ಮಳೆಗಾಲ ಬಂದ್ರೆ ವಾತಾವರಣ ತಂಪಾಗುತ್ತದೆ. ಆದ್ರೆ ಅದರ ಜೊತೆಗೆ ನೊಣಗಳ ಕಾಟವೂ ಹೆಚ್ಚಾಗುತ್ತೆ. ಅಡುಗೆಮನೆ, ಡೈನಿಂಗ್ ಟೇಬಲ್ ಹಾಗೂ ಮನೆಯ ಹಲವು ಕಡೆ ನೊಣಗಳು ಕಾಣಿಸಿಕೊಳ್ತಿದ್ದರೆ ಈ ಮನೆ ಮದ್ದು ಟ್ರೈ ಮಾಡಿ.
ನೊಣಗಳು ಕೊಳೆತ ಆಹಾರ, ಕಸ ಹಾಗೂ ದುರ್ವಾಸನೆ ಇರುವ ಸ್ಥಳಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ ಅಡುಗೆಮನೆ ಮತ್ತು ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಡಿ. ಆಹಾರ ಅಥವಾ ಜ್ಯೂಸ್ ಚೆಲ್ಲಿದರೆ ತಕ್ಷಣ ಒರೆಸಿ. ಉಳಿದ ಆಹಾರವನ್ನು ಮುಚ್ಚಿಡಿ ಮತ್ತು ಕಸದ ಡಬ್ಬಿಯನ್ನು ನಿಯಮಿತವಾಗಿ ಖಾಲಿ ಮಾಡಿ.
25
ಎಸಿ ಕೂಡ ಸಹಾಯ ಮಾಡುತ್ತೆ
ನೊಣಗಳಿಗೆ ಬಿಸಿ ಮತ್ತು ತೇವಾಂಶ ಇರುವ ವಾತಾವರಣ ತುಂಬಾ ಇಷ್ಟ. ಮನೆಯೊಳಗೆ ಎಸಿ ಚಾಲನೆಯಲ್ಲಿದ್ದರೆ ತಂಪಾದ ವಾತಾವರಣದಿಂದ ನೊಣಗಳ ಚಟುವಟಿಕೆ ಕಡಿಮೆಯಾಗಬಹುದು.
35
ಉಪ್ಪು–ಕರಿಮೆಣಸಿನ ಸ್ಪ್ರೇ ಮಾಡಿ
ಎರಡು ಕಪ್ ಕುದಿಸಿದ ನೀರನ್ನು ತಣ್ಣಗಾಗಲು ಬಿಡಿ. ಅದಕ್ಕೆ ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣ ತಣ್ಣಗಾದ ನಂತರ ಸ್ಪ್ರೇ ಬಾಟಲಿಗೆ ತುಂಬಿ. ಕಿಟಕಿ, ಬಾಗಿಲು ಹಾಗೂ ನೊಣಗಳು ಹೆಚ್ಚು ಕಾಣಿಸುವ ಸ್ಥಳಗಳಲ್ಲಿ ಸಿಂಪಡಿಸಿ. ಇದು ನೊಣಗಳನ್ನು ದೂರವಿಡಲು ಸಹಾಯ ಮಾಡಬಹುದು.
ಒಂದು ಕಪ್ ನೀರಿಗೆ ಒಂದು ದೊಡ್ಡ ಚಮಚ ಒಣ ಶುಂಠಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ನೊಣಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಸಿಂಪಡಿಸಿದರೆ ನೊಣಗಳ ಕಾಟ ಕಡಿಮೆಯಾಗಬಹುದು.
55
ನಿಂತ ನೀರು
ಮಳೆಗಾಲದಲ್ಲಿ ಬಕೆಟ್, ಹೂವಿನ ಕುಂಡದ ತಟ್ಟೆ, ಸಿಂಕ್ ಅಥವಾ ಪಾತ್ರೆಗಳಲ್ಲಿ ನೀರು ನಿಂತಿದ್ದರೆ ಅದು ನೊಣಗಳು ಮತ್ತು ಇತರ ಕೀಟಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಮನೆಯಲ್ಲಿರುವ ನಿಂತ ನೀರನ್ನು ತಕ್ಷಣ ಖಾಲಿ ಮಾಡಿ. ಈ ಸರಳ ಮನೆಮದ್ದುಗಳು ಮಳೆಗಾಲದಲ್ಲಿ ನೊಣಗಳ ಕಾಟವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತೆ, ನೊಣಗಳ ಸಮಸ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದರೆ ಅಥವಾ ಆರೋಗ್ಯದ ಸಮಸ್ಯೆ ಕಾಡಿದ್ರೆ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.