿನೆಗರ್‌ನಂತಹ ಸಂರಕ್ಷಕಗಳು ಇರುವುದರಿಂದ, ಸಣ್ಣ ಪ್ರಮಾಣದ ತಾಪಮಾನ ಬದಲಾವಣೆಗಳನ್ನು ಇವು ತಡೆದುಕೊಳ್ಳುತ್ತವೆ.
ಉಪ್ಪಿನಕಾಯಿ, ಜಾಮ್: ಉಪ್ಪಿನಕಾಯಿ, ಜಾಮ್‌ಗಳನ್ನು ದೀರ್ಘಕಾಲ ಬಳಸುವಂತೆ ತಯಾರಿಸಲಾಗಿರುತ್ತದೆ. ಹಾಗಾಗಿ ಇವುಗಳನ್ನು ಫ್ರಿಡ್ಜ್ ಡೋರ್‌ನಲ್ಲಿ ಇಡುವುದು ಸೂಕ್ತ. ಆಗಾಗ ಬಳಸುವವರಿಗೆ ಇಲ್ಲಿ ಇಟ್ಟರೆ ಸುಲಭವಾಗಿ ಸಿಗುತ್ತದೆ.
35
ಈ ಆಹಾರಗಳನ್ನು ಇರಿಸಬಹುದು
ತಂಪು ಪಾನೀಯಗಳು ಮತ್ತು ಜ್ಯೂಸ್: ನೀರಿನ ಬಾಟಲಿಗಳು, ಕೆಲವು ಬಗೆಯ ಜ್ಯೂಸ್ ಮತ್ತು ತಂಪು ಪಾನೀಯಗಳನ್ನು ಡೋರ್ ರ್ಯಾಕ್‌ನಲ್ಲಿ ಇಡಬಹುದು. ಇವುಗಳನ್ನು ಪದೇ ಪದೇ ತೆಗೆದು ಬಳಸುವುದರಿಂದ ಡೋರ್ ಭಾಗವು ಅನುಕೂಲಕರವಾಗಿರುತ್ತದೆ.
ಬೆಣ್ಣೆ ಮತ್ತು ಕೆಲವು ಸ್ಪ್ರೆಡ್‌ಗಳು: ಬೆಣ್ಣೆ, ಪೀನಟ್ ಬಟರ್‌ನಂತಹ ವಸ್ತುಗಳನ್ನು ಅವುಗಳ ಲೇಬಲ್‌ನಲ್ಲಿ ಸೂಚಿಸಿರುವ ಶೇಖರಣಾ ವಿಧಾನಗಳನ್ನು ಅನುಸರಿಸಿ ಡೋರ್ ಭಾಗದಲ್ಲಿ ಇಡಬಹುದು.
ಹಾಲು: ನೀವು ಫ್ರಿಡ್ಜ್ ತೆರೆದಾಗಲೆಲ್ಲಾ ಡೋರ್ ಭಾಗದ ತಾಪಮಾನ ಬದಲಾಗಬಹುದು. ಆದ್ದರಿಂದ, ಹಾಲಿನಂತಹ ಬೇಗನೆ ಕೆಟ್ಟುಹೋಗುವ ವಸ್ತುಗಳನ್ನು ಫ್ರಿಡ್ಜ್‌ನ ಒಳಗಿನ ತಂಪಾದ ಜಾಗದಲ್ಲಿ ಇಡುವುದು ಉತ್ತಮ.
ಮೊಟ್ಟೆ: ಫ್ರಿಡ್ಜ್ ಡೋರ್‌ನಲ್ಲಿ ಮೊಟ್ಟೆ ಇಡಲು ಜಾಗ ಇರುವುದರಿಂದ, ಹೆಚ್ಚಿನವರು ಅಲ್ಲಿಯೇ ಮೊಟ್ಟೆಗಳನ್ನು ಇಡುತ್ತಾರೆ. ಆದರೆ, ಡೋರ್ ಪದೇ ಪದೇ ತೆರೆಯುವುದರಿಂದ ಉಂಟಾಗುವ ತಾಪಮಾನ ಬದಲಾವಣೆಯನ್ನು ತಪ್ಪಿಸಲು, ಮೊಟ್ಟೆಗಳನ್ನು ಫ್ರಿಡ್ಜ್‌ನ ಒಳಭಾಗದಲ್ಲಿ ಇಡುವುದು ಸುರಕ್ಷಿತ.
55
ಈ ಆಹಾರಗಳನ್ನು ಇಡಬೇಡಿ!
ಹಸಿ ಮಾಂಸ ಮತ್ತು ಮೀನು: ಮಾಂಸ, ಮೀನಿನಂತಹ ಬೇಗನೆ ಕೆಡುವ ಆಹಾರಗಳಿಗೆ ಸ್ಥಿರವಾದ ತಂಪಾದ ವಾತಾವರಣ ಬೇಕು. ಆದ್ದರಿಂದ, ಇವುಗಳನ್ನು ಡೋರ್‌ನಲ್ಲಿ ಇಡುವುದನ್ನು ತಪ್ಪಿಸುವುದು ಒಳ್ಳೆಯದು. ಇವು ಸೋರದಂತೆ ಮುಚ್ಚಿದ ಪಾತ್ರೆಯಲ್ಲಿಟ್ಟು ಕೆಳಗಿನ ಟ್ರೇನಲ್ಲಿ ಸಂಗ್ರಹಿಸಿ.
ಸೊಪ್ಪು ಮತ್ತು ತರಕಾರಿಗಳು: ಸೊಪ್ಪು, ಕೆಲವು ತರಕಾರಿಗಳನ್ನು ಡೋರ್ ರ್ಯಾಕ್‌ನಲ್ಲಿ ಇಡುವುದನ್ನು ತಪ್ಪಿಸಬೇಕು. ಇವುಗಳಿಗಾಗಿಯೇ ಫ್ರಿಡ್ಜ್‌ನಲ್ಲಿರುವ ತರಕಾರಿ ಶೇಖರಣಾ ಬಾಕ್ಸ್ ಬಳಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.