Kannada Kitchen Hacks: ಕೆಲವೊಮ್ಮೆ ತೊಗರಿಬೇಳೆ ಅಥವಾ ಕಡಲೆಬೇಳೆ ಕುಕ್ಕರ್‌ನಲ್ಲಿ ಸರಿಯಾಗಿ ಬೇಯುವುದಿಲ್ಲ, ಇದಕ್ಕೆ ಹಳೆಯ ಬೇಳೆಯೇ ಪ್ರಮುಖ ಕಾರಣ. ಆದ್ರೆ ಕೆಲವು ಸರಳ ವಿಧಾನಗಳಿಂದ ಬೇಖೆ ಬೇಯಿಸುವಂತಹ ಸಮಸ್ಯೆಯನ್ನು ಪರಿಹರಿಸಬಹುದು.
ಊಟಕ್ಕೆ ರುಚಿಯಾದ ಸಾಂಬಾರ್ ಬೇಕಿದ್ರೆ ಕಡಲೆಬೇಳೆ ಅಥವಾ ತೊಗರಿ ಬೇಳೆಯನ್ನು ಮೃದುವಾಗಿ ಬೇಯಿಸಬೇಕಾಗುತ್ತದೆ. ಅದರಲ್ಲೂ ತೊಗರಿಬೇಳೆ ಬೇಯಲು ಕೊಂಚ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ನಾಲ್ಕರಿಂದ ಐದು ವಿಷಲ್ ಕೂಗಿಸಿದ್ರೂ ಬೇಳೆ ಬೇಯಲ್ಲ. ಇದಕ್ಕೆ ಕಾರಣ ಏನು? ಬೇಳೆಯನ್ನು ಮೃದುವಾಗಿ ಬೇಯಿಸೋದು ಹೇಗೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
27
ಈ ಸಮಸ್ಯೆಗೆ ಕಾರಣ ಏನು?
ಬೇಳೆ ತುಂಬಾ ಹಳೆಯದಾಗಿದ್ರೆ ಈ ಸಮಸ್ಯೆ ಎದುರಾಗುತ್ತದೆ. ಹಳೆ ಬೇಳೆಯಲ್ಲಿನ ನೀರಿನಂಶ ಸಂಪೂರ್ಣವಾಗಿ ಆವಿಯಾಗಿ ಹೋಗಿರುತ್ತದೆ. ಇದರಿಂದ ಬೇಳೆ ಕಠಿಣವಾಗಿ ಮೂರ್ನಾಲ್ಕು ವಿಷಲ್‌ನಲ್ಲಿ ಬೇಯುವುದಿಲ್ಲ. ಕೆಲ ವಿಧಾನಗಳ ಮೂಲಕ ಬೇಳೆಯನ್ನು ಮೃದುವಾಗಿ ಬೇಯಿಸಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ.
37
ನೆನೆಸಿಟ್ಟುಕೊಳ್ಳುವುದು
ಸಾಂಬಾರ್ ಮಾಡುವ ಮೊದಲೇ ಅಂದ್ರೆ ಕನಿಷ್ಠ 40 ರಿಂದ 1 ಗಂಟೆ ಮುಂಚೆಯೇ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ಇಲ್ಲವಾದ್ರೆ ಬಿಸಿನೀರಿನಲ್ಲಿ ಕನಿಷ್ಠ 15 ರಿಂದ 20 ನಿಮಿಷ ಬೇಳೆಯನ್ನು ನೆನೆಸಿಟ್ಟುಕೊಂಡ್ರೆ ಎರಡ್ಮೂರು ವಿಷಲ್‌ನಲ್ಲಿಯೇ ಬೇಳೆ ಸಾಫ್ಟ್ ಆಗುತ್ತದೆ.
ತೊಗರಿಬೇಳೆಯನ್ನು ಬೇಯಿಸಿಕೊಳ್ಳುವಾಗ ಒಂದು ಟೀ ಸ್ಪೂನ್‌ನಷ್ಟು ಅಡುಗೆಎಣ್ಣೆ ಹಾಕಿಕೊಳ್ಳಿ. ಅಡುಗೆಎಣ್ಣೆಯ ಕುದಿಯುವ ಸಾಮಾರ್ಥ್ಯ ಹೆಚ್ಚಾಗಿರುವ ಕಾರಣ ಬೇಳೆಯನ್ನು ಕಡಿಮೆ ಸಮಯದಲ್ಲಿ ಮೃದುವಾಗಿಸುತ್ತದೆ. ಚಿಟಿಕೆಯಷ್ಟು ಅರಿಶಿನ ಸೇರಿಸೋದರಿಂದಲೂ ಬೇಳೆ ಬೇಗ ಬೇಯುತ್ತದೆ.
57
ಬೇಕಿಂಗ್ ಸೋಡಾ
ಇನ್ನು ಕೆಲವರು ತೊಗರಿಬೇಳೆಯನ್ನು ಬೇಯಿಸಿಕೊಳ್ಳುವಾಘ ಬೇಕಿಂಗ್ ಸೋಡಾ ಸೇರಿಸಿಕೊಳ್ಳುತ್ತಾರೆ. ಆದ್ರೆ ಇದು ಅತಿಯಾದ್ರೆ ಸಾಂಬಾರ್ ರುಚಿಯೇ ಸಂಪೂರ್ಣವಾಗಿ ಹಾಳಾಗುತ್ತದೆ. ದೊಡ್ಡಪ್ರಮಾಣದಲ್ಲಿ ಅಂದ್ರೆ ಶುಭಕಾರ್ಯ ವೇಳೆ ಕೆಜಿಗಟ್ಟಲೇ ಬೇಳೆ ಬೇಯಿಸುವಾಗ ಅರ್ಧ ಟೀ ಸ್ಪೂನ್‌ನಷ್ಟು ಬೇಕಿಂಗ್ ಸೋಡಾ ಸೇರಿಸಿಕೊಳ್ಳುತ್ತಾರೆ.
67
ಬೇಯಿಸುವಾಗ ಬೇಳೆ ಜೊತೆ ತರಕಾರಿ ಬೇಡ!
ಕೆಲವರು ಬೇಳೆ ಜೊತೆಯಲ್ಲಿ ಟೊಮೆಟೋ, ಬೀನ್ಸ್ ಸೇರಿದಂತೆಯೇ ಎಲ್ಲಾ ತರಕಾರಿಯನ್ನು ಸೇರಿಸಿಕೊಂಡು ಬೇಯಿಸಿಕೊಳ್ಳುತ್ತಾರೆ. ತರಕಾರಿಗಳೆಲ್ಲಾ ಒಂದು ವಿಷಲ್‌ನಲ್ಲಿ ಸಾಫ್ಟ್ ಆಗುತ್ತದೆ. ಆದ್ರೆ ಬೇಳೆಗೆ ಮಾತ್ರ 3-4 ವಿಷಲ್ ಬೇಕಾಗುತ್ತದೆ. ಹಾಗಾಗಿ ಬೇಳೆಯನ್ನು ಕುಕ್ಕರ್‌ಗೆ ಹಾಕಿ ಮೂರು ವಿಷಲ್ ಕೂಗಿಸಿಕೊಂಡು ನಂತರ ನಿಮಗೆ ಬೇಕಾದ ತರಕಾರಿ ಸೇರಿಸಿ ಒಂದು ವಿಷಲ್ ಕೂಗಿಸಿಕೊಳ್ಳಿ.
77
ಮಸೂರ್ ದಾಲ್
ತೊಗರಿಬೇಳೆ ಅಥವಾ ಕಡಲೆಬೇಳೆ ಬೇಯಿಸಿಕೊಳ್ಳಲು ಸಮಯವಿಲ್ಲದ ಕಾರಣ ಬಹುತೇಕರು ಕೆಂಪುಬೇಳೆ ಅಥವಾ ಮಸೂರ್ ದಾಲ್ ಬಳಕೆ ಮಾಡುತ್ತಾರೆ. ಬೇರೆ ಬೇಳೆಗಳಿಗಿಂತ ಮಸೂರ್ ದಾಲ್ ಕಡಿಮೆ ಸಮಯದಲ್ಲಿ ಅಂದ್ರೆ ಒಂದೇ ವಿಷಲ್‌ನಲ್ಲಿ ಬೇಯುತ್ತದೆ. ಆದ್ರೆ ತೊಗರಿಬೇಳೆಯ ರೀತಿಯ ರುಚಿಯನ್ನು ಮಸೂರ್ ದಾಲ್ ನೀಡಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.