ಸಾಂಬಾರ್‌ಗೆ ಹಳ್ಳಿ ಶೈಲಿಯ ರುಚಿ ತರಲು ಇಲ್ಲಿದೆ ಅಜ್ಜಿಯಂದಿರು ಬಳಸುತ್ತಿದ್ದ ಸಿಂಪಲ್ ಸೀಕ್ರೆಟ್

Published : Oct 18, 2026, 03:13 PM IST

How to increase sambar taste: ಸಾಂಬಾರ್ ಮಾಡುವಾಗ ಎಷ್ಟೇ ಮಸಾಲೆ ಹಾಕಿದರೂ ಅಜ್ಜಿಯ ಕೈರುಚಿ ಸಿಗುತ್ತಿಲ್ಲವೇ? ಹಾಗಾದರೆ ಸಾಂಬಾರ್ ಕುದಿಯುವಾಗ ಕರಿಬೇವಿನ ಎಸಳನ್ನು ಈ ರೀತಿ ಹಾಕಿ ನೋಡಿ! ರುಚಿ ಮತ್ತು ಪರಿಮಳ ದುಪ್ಪಟ್ಟಾಗುವುದು ಗ್ಯಾರಂಟಿ.

PREV
15
ಪರಂಪರಾಗತ ಸೀಕ್ರೆಟ್ ಟ್ರಿಕ್

ಪರಂಪರಾಗತ ಸೀಕ್ರೆಟ್ ಟ್ರಿಕ್
ಪ್ರತಿದಿನ ಮಾಡುವ ಸಾಂಬಾರ್ ಅಥವಾ ಬಸ್ಸಾರಿಗೆ ಎಷ್ಟೇ ಬಗೆಯ ಮಸಾಲೆಗಳನ್ನು ಹಾಕಿದರೂ ಕೆಲವೊಮ್ಮೆ ಹಳ್ಳಿಗಳಲ್ಲಿ ನಮ್ಮ ಅಜ್ಜಿಯಂದಿರು ಮಾಡುತ್ತಿದ್ದ ಆ ಹಳೆಯ ಕಾಲದ ಕಂಪು ಮತ್ತು ಅದ್ಭುತ ರುಚಿ ಸಿಗುವುದೇ ಇಲ್ಲ. ಆದರೆ, ಯಾವುದೇ ದುಬಾರಿ ಮಸಾಲೆಗಳಿಲ್ಲದೆ, ಕೇವಲ ಒಂದೇ ಒಂದು ಕರಿಬೇವಿನ ಎಸಳಿನಿಂದ ಸಾಂಬಾರ್‌ನ ಸುವಾಸನೆ ಮತ್ತು ರುಚಿಯನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಇದು ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಅಡುಗೆಮನೆಯಲ್ಲಿ ಬಳಸುತ್ತಿದ್ದ ಪರಂಪರಾಗತ ಸೀಕ್ರೆಟ್ ಟ್ರಿಕ್.

25
ಏನಿದು ಅಜ್ಜಿಯ ಕಾಲದ ಕರಿಬೇವಿನ ಟ್ರಿಕ್?

ಏನಿದು ಅಜ್ಜಿಯ ಕಾಲದ ಕರಿಬೇವಿನ ಟ್ರಿಕ್?
ಸಾಮಾನ್ಯವಾಗಿ ನಾವೆಲ್ಲರೂ ಒಗ್ಗರಣೆ ಹಾಕುವಾಗ ಎಣ್ಣೆಯಲ್ಲಿ ಕರಿಬೇವನ್ನು ಕರಿಯುತ್ತೇವೆ. ಆದರೆ ಸಾಂಬಾರ್ ಅಥವಾ ಬಸ್ಸಾರು ಕುದಿಯುವಾಗ ಈ ವಿಶೇಷ ವಿಧಾನವನ್ನು ಅನುಸರಿಸಬೇಕು..

35
ಹೀಗೆ ಮಾಡಿ...

