ಅಡುಗೆ ಮಾಡುವಾಗ ಕೈ ಮೇಲೆ ಬಿಸಿ ಎಣ್ಣೆ, ಚಹಾ ಬಿತ್ತಾ? ಭಯ ಬೇಡ… ತಕ್ಷಣ ಇದನ್ನ ಮಾಡಿ

Published : Aug 06, 2026, 05:17 PM IST

First Aid Tips: ಬಿಸಿ ಎಣ್ಣೆ, ಚಹಾ ಅಥವಾ ಕಾಫಿಯಿಂದ ಕೈ ಅಥವಾ ದೇಹ ಸುಟ್ಟರೆ ತಕ್ಷಣ ಏನು ಮಾಡಬೇಕು? ಸುಟ್ಟ ಗಾಯದ ನೋವು ಕಡಿಮೆ ಮಾಡುವ ಸರಿಯಾದ ಪ್ರಥಮ ಚಿಕಿತ್ಸೆ, ತಪ್ಪಿಸಬೇಕಾದ ತಪ್ಪುಗಳು ಹಾಗೂ ಕಪ್ಪು ಗುರುತು ಕಡಿಮೆ ಮಾಡುವ ಸರಳ ಮನೆಮದ್ದುಗಳನ್ನು ಇಲ್ಲಿ ತಿಳಿಯಿರಿ.

PREV
15
ಅಡುಗೆ ಮಾಡುವಾಗ ಸುಟ್ಟ ಗಾಯ ಆಗಿದ್ಯಾ?

ಅಡುಗೆ ಮಾಡುವಾಗ ಕೆಲವೊಮ್ಮೆ ಅಜಾಗರೂಕತೆಯಿಂದ ಬಿಸಿ ಎಣ್ಣೆ, ಚಹಾ ಅಥವಾ ಕಾಫಿಯ ಪಾತ್ರೆ ಕೈ, ಕಾಲು ಅಥವಾ ದೇಹದ ಇತರ ಭಾಗಗಳ ಮೇಲೆ ಬೀಳಬಹುದು. ಇದರಿಂದ ತೀವ್ರ ಸುಟ್ಟ ನೋವು, ಗಾಯ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗಾಬರಿಯಾಗುವ ಬದಲು ಸರಿಯಾದ ಪ್ರಥಮ ಚಿಕಿತ್ಸೆ ನೀಡಿದರೆ ನೋವನ್ನು ಕಡಿಮೆ ಮಾಡಬಹುದು ಮತ್ತು ಗಾಯ ಗಂಭೀರವಾಗುವುದನ್ನು ತಡೆಯಬಹುದು.

25
ಸುಟ್ಟ ತಕ್ಷಣ ಜನರು ಮಾಡುವ ಸಾಮಾನ್ಯ ತಪ್ಪುಗಳು

ಬಿಸಿ ಎಣ್ಣೆ ಅಥವಾ ಚಹಾ ಬಿದ್ದ ತಕ್ಷಣ ಹಲವರು ಸುಟ್ಟ ಭಾಗವನ್ನು ಬಟ್ಟೆಯಿಂದ ಒರೆಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಚರ್ಮಕ್ಕೆ ಮತ್ತಷ್ಟು ಹಾನಿಯಾಗಬಹುದು ಹಾಗೂ ಗಾಯದ ಗುರುತು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ತಕ್ಷಣ ಟೂತ್‌ಪೇಸ್ಟ್, ತುಪ್ಪ, ಎಣ್ಣೆ ಅಥವಾ ವಿವಿಧ ಕ್ರೀಮ್‌ಗಳನ್ನು ಹಚ್ಚುತ್ತಾರೆ. ಆದರೆ ಎಲ್ಲ ರೀತಿಯ ಸುಟ್ಟ ಗಾಯಗಳಿಗೆ ಇವು ಸೂಕ್ತವಲ್ಲ.

35
ಸುಟ್ಟಾಗ ತಕ್ಷಣ ಏನು ಮಾಡಬೇಕು?
  • ಸುಟ್ಟ ಭಾಗವನ್ನು ತಕ್ಷಣ 15 ರಿಂದ 20 ನಿಮಿಷಗಳ ಕಾಲ ತಣ್ಣನೆಯ ಹರಿಯುವ ನೀರಿನ ಕೆಳಗೆ ಇಡಿ. ಇದರಿಂದ ಚರ್ಮದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ನೋವು ತಗ್ಗುತ್ತದೆ.
  • ಸುಟ್ಟ ಭಾಗದ ಮೇಲೆ ನೇರವಾಗಿ ಐಸ್ ಇಡಬೇಡಿ. ಅತಿಯಾದ ತಂಪಿನಿಂದ ಚರ್ಮಕ್ಕೆ ಹೆಚ್ಚಿನ ಹಾನಿಯಾಗಬಹುದು.
  • ಗಾಯ ಸಣ್ಣದಾಗಿದ್ದರೆ ಸ್ವಚ್ಛವಾದ ಬಟ್ಟೆ ಅಥವಾ ಬ್ಯಾಂಡೇಜ್‌ನಿಂದ ಮುಚ್ಚಬಹುದು.
  • ಗಾಯ ಗಂಭೀರವಾಗಿದ್ದರೆ, ದೊಡ್ಡ ಗುಳ್ಳೆಗಳು ಕಂಡುಬಂದರೆ ಅಥವಾ ತೀವ್ರ ನೋವು ಇದ್ದರೆ ಮನೆಮದ್ದುಗಳ ಮೇಲೆ ಅವಲಂಬಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
45
ಸುಟ್ಟ ಗಾಯದ ಕಪ್ಪು ಗುರುತು ಕಡಿಮೆ ಮಾಡಲು ಏನು ಮಾಡಬೇಕು?

ಗಾಯ ಸಂಪೂರ್ಣವಾಗಿ ಗುಣಮುಖವಾದ ನಂತರ ಮಾತ್ರ ಮಾರ್ಕ್ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು. ಚರ್ಮದ ಆರೈಕೆ ಸರಿಯಾಗಿ ಮಾಡಿದರೆ ಕಪ್ಪು ಗುರುತು ನಿಧಾನವಾಗಿ ಕಡಿಮೆಯಾಗಬಹುದು.

55
ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
  • ಅರಿಶಿನ ಮತ್ತು ಹಾಲಿನ ಕೆನೆ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ 20 ನಿಮಿಷಗಳ ಕಾಲ ಹಚ್ಚಬಹುದು.
  • ಹಸಿ ಆಲೂಗಡ್ಡೆಯನ್ನು ತುರಿದು ದಿನಕ್ಕೆ ಎರಡು ಬಾರಿ 10 ನಿಮಿಷಗಳ ಕಾಲ ಸುಟ್ಟ ಕಲೆಯ ಮೇಲೆ ಸವರಬಹುದು.
  • ಶುದ್ಧ, ಕೆಮಿಕಲ್ ರಹಿತ ಅಲೋವೆರಾ ಜೆಲ್ ಕೂಡ ಕೆಲವು ಸಂದರ್ಭಗಳಲ್ಲಿ ಗಾಯದ ಗುರುತು ಕಡಿಮೆ ಮಾಡಲು ಸಹಾಯ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories