lauki soup for weight loss: ಆಧುನಿಕ ಕಾಲದ ಜೀವನ ಶೈಲಿ, ಆಹಾರ ಕ್ರಮದಿಂದ ಭಾರತೀಯರಿಗೆ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತೂಕ ಇಳಿಸಲು ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ತಯಾರಿಬಹುದಾದ ಸೂಪ್ ರೆಸಿಪಿ ಇಲ್ಲಿದೆ ಇಂದೇ ಪ್ರಯತ್ನಿಸಿ
ಆಧುನಿಕ ಕಾಲದ ಜೀವನ ಶೈಲಿ, ಆಹಾರ ಕ್ರಮದಿಂದ ಭಾರತೀಯರಿಗೆ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತೂಕ ಕಡಿಮೆ ಇದ್ದಾಗ ಬೇಗನೇ ಹೆಚ್ಚಿಸಬಹುದು. ಆದರೆ ಹೆಚ್ಚಾದ ತೂಕ ಇಳಿಸಲು ತುಂಬಾ ಶ್ರಮ ಪಡಬೇಕು. ಹೀಗಾಗಿ ಶುರುವಿನಲ್ಲೇ ದೇಹದ ತೂಕ ಹೆಚ್ಚಾಗದಂತೆ ಆಹಾರ ಕ್ರಮ ನೋಡಿಕೊಳ್ಳುವುದು, ದಿನನಿತ್ಯದ ವ್ಯಾಯಮ ಮಾಡುವುದೇ ಉತ್ತಮ.
ನೀವು ಈಗಾಗಲೇ ಹೆಚ್ಚಿನ ತೂಕ ಹೊಂದಿದ್ದರೆ. ತೂಕ ಇಳಿಸಿಕೊಳ್ಳಲು ವ್ಯಾಯಾಮ ಒಂದೇ ಪರಿಹಾರವಲ್ಲ. ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ತಂದರೂ ದೇಹದ ತೂಕ ಇಳಿಯುತ್ತಿದೆ. ಇದೆ. ಸಾಮಾನ್ಯವಾಗಿ ತೂಕ ಹೆಚ್ಚಳ ಎಂದರೆ ವ್ಯಾಯಾಮ, ಜಿಮ್ ವರ್ಕೌಟ್ ಮಾಡಲು ಹೇಳುತ್ತಾರೆ. ಆದರೆ ಇದೊಂದೇ ಮಾಡುವುದರಿಂದ ದೇಹದ ತೂಕ ಇಳಿಯುವುದಿಲ್ಲ. ಹಾಗೆ ಇಳಿದರೂ ಅದು ತಾತ್ಕಾಲಿಕ ನೀವು ಶಾಶ್ವತವಾಗಿ ದೇಹದ ತೂಕದಲ್ಲಿ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕೆಂದರೆ ತಿನ್ನುವ ಆಹಾರ ಕ್ರಮದಲ್ಲಿ ಬದಲಾವಣೆಯಾಗಬೇಕು.
24
ತೂಕ ಇಳಿಸಲು ಸೋರೆಕಾಯಿ ಸೂಪ್ ಕುಡಿಯಿರಿ
ಕೆಲವರು 'ಚುಕ್ಕಿ'(Chukchi) ವಿಧಾನದಲ್ಲಿ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಇದು ದೇಹಕ್ಕೆ ಹಾನಿಯುಂಟು ಮಾಡಬಹುದು. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹದಲ್ಲಿ ನೀರಿನಾಂಶ(ಹೈಡ್ರೇಷನ್) ಸರಿಯಾದ ಪ್ರಮಾಣದಲ್ಲಿರುವುದು ಅವಶ್ಯಕ. ಯಾವ್ಯಾವುದೋ ಸಮಯದಲ್ಲಿ ಮನಸಿಗೆ ಬಂದಿದ್ದು, ಕಣ್ಣಿಗೆ ಕಂಡಿದ್ದೆಲ್ಲ ತಿನ್ನುವ ಬದಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ಬೆಳಸಿಕೊಳ್ಳಬೇಕು.
ಅದರಲ್ಲೂ ತೂಕ ಇಳಿಸುವವರು ಸೋರೆಕಾಯಿಯಿಂದ(Dudhi Bhopla) ತಯಾರಿಸಿದ ಸೂಪ್ ಕುಡಿಯಿರಿ. ಏಕೆಂದರೆ ಸೋರೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿನ ಪೊಟ್ಯಾಸಿಯಂ, ವಿಟಮಿನ್ ಸಿ, ಇತರೆ ಸೂಕ್ಷ್ಮ ಪೋಷಕಾಂಶಗಳು ಹೇರವವಾಗಿವೆ.
ದಿನನಿತ್ಯ ಊಟದಲ್ಲಿ ಈ ತರಕಾರಿಗಳಿರಲಿ
ಬೆಳಗ್ಗೆ ಚಿತ್ರಾನ್ನ, ಮಧ್ಯಾಹ್ನ ಅನ್ನ, ರಾತ್ರಿ ಅನ್ನ.. ಈ ರೀತಿ ಆಹಾರ ಕ್ರಮದಿಂದ ದೇಹದ ತೂಕ ಹೆಚ್ಚುತ್ತಲೇ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಹೀಗಾಗಿ ಮೂರು ಹೊತ್ತು ಅನ್ನ ತಿನ್ನುವ ಬದಲು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ನಿಮ್ಮ ದಿನನಿತ್ಯದ ಊಟದಲ್ಲಿ ಯಾವಾಗಲೂ ವಿವಿಧ ತರಕಾರಿ, ಸೊಪ್ಪು ಇರುವಂತೆ ನೋಡಿಕೊಳ್ಳಿ. ಇದು ಅನಗತ್ಯ ಕೊಬ್ಬು ಸೇರುವುದು ಕಡಿಮೆ ಮಾಡುತ್ತದೆ. ಕೊಬ್ಬನ್ನು ತಡೆದು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ. ಸೋರೆಕಾಯಿ ಸೂಪ್ ತಯಾರಿಸಲು ಹೆಚ್ಚು ಸಮಯನೂ ಬೇಕಿಲ್ಲ.
ಮೊದಲಿಗೆ ಸೋರೆಕಾಯಿ ಚೆನ್ನಾಗಿ ತೊಳೆಯಿರಿ. ಬಳಿಕ ಅದರ ಮೇಲಿನ ಸಿಪ್ಪೆ ತೆಗೆಯಿರಿ. ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ,
ಕತ್ತರಿಸಿದ ಸೋರೆಕಾಯಿ ತುಂಡುಗಳನ್ನು ಕುಕ್ಕರ್‌ಗೆ ಹಾಕಿ, ಅಗತ್ಯವಿರುವಷ್ಟು ನೀರು ಹಾಕಿ. ಚೆನ್ನಾಗಿ ಬೇಯಿಸಿಕೊಳ್ಳಿ.
ಸೋರೇಕಾಯಿ ಮೃದುವಾಗಿ ಬೆಂದ ನಂತರ ಅದನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ರುಬ್ಬಿದ ಸೋರೇಕಾಯಿ ಮಿಶ್ರಣ ಅದರಲ್ಲಿ ಹಾಕಿ, ಅಗತ್ಯವಿರುವಷ್ಟು ನೀರು ಸೇರಿಸಿ ಕಲಸಿ.
ಈಗ ಸೂಪ್ ಕುದಿಯಲು ಆರಂಭಿಸುತ್ತಿದ್ದಂತೆ ಧನಿಯಾ-ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ನಂತರ ಕಡಿಮೆ ಉರಿಯಲ್ಲಿ 2–3 ನಿಮಿಷ ಕುದಿಸಿ, ಗ್ಯಾಸ್ ಆಫ್ ಮಾಡಿ.
ರುಚಿಕರವಾದ ಸೋರೇಕಾಯಿ ಸೂಪ್ ರೆಡಿ!
ಕಡಿಮೆ ಕ್ಯಾಲೊರಿ ಹೊಂದಿರುವ ಈ ಸೂಪ್, ತೂಕ ಇಳಿಕೆ ಬೆಸ್ಟ್ ಆಯ್ಕೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.