ಹೀಗೆ ಮಾಡಿ…
ಒಂದು ತಾಜಾ ಹಸಿ ಕರಿಬೇವಿನ ಎಸಳನ್ನು (ಕಡ್ಡಿಯ ಸಮೇತ) ತೆಗೆದುಕೊಳ್ಳಿ.
ಗ್ಯಾಸ್ ಒಲೆಯ ಸಣ್ಣ ಉರಿಯಲ್ಲಿ (Low Flame) ಆ ಕರಿಬೇವಿನ ಎಸಳನ್ನು ನೇರವಾಗಿ ಒಂದೆರಡು ಸೆಕೆಂಡುಗಳ ಕಾಲ ಲಘುವಾಗಿ ಸುಟ್ಟುಕೊಳ್ಳಿ (ಕಾಯಿಸಿ).
ಹೀಗೆ ಬೆಂಕಿಯಲ್ಲಿ ಲಘುವಾಗಿ ಬಾಡಿದ ತಕ್ಷಣ, ಅದನ್ನು ನೇರವಾಗಿ ಕುದಿಯುತ್ತಿರುವ ಸಾಂಬಾರ್ ಅಥವಾ ಬಸ್ಸಾರಿನ ಒಳಗೆ ಹಾಕಿ, ತಕ್ಷಣವೇ ಪಾತ್ರೆಯ ಮುಚ್ಚಳವನ್ನು ಮುಚ್ಚಿಬಿಡಿ.

45
ಇದರಿಂದ ರುಚಿ ಹೆಚ್ಚುವುದೇಕೆ?

ಇದರಿಂದ ರುಚಿ ಹೆಚ್ಚುವುದೇಕೆ?
ಕರಿಬೇವಿನ ಎಸಳನ್ನು ನೇರವಾಗಿ ಬೆಂಕಿಯಲ್ಲಿ ಲಘುವಾಗಿ ಕಾಯಿಸಿದಾಗ, ಅದರ ಎಲೆಗಳಲ್ಲಿರುವ ನೈಸರ್ಗಿಕ ತೈಲಾಂಶ (Essential Oils) ತಕ್ಷಣ ಬಿಡುಗಡೆಯಾಗುತ್ತದೆ. ಜೊತೆಗೆ ಅದರಲ್ಲಿ ಒಂದು ರೀತಿಯ ನೈಸರ್ಗಿಕ ಸ್ಮೋಕಿ ಫ್ಲೇವರ್ (ಹೊಗೆಯ ಪರಿಮಳ) ಸೃಷ್ಟಿಯಾಗುತ್ತದೆ. ಕುದಿಯುವ ಸಾಂಬಾರಿಗೆ ಇದನ್ನು ಹಾಕಿ ಮುಚ್ಚಳ ಮುಚ್ಚಿದಾಗ, ಆ ಘಮಘಮಿಸುವ ಸಾಂಪ್ರದಾಯಿಕ ಪರಿಮಳ ಇಡೀ ಸಾಂಬಾರನ್ನು ಆವರಿಸಿಕೊಳ್ಳುತ್ತದೆ.

55
ಈ ಟ್ರಿಕ್ ಟ್ರೈ ಮಾಡಿ ನೋಡಿ!

ಈ ಟ್ರಿಕ್ ಟ್ರೈ ಮಾಡಿ ನೋಡಿ!
ವಿಶೇಷವಾಗಿ ಬಸ್ಸಾರು, ಮಜ್ಜಿಗೆ ಹುಳಿ ಮತ್ತು ಬೇಳೆ ಸಾಂಬಾರ್ ಮಾಡುವಾಗ ಈ ಸಣ್ಣ ಉಪಾಯವನ್ನು ಅನುಸರಿಸಿದರೆ, ಇಡೀ ಮನೆಯೇ ಘಮಘಮಿಸುವುದರ ಜೊತೆಗೆ ಸಾಂಬಾರ್‌ನ ರುಚಿ ನಾಲಿಗೆಯಲ್ಲಿ ಹಬ್ಬ ಸೃಷ್ಟಿಸುತ್ತದೆ. ಮುಂದಿನ ಬಾರಿ ಸಾಂಬಾರ್ ಮಾಡುವಾಗ ತಪ್ಪದೇ ಅಜ್ಜಿಯ ಕಾಲದ ಈ ಟ್ರಿಕ್ ಟ್ರೈ ಮಾಡಿ ನೋಡಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories